ಕರ್ನಾಟಕ ರಾಜ್ಯ ಸರಕಾರದಲ್ಲಿ ಸೃಜನ ಪಕ್ಷಾಪಾತ ಭ್ರಷ್ಟಚಾರ ತಾಂಡವವಾಡುತ್ತಿದೆ. ಅಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯವಾಗಿದೆ ಜನಸಾಮಾನ್ಯರು ದಿನ ನಿತ್ಯ ಒಂದಲ್ಲೊಂದು ಸಮಸ್ಯೆಯನ್ನು ಅನುಭವಿಸುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಭ್ರಷ್ಟಾಚಾರ 94ಸಿ ಯಿಂದ ಹಿಡಿದು ವಾಲ್ಮೀಕಿ ನಿಗಮದ ತನಕ ಈ ರಾಜ್ಯದಲ್ಲಿ ಬಹಿರಂಗ ಆಗಿದೆ. ದಕ್ಷಿಣ ಕನ್ನಡದಲ್ಲಿ ಮತೀಯ ಸಂಘರ್ಷಕ ರಾಜ್ಯ ಸರಕಾರ ಎಡೆ ಮಾಡಿಕೊಟ್ಟು ದ್ವೇಷದ ರಾಜಕಾರಣ ಪೊಲೀಸ್ ಇಲಾಖೆಯ ಮುಖಾಂತರ ಮಾಡುತ್ತಿದೆ. ಅಮಾಯಕರ ಮನೆಗೆ ಮದ್ಯರಾತ್ರಿ ಪೊಲೀಸ್ ದಾಳಿ ನಡೆಯುತ್ತಿದ್ದು ಒಂದು ವರ್ಗದ ಜನತೆಯನ್ನು ಸಂತುಷ್ಟಿಗೊಳಿಸುವ ಕೆಲಸ ಮಾಡುತ್ತಿದೆ.
ದಿನ ಬೆಳಿಗ್ಗೆ ಆಗಬೇಕಾದರೆ ವಿದ್ಯುತ್ ದರ ಹೆಚ್ಚಾಗುತ್ತದೆ ಪೆನ್ಮನ್, ಗೃಹ ಗ್ರಾಚ್ಯುಟಿ ಹೆಸರಲ್ಲಿ ಗ್ರಾಹಕರಿಂದ ಯುನೀಟಿಗ 36 ಪೈಸೆಯಂತೆ ಹೆಚ್ಚುವರಿ ಮಾಡಿ ಜನರನ್ನು ಶೋಷನೆ ಮಾಡುತ್ತಿದೆ ಪಟ್ರೋಲ್ ಡೀಸೆಲ್ ದರ. ಭೂ ವ್ಯವಹಾರ ಸಂಬಂಧ ಪಟ್ಟಂತೆ ದರ ಏರಿಸಿ ಜನ ಸಾಮಾನ್ಯರ ಬದುಕು ಬರ್ಬರಗೊಳಿಸಿದೆ.
ಕರ್ನಾಟಕ ಕಾಂಗ್ರೆಸ್ ಸರಕಾರ ಗ್ಯಾರೆಂಟಿ ಹೆಸರಲ್ಲಿ ರೈತರ ಬದುಕಿನೊಟ್ಟಿಗೆ ಚೆಲ್ಲಾಟ ಆಡುತ್ತಿದೆ. ಬಿಜೆಪಿ ಸರಕಾರ ನೀಡುತ್ತಿದ್ದ ರೈತ ವಿದ್ಯಾನಿಧಿಯನ್ನು ತಡೆ ಹಿಡಿಯಲಾಗಿದೆ ಕಿಸಾನ್ ಸಮ್ಮಾನ್ ನಿಧಿಯನ್ನು ನೀಡುತ್ತಿಲ್ಲ ವಸಲು ವಿಮೆಯನ್ನು ಕಡಿಮೆ ಮಾಡಿದೆ. ರೈತರಿಗೆ ಹಾಲಿನ ಸಹಾಯಧನ 6 ತಿಂಗಳಾದರು ಪಾವತಿ ಮಾಡುತ್ತಿಲ್ಲ ರೈತರ ಪಂಪ್ ಶೆಡ್ ಜೋಡನೆಗೆ ಪರಿವರ್ತಕಗಳಿಗೆ 3 ಲಕ್ಷ ದರ ನಿಗದಿ ಮಾಡಿ ರೈತರ ಪಾಲಿಗೆ ಕರಾಳ ಸರಕಾರ ಅಗಿದೆ.
