ಬೆಂಗಳೂರು: ತೆಗೆದು ಬಿಸಾಡುತ್ತೇನೆ, ಗೆಟ್ ಔಟ್! ಹೀಗೆ ಸದನದಲ್ಲಿ ಸ್ಪೀಕರ್ ಯು.ಟಿ ಖಾದರ್ ಕೆಂಡಾಮಂಡಲರಾದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಯಾರು? ಎಂಬ ಬಿರುಸು ಚರ್ಚೆ ನಡೆಯಿತು.
ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆದಾಗ ತಾಳ್ಮೆ ಕಳೆದುಕೊಂಡ ಸ್ಪೀಕರ್ ಯು.ಟಿ ಖಾದರ್, ಬಿಜೆಪಿ ಸದಸ್ಯ ಹರೀಶ್ ಪೂಂಜಾಗೆ ಖಡಕ್ ವಾರ್ನಿಂಗ್ ನೀಡಿದರು.
ಬಿಜೆಪಿ ಸದಸ್ಯ ಹರೀಶ್ ಪೂಂಜಾ ಬೇರೆ ಸದಸ್ಯರ ಆಸನದಲ್ಲಿ ಇದ್ದಾಗ ಅವರಿಗೆ ಎಚ್ಚರಿಕೆ ಕೊಟ್ಟ ಸ್ಪೀಕರ್ ‘ ನಿನ್ನ ಸೀಟಿಗೆ ಹೋಗಿ ಮಾತನಾಡು. ಇಲ್ಲಾಂದ್ರೆ ಹೊರಗಡೆ ನಡಿ ಗೆಟ್ ಔಟ್ ಎಂದು ತಾಳ್ಮೆ ಕಳೆದುಕೊಂಡು ವಾರ್ನಿಂಗ್ ಮಾಡಿದರು.
ಈ ವೇಳೆ, ಸ್ಪೀಕರ್ ಬಿಸಾಡುತ್ತೇನೆ ಎಂಬ ಪದ ಬಳಕೆಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು
ಬಿಸಾಡುತ್ತೇನೆ ಎಂದರೆ ಏನು ಅರ್ಥ? : ಹರೀಶ್ ಪೂಂಜಾ
ಅಂಬೇಡ್ಕರ್ ಬಗ್ಗೆ ಮಾತನಾಡಿದಾಗ ಬಿಸಾಡುತ್ತೇನೆ ಎಂದರೆ ಏನು ಅರ್ಥ? ನಾವು ಬಿಟ್ಟಿಗೆ ಬಂದಿದ್ದೇವಾ? ಎಂದು ಹರೀಶ್ ಪೂಂಜಾ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ವೇದವ್ಯಾಸ ಕಾಮತ್ ಸಾಥ್ ನೀಡಿದರು.
ಒಂದು ಸರ್ಕಲ್ ಕಟ್ಟುವ ಯೋಗ್ಯತೆ ಇಲ್ಲ
“ಬಿಜೆಪಿ ಸದಸ್ಯರ ಅಸಮಾಧಾನದ ವೇಳೆ ತಿರುಗೇಟು ಕೊಟ್ಟ ಸ್ಪೀಕರ್ ‘ ಮಂಗಳೂರಿನ ಜ್ಯೋತಿನಲ್ಲಿ ಅಂಬೇಡ್ಕರ್ ಸರ್ಕಲ್ ಕಟ್ಟಿ. ಎಷ್ಟು ವರ್ಷವಾಯ್ತು. ಒಂದು ಸರ್ಕಲ್ ಕಟ್ಟುವ ಯೋಗ್ಯತೆ ಇಲ್ಲ. ಇಲ್ಲಿ ಮಾತನಾಡುತ್ತೀರಾ” ಎಂದು ಗದರಿಸಿದರು.