ಬಂಟ್ವಾಳ ತಾಲೂಕಿನ ಕಡೇಶಿವಾಲ್ಯ ಗ್ರಾಮದ, ನೀರಕಜೆ ಎಂಬಲ್ಲಿ ವಾಸ್ತವ್ಯದ ಹೊಂದಿರುವ ಚೆನ್ನಪ್ಪ ರವರ ಪತ್ನಿ ಮೀನಾಕ್ಷಿ ಎಂಬವರು ಕಡೇಶಿವಾಲ್ಯ ಗ್ರಾಮದ ಸರ್ವೆ ನಂಬ್ರ: 98/2ಎ ರಲ್ಲಿ 1.98 ಎಕ್ರೆ ಜಮೀನನ್ನು ಹೊಂದಿರುತ್ತಾರೆ. ಸದ್ರಿ ಜಮೀನು ಮೀನಾಕ್ಷಿರವರ ಪತಿ ಚಂದಪ್ಪ ನಾಯ್ಕ ರವರ ತಂದೆ ತಿಮ್ಮ ನಾಯ್ಕ ರಿಗೆ ಡಿಸಿಡಿಆರ್ 114/70-71 ರಂತೆ ದರ್ಖಾಸ್ತು ಮಂಜೂರಾದ ಆಸ್ತಿಯಾಗಿರುತ್ತದೆ. ಸದ್ರಿ ತಿಮ್ಮ ನಾಯ್ಕ ರ ಮರಣಾನಂಯತರ ಅವರ ಮಗನಾದ ಚಂದಪ್ಪ ನಾಯ್ಕ ರವರ ಹೆಸರಿಗೆ ಖಾತಾ ಬದಲಾವಣೆ ಹೊಂದಿದ್ದು, ಸದ್ರಿ ಚಂದಪ್ಪ ನಾಯ್ಕರು ದಿನಾಂಕ: 08-09-2024 ರಂದು ಮೃತಪಟ್ಟಿದ್ದು, ಪ್ರಸ್ತುತ ಮೀನಾಕ್ಷಿ ಹಾಗೂ ಅವರ ಮಕ್ಕಳಾದ ನಮಿತ, ಅಕ್ಷತಾ, ಬಾಲಕೃಷ್ಣ ಬಿ ರವರ ಹೆಸರಿನಲ್ಲಿ ಪಹಣೆ ದಾಖಲಾಗಿರುತ್ತದೆ. ಹೆಣ್ಣು ಮಕ್ಕಳಾದ ನಮಿತ ಮತ್ತು ಅಕ್ಷತಾ ರವರನ್ನು ಮದುವೆ ಮಾಡಿಕೊಟ್ಟಿರುತ್ತಾರೆ. ಪ್ರಸ್ತುತ ಮೀನಾಕ್ಷಿ ರವರ ಮಗನಾದ ಬಾಲಕೃಷ್ಣ ಬಿ ಮರದಿಂದ ಬಿದ್ದು, ನಡೆದಾಡಲು ಕಷ್ಟವಾಗಿರುತ್ತದೆ. ಸದ್ರಿ ಮೀನಾಕ್ಷಿರವರು ಸಹಾ ಅನಾರೋಗ್ಯದಿಂದ ಕೂಡಿದ್ದು, ಅವರಿಗೆ ರಕ್ತದೊತ್ತಡ ಏರುಪೇರಾಗುವ ಖಾಯಿಲೆಯಿಂದ ಬಳಲುತ್ತಿದ್ದಾರೆ. ಸದ್ರಿಯವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು ಕಡುಬಡವರಾಗಿರುತ್ತಾರೆ.
ಹೀಗಿರುವಲ್ಲಿ ಮೀನಾಕ್ಷಿರವರ ಮನೆಗೆ ಹೋಗಲು ಸಂಪರ್ಕ ರಸ್ತೆ ಇಲ್ಲವಾಗಿದ್ದು, ಜಮೀನಿನ ಅನುಪಾಸಿನವರು ಮೀನಾಕ್ಷಿ ರವರ ಮನೆಗೆ ರಸ್ತೆ ನಿರ್ಮಾಣ ಮಾಡುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಸದ್ರಿ ಮೀನಾಕ್ಷಿ ರವರು ಹೊಂದಿರುವ ಸರ್ವೆ ನಂಬ್ರ: 98/2ಎ ಜಮೀನಿನಲ್ಲಿ 0.46 ಎಕ್ರೆ ಸರಕಾರಿ ಜಮೀನು ಇರುವುದಾಗಿದ್ದು, ಸದ್ರಿ ಸರಕಾರಿ ಜಮೀನನ್ನು ಮೀನಾಕ್ಷಿ ರವರಿಗೆ ಮನೆಗೆ ಹೋಗಲು ರಸ್ತೆ ನಿರ್ಮಾಣವನ್ನು ಮಾಡಲು ಅವಕಾಶ ನೀಡದೇ ಅನಧಿಕೃತವಾಗಿ ಸ್ವಾಧೀನ ಹೊಂದಿರುತ್ತಾರೆ. ಇದರಿಂದ ಮೀನಾಕ್ಷಿ ರವರು ಮೂಲ ಭೂತ ಸೌಕರ್ಯದಿಂದ ವಂಚಿತರಾಗಿದ್ದು, ಅನಾರೋಗ್ಯ ಸಮಯದಲ್ಲಿ ಆಸ್ಪತ್ರೆಗೆ ತೆರಳಲು ಅಸಾಧ್ಯವಾಗಿರುತ್ತದೆ.
ಆದುದರಿಂದ ಸರ್ವೆ ನಂಬ್ರ: 88/2ಎ ರಲ್ಲಿ 0.46.00 ಎಕ್ರೆ ಸರಕಾರಿ ಜಮೀನಿನಲ್ಲಿ ಮೀನಾಕ್ಷಿರವರಿಗೆ ಮನೆಗೆ ಹೋಗಿ ಬರುವರೇ ರಸ್ತೆಯನ್ನು ನಿರ್ಮಿಸಿ ಮೂಲಭೂತ ಸೌಕರ್ಯ ಒದಗಿಸಬೇಕಾಗಿಯೂ ಪರಿಶಿಷ್ಟ ಪಂಗಡದ ಸದಸ್ಯರಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿಸುತ್ತೇನೆ. ಸದ್ರಿ ರಸ್ತೆ ನಿರ್ಮಾಣಕ್ಕೆ ಸರಕಾರಿ ಜಮೀನನ್ನು ಅನಧಿಕೃತವಾಗಿ ವಶಕ್ಕೆ ಪಡೆದವರವರಿಗೆ ರಸ್ತೆ ನಿರ್ಮಾಣಕ್ಕೆ ಅಡ್ಡಿ ಬಾರದಂತೆ ಸೂಚನೆಯನ್ನು ನೀಡಬೇಕಾಗಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ವತಿಯಿಂದ ವಿನಂತಿಸುತ್ತೇವೆ. ನಮ್ಮ ವಿನಂತಿಯನ್ನು ಮಾನ್ಯ ಮಾಡದೇ ಇದ್ದಲ್ಲಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ವತಿಯಿಂದ ಮುಂದೆ ಉಗ್ರ ಪ್ರತಿಭಟನೆಯನ್ನು ಮಾಡಲು ಸಿದ್ಧರಿದ್ದೇವೆ. ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಗಿರಿಧರ್ ನಾಯ್ಕ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.