• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಪುತ್ತೂರು: ಜರ್ನಲಿಸ್ಟ್ ಯೂನಿಯನ್‌ನಿಂದ ಪತ್ರಿಕಾ ದಿನಾಚರಣೆ-ಹಿರಿಯ ಪತ್ರಕರ್ತ ಡಾ. ನರೇಂದ್ರ ರೈ ದೇರ್ಲರವರಿಗೆ ಗೌರವ-ಸನ್ಮಾನ

ಪುತ್ತೂರು: ಜರ್ನಲಿಸ್ಟ್ ಯೂನಿಯನ್‌ನಿಂದ ಪತ್ರಿಕಾ ದಿನಾಚರಣೆ-ಹಿರಿಯ ಪತ್ರಕರ್ತ ಡಾ. ನರೇಂದ್ರ ರೈ ದೇರ್ಲರವರಿಗೆ ಗೌರವ-ಸನ್ಮಾನ

July 22, 2025
ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯೊಂದಿಗೆ, ಯುವ ಚೈತನ್ಯ ಹಾಗೂ ಸರ್ವ ಸಮಾಗಮದ ವಿಶೇಷ ಸಂಭ್ರಮ ಆಗಲಿದೆ ಈ ಬಾರಿಯ ಮಂಗಳೂರು ಕಂಬಳ: ಸಂಸದ ಕ್ಯಾ.ಚೌಟ

ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯೊಂದಿಗೆ, ಯುವ ಚೈತನ್ಯ ಹಾಗೂ ಸರ್ವ ಸಮಾಗಮದ ವಿಶೇಷ ಸಂಭ್ರಮ ಆಗಲಿದೆ ಈ ಬಾರಿಯ ಮಂಗಳೂರು ಕಂಬಳ: ಸಂಸದ ಕ್ಯಾ.ಚೌಟ

November 2, 2025
ಖ್ಯಾತ ನಿರೂಪಕ  ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್‌ರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಖ್ಯಾತ ನಿರೂಪಕ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್‌ರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

November 1, 2025
ಸರಕಾರಿ ಜಾಗದಲ್ಲಿರುವ ಧಾರ್ಮಿಕ ಕೇಂದ್ರಗಳನ್ನು ದೇವರ ಹೆಸರಿಗೆ ಸಕ್ರಮಗೊಳಿಸಿ ಕಂದಾಯ ಸಚಿವ ಕೃಷ್ಣಬೈರೇ ಗೌಡರಿಗೆ ಶಾಸಕ ಅಶೋಕ್ ರೈ ಮನವಿ

ಸರಕಾರಿ ಜಾಗದಲ್ಲಿರುವ ಧಾರ್ಮಿಕ ಕೇಂದ್ರಗಳನ್ನು ದೇವರ ಹೆಸರಿಗೆ ಸಕ್ರಮಗೊಳಿಸಿ ಕಂದಾಯ ಸಚಿವ ಕೃಷ್ಣಬೈರೇ ಗೌಡರಿಗೆ ಶಾಸಕ ಅಶೋಕ್ ರೈ ಮನವಿ

October 31, 2025
ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ವತಿಯಿಂದ ಮುಂಡೂರಿನಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ

ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ವತಿಯಿಂದ ಮುಂಡೂರಿನಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ

October 31, 2025
ಅಡಕೆ ಬೆಲೆಯಲ್ಲಿ ಏರಿಕೆ, 520 ರೂಪಾಯಿಗಳಿಗೆ ತಲುಪಿದ ದರ 550 ರೂಪಾಯಿ ಗಡಿ ದಾಟುವ ನಿರೀಕ್ಷೆ !

ಅಡಕೆ ಬೆಲೆಯಲ್ಲಿ ಏರಿಕೆ, 520 ರೂಪಾಯಿಗಳಿಗೆ ತಲುಪಿದ ದರ 550 ರೂಪಾಯಿ ಗಡಿ ದಾಟುವ ನಿರೀಕ್ಷೆ !

