ಮಂಗಳೂರು:ತಂದೆಯ ಬೀಡಿ ಸೇದುವ ಚಟಕ್ಕೆ ಮಗವೊಂದು ಪ್ರಾಣ ತೆತ್ತಿದೆ. ಹತ್ತು ತಿಂಗಳ ಮಗುವೊಂದು ತಂದೆ ಸೇದಿ ಎಸೆದ ಬೀಡಿ ತುಂಡನ್ನು ನುಂಗಿ ಸಾವನ್ನಪ್ಪಿದೆ ಮನಕಲಕುವ ಘಟನೆ ಜರುಗಿದೆ.
ಅಡ್ಯಾರ್‍ನಲ್ಲಿ ವಾಸಿಸುವ ಬಿಹಾರದ ದಂಪತಿಗಳ ಮಗ ಅನೀಶ್ ಸಾವನ್ನಪ್ಪಿದ್ದಾನೆ. ಬೀಡಿ ತುಂಡು ಗಂಟಲಿನಲ್ಲಿ ಸಿಲುಕಿಕೊಂಡ ನಂತರ ಅಸ್ವಸ್ಥಗೊಂಡ ಮಗು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ಮನೆಯ ನೆಲದ ಮೇಲೆ ಬಿದ್ದ ಬೀಡಿ ತುಂಡನ್ನು ಮಗು ತಿಳಿಯದೆ ನುಂಗಿದೆ. ಮಗು ಅಸ್ವಸ್ಥಗೊಂಡ ಸ್ವಲ್ಪ ಸಮಯದ ನಂತರ ಕುಟುಂಬವು ಮಗುವನ್ನು ಆಸ್ಪತ್ರೆಗೆ ದಾಖಲಿಸಿದೆ. ಆದರೆ, ಚಿಕಿತ್ಸೆ ಫಲಿಸದೆ ಮಗು ಕೊನೆಯುಸಿರೆಳೆದಿದೆ.
ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ಲಕ್ಷ್ಮಿ ದೇವಿ ತನ್ನ ಗಂಡನ ವಿರುದ್ಧ ದೂರು ದಾಖಲಿಸಿದ್ದಾರೆ.ಸೇದಿದ ಬೀಡಿ ತುಂಡನ್ನು ಮನೆಯಲ್ಲಿ ಎಸೆಯಬೇಡಿ ಎಂದು ಪದೇ ಪದೇ ವಿನಂತಿಸಿದರೂ, ಕೇಳದೆ ಮತ್ತೆ ಎಸೆಯಲಾಗಿದೆ ಎಂದು ಮಗುವಿನ ತಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.