ಈಗ ಸರಕಾರ ಸಮಾಜದ ದುರ್ಬಲ, ಅಮಾಯಕ ನಿರ್ಗತಿಕ ಕುಟುಂಬಗಳಿಗೆ ನೀಡುತ್ತಿರುವ ಪಿಂಚನೆಯನ್ನು ತಡೆಹಿಡಿದು 23 ಲಕ್ಷ 19 ಸಾವಿರ ಸಂದ್ಯಾ ಸುರಕ್ಷಾ ವೃದ್ಯಾಪ್ಯವೇತನ, ಅಂಗವಿಕಲರ ಬಾಳಿಗೆ ಬರೆ ಎಲೆಯುವ ಕೆಲಸ ಮಾಡಿದೆ
ಸಮಾಜದಲ್ಲಿ ಜಾತಿ ಜಾತಿಯನ್ನು ಜಾತಿ ಗಣತಿ ಮಾಡುವ ಮೂಲಕ ಒಡೆಯುತ್ತಿದೆ ಮತೀಯ ಅಲ್ಪ ಸಂಖ್ಯಾತರನ್ನು ಒಲೈಸುವ ವೇಗದಲ್ಲಿ ಹಿಂದೂಗಳನ್ನು ದಮನಿಸುವ ಕೆಲಸ ಮಾಡುತ್ತಿದೆ. ಉರೂಸ್ ಗೆ 4 ಕೋಟಿ ನೀಡಿದರೆ ಮೈಸೂರಿನ ನಾಡದೇವತೆ ಚಾಮುಂಡೇಶ್ವರಿ ದರ್ಶನಕ, 2000 ರೂ ನಿಗದಿ ಮಾಡುತ್ತಿದೆ. ದಕ್ಷಿಣ ಕನ್ನಡದಲ್ಲಿ ಹಿಂದೂ ಸಂಘಟನೆಯನ್ನು ಮೆಟ್ಟಿ ಹಾಕಲು ವಿಶೇಷ ಕೋಮು ನಿಗ್ರಹ ಪಡೆಯನ್ನು ರಚನೆ ಮಾಡುವ ಕೆಲಸ ಕಾಂಗ್ರೇಸ್ ಸರಕಾರ ಮಾಡುತ್ತಿದೆ.
ದಿವಂಗತ ರಾಜೀವ ಗಾಂಧಿಯವರು ಕೇಂದ್ರದಲ್ಲಿ ಮಂಜೂರು ಮಾಡಿದ ವಂಚಾಯತ್ ರಾಜ್ಯ ಕಾರ್ಯ ತಿಲಾಂಜಲಿ ನೀಡುವ ಕೆಲಸ ಸರಕಾರ ಮಾಡುತಿದೆ, ಉಚ್ಚನ್ಯಾಯಲಯಕ್ಕೆ ಮೇ ತಿಂಗಳಲ್ಲಿ ತಾಲೂಕು/ ಜಿಲ್ಲಾ ಪಂಚಾಯತ್‌ಗೆ ಚುನಾವಣೆ ಮಾಡುತ್ತದೆ ಎಂದು ಬರವಸೆ ಕೊಟ್ಟು ಚುನಾವಣೆಯನ್ನು ಮಾಡಲು ಕಾಲಹರಣ ಮಾಡುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುವ ಭಾರಿ ಮಳೆಗೆ ಉಂಟಾದ ಪ್ರಾಕೃತಿಕ ವಿಕೋಪಗಳಿಗೆ ಸರಕಾರ ಪರಿಹಾರ ಕೂಡದೆ ನಿರಾಶ್ರಿತರನ್ನು ಅಸಹಾಯಕರನ್ನಾಗಿ ಮಾಡಿದ ಕೃಷಿ ಹಾನಿ, ಮನೆ ಹಾನಿ, ಜಾನುವಾದ ಹಾನಿ ರಸ್ತೆ ಹಾನಿ ವಿಕೋಪದ ಹಂತಕ್ಕೆ ತಲುಪಿದರು ಜನಪ್ರತಿನಿಧಿಗಳು ಅಧಿಕಾರಿಗಳು ಸರಕಾರ ತಮ್ಮ ಜವಾಬ್ದಾರಿ ಇಲ್ಲದ ರೀತಿಯಲ್ಲಿ ವರ್ತನೆ ಮಾಡುವಂತಹದು ಖಂಡನೀಯ.
