ಪುತ್ತೂರು: ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಬೃಹತ್ ಕರಸೇವೆ ಇಂದು ನಡೆಯಿತು.
ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಕರಸೇವೆಯಲ್ಲಿ ಭಾಗಿವಹಿಸಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಈ ಕರಸೇವೆ ಕಾರ್ಯ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಈಶ್ವರ ಭಟ್ ಮಾತಾಡಿ, ಇವತ್ತಿನ ಈ ಒಂದು ಪುಣ್ಯ ಕರಸೇವೆ ಕಾರ್ಯಕ್ಕೆ ತಡೆ ನೀಡಲು ರಾಜೇಶ್ ಬನ್ನೂರುರವರು ಕೋರ್ಟಿಗೆ ಹೋಗಿದ್ದಾರೆ.. ‘ದೇಗುಲದ ಜಾಗದಲ್ಲಿದ್ದ ಆ ಮನೆಯಲ್ಲಿ ಮಾಡ್ಬಾರ್ದನ್ನೆಲ್ಲ ಮಾಡಿದ್ದಾರೆ – ಹೇಳಲು ನಾಚಿಕೆಯಾಗುತ್ತದೆ’..! ಪೊಲೀಸ್ ರಿಪೋರ್ಟ್ ನಲ್ಲಿ ನೋಡಿ ಆ ಮನೆಯಲ್ಲಿ ಏನೆಲ್ಲಾ ಸಿಕ್ಕಿದೆ ಅಂತಾ ಆ ಬಗ್ಗೆ ದಾಖಲೆ ತೋರಿಸುತ್ತ, ಬೇಸರ ವ್ಯಕ್ತಪಡಿಸಿದರು.
ದೇವಸ್ಥಾನದ ವಠಾರದಲ್ಲಿದ್ದ ಮನೆಗಳ ತೆರವಾದ ಬಳಿಕ ಭಕ್ತಾದಿಗಳಿಂದ ಕರಸೇವೆ ನಡೆಯುತ್ತಿದ್ದು, ದೇವಸ್ಥಾನದ ಅಭಿವೃದ್ಧಿಗಾಗಿ ಸುಮಾರು ಏಳು ಮನೆಗಳನ್ನು ನೆಲಸಮ ಮಾಡಲಾಗಿತ್ತು.ಇಂದು ಇದೇ ಜಾಗದಲ್ಲಿ ಭಕ್ತರು ಕರಸೇವೆ ನಡೆಸಿದರು.ಕರಸೇವೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಸ್ವತಃ ಭಾಗವಹಿಸಿದ್ದರು
ಕರಸೇವೆಯ ಪುಣ್ಯ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ನಮಗೆ ಈ ಅಭಿವೃದ್ಧಿ ಕೆಲಸ ಮಾಡಲು ಪ್ರೇರಣೆ ನೀಡಿದ್ದಾರೆ. ಆ ಮೂಲಕ ಈ ಕೆಲಸ ಕಾರ್ಯಗಳು ನಡೆಯುತ್ತದೆ. ದೇವಸ್ಥಾನದ ಅಭಿವೃದ್ಧಿ ಕೆಲಸಕ್ಕೆ, ದೇವಸ್ಥಾನದ ಸ್ವಾಧೀನದಲ್ಲಿದ್ದ ಎಲ್ಲಾ ಮನೆಗಳ ತೆರವು ಕಾರ್ಯ ಪ್ರಗತಿಯಲ್ಲಿದ್ದು, ಎಲ್ಲರಿಗೂ ಧನ ಸಹಾಯ ನೀಡಲಾಗಿದೆ. ಇದೇ ಜಾಗಲ್ಲಿದ್ದ ಜೂಸ್ ಅಂಗಡಿಯ ಒಬ್ಬರಿಗೆ ಬನ್ನೂರು ಸೊಸೈಟಿಯಲ್ಲಿದ್ದ ಸುಮಾರು 60.000/- ರೂಪಾಯಿ ಯನ್ನು ಮನ್ನಾ ಮಾಡಿದ್ದಾರೆ.
ಬಡವರಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಶಾಸಕರು ಮತ್ತು ಸಮಿತಿಯವರು ಈ ಅಭಿವೃದ್ಧಿ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ನೆರವೇರಿಸಿದ್ದಾರೆ.
ನನ್ನ ಬಾಯಿಗೆ ಕೈ ಹಾಕೋಕೆ ಬರಬೇಡಿ.! ನಿಮ್ಮ ಬಯೋ ಡೇಟಾ ಎಲ್ಲಾ ನನ್ನ ಬಳಿ ಇದೆ. ಮಾಜಿ ಸಂಸದ ಮತ್ತು ಎಂ. ಎಲ್. ಸಿ ಅವರ “ಗೂಂಡಾಗಿರಿ ಹೇಳಿಕೆಗೆ ಪ್ರತಿಯಾಗಿ ಶಾಸಕ ರೈ ಯವರ ಟಾಂಗ್.
ಕೆಲಸ ದಿನಗಳ ಹಿಂದೆ ಬಿಜೆಪಿಯವರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಎಂಎಲ್‌ಸಿ ಕಿಶೋರ್ ಕುಮಾರ್ ಶಾಸಕರನ್ನು ಉದ್ದೇಶಿಸಿ “ಗೂಂಡಾಗಿರಿ” ಹೇಳಿಕೆಗೆ ಪ್ರತಿಯಾಗಿ ಅಶೋಕ್ ಕುಮಾರ್ ರೈ ಮಾತನಾಡಿ, ಗೂಂಡಾಗಿರಿ ಪ್ರವೃತ್ತಿಯವರು ಯಾರೆಂದು ನಮಗೆ ತಿಳಿದಿದೆ, ನಮ್ಮ ಬಾಯಿಗೆ ಕೈ ಹಾಕಲು ಬರಬೇಡಿ, ನಿಮ್ಮ ಬಯೋಡೇಟಾ ಎಲ್ಲಾ ನಮ್ಮ ಬಳಿಯಲ್ಲಿದೆ, ಮಾತನಾಡುವಾಗ ನಿಮ್ಮ ನಾಲಿಗೆ ಹಿಡಿತದಲ್ಲಿರಲಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಅದೇ ರೀತಿ ಶಾಸಕರ ಸೂಚನೆ ಮೇರೆಗೆ ಈ ಕೆಲಸವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಿದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಮತ್ತು ಅವರ ಸಮಿತಿಯ ಸದಸ್ಯರನ್ನು ಅಭಿನಂದಿಸಿ, ಈಶ್ವರ್ ಭಟ್ ಅವರನ್ನು ಬೆನ್ನು ತಟ್ಟಿ ಈರ್
(ಗಂಡು ಮಗ ) ಅಭಿನಂದಿಸಿದರು.
ಕರಸೇವೆ ಯಲ್ಲಿ ಸಾವಿರಾರು ಭಕ್ತರ ಜೊತೆ, ಸ್ವತಃ ಶಾಸಕರು & ಈಶ್ವರ ಭಟ್ರವರು ಮನೆಯ ಮಹಡಿ ಮೇಲೇರಿ ಕರಸೇವೆಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಕಂಬಳ ಸಮಿತಿಯವರಿಂದ ಎಲ್ಲಾ ಭಕ್ತರಿಗೆ ಸೋಡಾ ಶರಬತ್ತು ವಿತರಿಸಲಾಯಿತು. ಬಂದ ಭಕ್ತರೆಲ್ಲರಿಗೂ ಮೊದಲಿಗೆ ಕೇಸರಿ ಶಾಲು ಮತ್ತು ಪ್ರಸಾದ ನೀಡಿ ಸ್ವಾಗತಿಸಲಾಯಿತು.
ಕರಸೇವೆಯ ಬಳಿಕ ಎಲ್ಲರಿಗೂ ದೇವಸ್ಥಾನದಲ್ಲಿ ಅನ್ನ ಪ್ರಸಾದವನ್ನು ನೀಡಲಾಯಿತು.