ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಎಪಿಎಂಸಿಗೆ ಬರುವಂತಹ ಸಂಪರ್ಕ ರಸ್ತೆಯಲ್ಲಿ ಆದರ್ಶ ಆಸ್ಪತ್ರೆಯ ಎದುರು ಹೆಜ್ಜೇನು ದಾಳಿ ನಡೆಸಿರುವ ಘಟನೆ ಇಂದು ಬೆಳಿಗ್ಗೆ 9.30 ಸುಮಾರಿಗೆ ಪುತ್ತೂರಿನಲ್ಲಿ ನಡೆದಿದೆ.
ಇಂದು ಬೆಳಗ್ಗೆ ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿಗಳಿಗೆ ಹಾಗೂ ಕೆಲಸಕ್ಕೆ ಹೊರಟಂತ ಕೆಲವರು ಈ ಹೆಜ್ಜೇನಿನ ದಾಳಿಗೆ ಗುರಿಯಾಗಿದ್ದಾರೆ. ಅಲ್ಲದೇ ಹೆಜ್ಜೇನು ವ್ಯಕ್ತಿಯೋರ್ವರ ಮೇಲೆ ಸುಮಾರು 20 ನಿಮಿಷಗಳ ಕಾಲ ದಾಳಿ ಮಾಡಿದೆ.
ರಿಕ್ಷಾ ಚಾಲಕರೋರ್ವರು ತೀವ್ರ ಗಾಯಗೊಂಡಿದ್ದಾರೆ. ಬಡಕೋಡಿಯ ರಿಕ್ಷಾ ಚಾಲಕ ಪ್ರಕಾಶ್ ಎಂಬವರು ತೀವ್ರ ಗಾಯಗೊಂಡವರು. ಅವರು ರಿಕ್ಷಾ ಸರ್ವಿಸ್ ಗೆ ಬಂದು ತನ್ನ ರಿಕ್ಷಾದಲ್ಲಿ ಮಲಗಿದ್ದರು. ಈ ವೇಳೆ ಹೆಜ್ಜೇನು ದಾಳಿಯಾಗುತ್ತಿದ್ದಂತೆ ಶೋರೂಮ್ ಸುತ್ತ, ಆದರ್ಶ ಆಸ್ಪತ್ರೆ ಮುಂದೆಲ್ಲ ಜನರು ಅಡ್ಡಾದಿಡ್ಡಿ ಓಡ ತೊಡಗಿದರು. ಈ ವೇಳೆ ಆಟೋ ರಿಕ್ಷಾದೊಳಗೆ ಮಲಗಿದ್ದ ಚಾಲಕ ಪ್ರಕಾಶ್ ಅವರ ಮೇಲೆ ದಾಳಿ ನಡೆಸಿದೆ. ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಪ್ರಕಾಶ್ ಮೈ ತುಂಬಾ ಹೆಜ್ಜೇನಿನ ಮುಳ್ಳುಗಳು ತುಂಬಿವೆ.