ಮಂಗಳೂರು : ಸ್ಟೇಟ್ ಬ್ಯಾಂಕ್ ನಿಂದ ಮುಡಿಪು ಮಾರ್ಗವಾಗಿ ಸಂಚರಿಸುವ ಕೆ ಎಸ್ ಆರ್ ಟಿ ಸಿ ಬಸ್ಸಿನ ಕಂಡಕ್ಟರ್ ಓರ್ವರು ಬಸ್ಸಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ವರದಿಯಾಗಿದೆ.
ಇದನ್ನು ಸಹ ಪ್ರಯಾಣಿಕರೋರ್ವರು ವಿಡಿಯೋ ಮಾಡಿದ್ದು, ವಿಡಿಯೋದ ತುಣುಕುಗಳು ಎಲ್ಲೆಡೆ ವೈರಲಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು, ಆರೋಪಿಯಾದ ಬಾಗಲಕೋಟೆ ಮೂಲದ ಪ್ರದೀಪ್ (40ವ ) ವಶಕ್ಕೆ ಪಡೆದುಕೊಂಡಿದ್ದಾರೆ.
ಯುವತಿಯು ಏಪ್ರಿಲ್ 22ರಂದು ಮುಡಿಪು ನಿಂದ ಸ್ಟೇಟ್ ಬ್ಯಾಂಕ್ ನತ್ತ ಬಸ್ಸಿನಲ್ಲಿ ಸಂಚರಿಸುವ ಸಂದರ್ಭದಲ್ಲಿ ಯುವತಿಯು ನಿದ್ದೆಗೆ ಜಾರಿದ್ದಳು. ಈ ಸಂದರ್ಭದಲ್ಲಿ ಆರೋಪಿಯಾದ ಪ್ರದೀಪ್ ಯುವತಿಗೆ ಕಿರುಕುಳ ನೀಡಿದ್ದಾನೆ. ಇದೇ ಸಮಯದಲ್ಲಿ ಇದನ್ನು ಸಹ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.