ದಕ್ಷಿಣ ಕನ್ನಡ ಸಂಸ್ಕಾರ ಭಾರತಿಯ ಜಿಲ್ಲಾ ಬೈಠಕ್ ಸಭೆಯು ಪುತ್ತೂರು ವಿವೇಕಾನಂದದ ನರೇಂದ್ರ ಪಿ ಯು ಕಾಲೇಜಿನಲ್ಲಿ ನಡೆಯಿತು.
ವಿಶೇಷವಾಗಿ ಸಹಜ ಭೋಜನ ಮತ್ತು ಈ ವರ್ಷದ ಪಂಚ ಪರಿವರ್ತನೆಗಳ ಬಗ್ಗೆ ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷರಾದ ತಾರಾನಾಥ ಕೊಟ್ಟಾರಿ ತಿಳಿಸಿ ಮಾಹಿತಿ ನೀಡಿದರು. ನೂತನವಾಗಿ ಆಯ್ಕೆಯಾದ ಪ್ರಾಂತ ಉಪಾಧ್ಯಕ್ಷರಾಗಿ ರೂಪಲೇಖಾ, ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಮನ್ಮಥ ಶೆಟ್ಟಿ ಪುತ್ತೂರು ಇವರುಗಳಿಗೆ ಅಭಿನಂದನೆ ಸಲ್ಲಿಸಿಲಾಯಿತು. ಸಭೆಯಲ್ಲಿ ಸಂಸ್ಕಾರ ಭಾರತಿ ಮಂಗಳೂರು ವಿಭಾಗ ಸಂಯೋಜಕರಾದ ಮಾಧವ ಭಂಡಾರಿ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ತಾರಾನಾಥ ಕೊಟ್ಟಾರಿ, ಪ್ರಾಂತ ಉಪಾಧ್ಯಕ್ಷರಾದ ರೂಪಲೇಖಾ, ಬೆಳ್ತಂಗಡಿ ಸಂಯೋಜಕರಾದ ಸಂಪತ್ ಸುವರ್ಣ, ಪುತ್ತೂರು ಸಂಯೋಜಕ ದೀಪಕ್, ಬಂಟ್ವಾಳ ಸಂಯೋಜಕ ಅನಿಲ್ ಪಂಡಿತ್, ಜಿಲ್ಲಾ ಗೌರವಧ್ಯಕ್ಷರಾದ ಅಶೋಕ್ ಶೆಟ್ಟಿ ಸರಪಾಡಿ, ಸದಸ್ಯರಾದ ಡಾ. ವಾರಿಜ ನಿರ್ಬೈಲ್, ಪದ್ಮ ಆಚಾರ್, ನಯನ ವಿ ರೈ ಉಪಸ್ಥಿತಿರಿದ್ದರು.