ಪುತ್ತೂರು: ಇತ್ತೀಚಿನ ದಿನಗಳಲ್ಲಿ ಪುತ್ತೂರು ನಗರದಾದ್ಯಂತ ಬೈಕ್, ಕಾರ್, ಕಳವು ಪ್ರಕರಣಗಳು, ಹಾಡುಹಗಲೇ ಮನೆಯ ದರೋಡೆಯಂತಹ ಘಟನೆಗಳಿಂದ ನಾಗರೀಕರು ಭಯಭೀತರಾಗಿದ್ದು ಈ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ಬಿಜೆಪಿ ನಿಯೋಗ ಭೇಟಿ ಮಾಡಿ ಪ್ರಮುಖ ಸ್ಥಳಗಳಲ್ಲಿ ನಾಕಾಬಂಧಿ ಮತ್ತು ರಾತ್ರಿ ಬೀಟ್ ವ್ಯವಸ್ಥೆಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲು, ಅನಿಲ್ ಗೌಡ ತೆಂಕಿಲ, ಟೌನ್ ಬ್ಯಾಂಕ್ ನಿರ್ದೇಶಕರಾದ ರಾಜು ಶೆಟ್ಟಿ, ಪ್ರವೀಣ್ ಬಂಡಾರಿ ಉಪಸ್ಥಿತರಿದ್ದರು.
ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳುತ್ತೇವೆಂದು ಅಧಿಕಾರಿಗಳು ತಿಳಿಸಿದರು. ಹಗಲಿನಲ್ಲಿ ಗೂಡು ಅಂಗಡಿ ಗಳಲ್ಲಿ ಕೆಲಸವಿಲ್ಲದೆ ಕೆಲವು ವ್ಯಕ್ತಿ ಗಳು ತಿರುಗುತಿದ್ದು ಅವರನ್ನು ವಿಚಾರಣೆ ಮಾಡ್ಬೇಕಾಗಿದೆ ಪಡ್ಡೆಗಳು ಮಾರ್ಕೆಟ್ ರೋಡ್ ಅಲ್ಲಿ ಜಾಸ್ತಿ ಇದ್ದು ಇವರಿಗೆ ಎಚ್ಚರಿಕೆ ಕೊಡಬೇಕಾಗಿದೆ.