ಗ್ರಾಮ ಪಂಚಾಯತನ್ನು ಸಂಪೂರ್ಣ ಕಡೆಗಣಿಸಿ ಕೇಂದ್ರ ಸರಕಾರದ ಅನುದಾನದಿಂದ ಮಾತ್ರ ಪಂಚಾಯತ್ ಸದಸ್ಯರು ಕೆಲಸ ಮಾಡುವಂತಾಗಿದೆ. ಸರಕಾರ ಪಂಚಾಯತ್ ನೀಡುವ 9/11 ನ್ನು ಸ್ಥಳಿಯ ಪ್ರಾದಿಕಾರಕ್ಕೆ, ನೀಡಿ ಜನಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ. ಬಿಜೆಪಿ ಸರಕಾರ ಇರುವಾಗ ರಸ್ತೆ ಮಾರ್ಜಿನನ್ನು 6 ಮಿ ಮಿತಿಗೊಳಿಸಿ ಆದೇಶ ಮಾಡಿತ್ತು ಆದರೆ ಸರಕಾರ ಹೊಸ ಸುತ್ತೋಲೆ 2025 ರಲ್ಲಿ ಹೊರಡಿಸಿ ಗ್ರಾಮ ಮಿತಿಯ ತೆಗೆದು ಗ್ರಾಮ ಠಾಣಾ ಸೇರಿಸಿ ಯಾವುದು ಕಟ್ಟಡಕ್ಕೆ ಅನುಮತಿ ನೀಡಲು ಸಮಸ್ಯೆ ಉಂಟಾಗಿದೆ ಪಂಚಾಯ ಮಟ್ಟದಲ್ಲಿ ಕಟ್ಟಡ ಕಟ್ಟಲು ಕೂಡ ಹಾಗೂ ಸ್ಥಳಿಯ ಪ್ರಾಧಿಕಾರ ಅನುಮತಿ ಪಡೆಯುವಂತೆ ಆದ ಹೊರಡಿಸುತ್ತದ ಇದರಿಂದ ಜನಸಾಮಾನ್ಯರು ಭವನ ಪಡುವಂತಾಗಿದೆ.
ಕರ್ನಾಟಕ ಸರಕಾರದ ಜನ ವಿರೋಧಿ ನೀತಿ ಸೃಜನ ಪಕ್ಷಾಪಾತ ಭ್ರಷ್ಟಾಚಾರ ಹಾಗೂ ವಿರೋಧ ಪಾರ್ಟಿಯ ದಮನ ನೀತಿಯ ವಿರುದ್ಧ ಭಾರತೀಯ ಜನಾತಾ ಪಾರ್ಟಿ ದಿನಾಂಕ 23/06/2025 ರಂದು ಪುತ್ತೂರು ತಾಲೂಕಿನ ಎಲ್ಲಾ ಪಂಚಾಯತ್ ಪಟ್ಟಣ ಪಂಚಾಯತ್ ಹಾಗೂ ನಗರ ಸಭೆ ಎದುರು ಒಂದು ದಿನದ ಧರಣಿ ಪ್ರತಿಭಟನೆ ಸಭೆಯನ್ನು ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಜನ ವ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರಕಾರಕ್ಕೆ ಎಚ್ಚರಿಕೆ ನೀಡಲು ಸಹಕರಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು,ಹರೀಶ್ ಬಿಜತ್ರೆ ,ದಯಾನಂದ ಶೆಟ್ಟಿ ಉಜ್ರಮಾರು ,ಅನಿಲ್ ತೆಂಕಿಲ ಬಾಲಚಂದ್ರ ಉಪಸ್ಥಿತರಿದ್ದರು