ಪುತ್ತೂರು : ಉಪ್ಪಿನಂಗಡಿ 34ನೇ ನೆಕ್ಕಿಲಾಡಿ ಬಳಿ ಆಕ್ಟಿವಾ ಮತ್ತು ಬೈಕ್ ನಡುವೆ ಆಪಘಾತವಾಗಿ ಗಂಭೀರ ಗಾಯಗೊಂಡ ಆಕ್ಟಿವಾ ಸವಾರನನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಗಂಭೀರ ಗಾಯಗೊಂಡ ಸವಾರನನ್ನು ದಯಾನಂದ ಪಲ್ಲತ್ತಾರು ಎಂದು ಗುರುತಿಸಲಾಗಿದೆ.
ಪುತ್ತೂರು – ಉಪ್ಪಿನಂಗಡಿ ರಸ್ತೆಯ ನೆಕ್ಕಿಲಾಡಿ ಬಾಗದಲ್ಲಿ ಚತುಷ್ಪತರಸ್ತೆಯ ಕಾಮಗಾರಿ ನಡೆಯುತ್ತಿದ್ದು ಒಂದೇ ಕಡೆಯಿಂದ ವಾಹನಗಳು ಚಲಿಸುತ್ತಿದ್ದು, ವಾಹನ ದಟ್ಟನೆಯಿಂದ, ರಸ್ತೆಯಲ್ಲಿರುವ ಗುಂಡಿ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಯಾಳು ಸವಾರನನ್ನು ಆಸ್ಪತ್ರೆ ಗೆ ದಾಖಲಿಸಲು ಪ್ರಹಲ್ಲಾದ್ ಬೆಳ್ಳಿಪಾಡಿ, ಪದ್ಮನಾಭ ಪರನೀರು ಮತ್ತಿತರರು ಸಹಕರಿಸಿದರು