October 31, 2025
ವಿಶ್ವ ಹಿಂದೂ ಪರಿಷದ್ ಪ್ರಾಂತ್ಯ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಅರೆಸ್ಟ್

ವಿಶ್ವ ಹಿಂದೂ ಪರಿಷದ್ ಪ್ರಾಂತ್ಯ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಅರೆಸ್ಟ್

October 31, 2025
ಬೆಳ್ತಂಗಡಿ : ಮೊಗ್ರು ಗ್ರಾಮ ಮುಗೇರಡ್ಕ ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ

ಬೆಳ್ತಂಗಡಿ : ಮೊಗ್ರು ಗ್ರಾಮ ಮುಗೇರಡ್ಕ ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ

October 31, 2025
ಬಿಹಾರ ಚುನಾವಣೆ: ಎನ್​ಡಿಎ ಪ್ರಣಾಳಿಕೆ ಉಚಿತ ವಿದ್ಯುತ್, ಮೆಟ್ರೋ, ಸರ್ಕಾರಿ ನೌಕರರ ನೇಮಕ ಸೇರಿ ಹಲವು ಭರವಸೆಗಳು, ಇಲ್ಲಿ ವಿರೋಧ ಅಲ್ಲಿ ಘೋಷಣೆ

ಬಿಹಾರ ಚುನಾವಣೆ: ಎನ್​ಡಿಎ ಪ್ರಣಾಳಿಕೆ ಉಚಿತ ವಿದ್ಯುತ್, ಮೆಟ್ರೋ, ಸರ್ಕಾರಿ ನೌಕರರ ನೇಮಕ ಸೇರಿ ಹಲವು ಭರವಸೆಗಳು, ಇಲ್ಲಿ ವಿರೋಧ ಅಲ್ಲಿ ಘೋಷಣೆ

October 31, 2025
ಬಿಸ್ಲೆಘಾಟ್‌ನಲ್ಲಿ ಅಪಘಾತ ಮದುವೆಗೆ ಆಗಮಿಸುತ್ತಿದ್ದ ಟೆಂಪೋ ಉರುಳಿ 22 ಮಂದಿ ಗಾಯ

ಬಿಸ್ಲೆಘಾಟ್‌ನಲ್ಲಿ ಅಪಘಾತ ಮದುವೆಗೆ ಆಗಮಿಸುತ್ತಿದ್ದ ಟೆಂಪೋ ಉರುಳಿ 22 ಮಂದಿ ಗಾಯ

October 30, 2025
ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರೀ ಪ್ಲಾನ್! ಎನ್ಐಎ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ

ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರೀ ಪ್ಲಾನ್! ಎನ್ಐಎ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ

October 30, 2025
2025ರ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ದಕ್ಷಿಣ ಕನ್ನಡಕ್ಕೆ ಐವರಿಗೆ ಒಳಿದ ಪ್ರಶಸ್ತಿ

2025ರ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ದಕ್ಷಿಣ ಕನ್ನಡಕ್ಕೆ ಐವರಿಗೆ ಒಳಿದ ಪ್ರಶಸ್ತಿ

October 30, 2025
ನೆಲ್ಯಾಡಿ ಸೀನಿಯ‌ರ್ ಚೇಂಬರ್‌ಗೆ ಟೋಪ್ ಟೆನ್ ಪ್ರಶಸ್ತಿ

ನೆಲ್ಯಾಡಿ ಸೀನಿಯ‌ರ್ ಚೇಂಬರ್‌ಗೆ ಟೋಪ್ ಟೆನ್ ಪ್ರಶಸ್ತಿ

October 30, 2025
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Tuesday, November 4, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯೊಂದಿಗೆ, ಯುವ ಚೈತನ್ಯ ಹಾಗೂ ಸರ್ವ ಸಮಾಗಮದ ವಿಶೇಷ ಸಂಭ್ರಮ ಆಗಲಿದೆ ಈ ಬಾರಿಯ ಮಂಗಳೂರು ಕಂಬಳ: ಸಂಸದ ಕ್ಯಾ.ಚೌಟ

    ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯೊಂದಿಗೆ, ಯುವ ಚೈತನ್ಯ ಹಾಗೂ ಸರ್ವ ಸಮಾಗಮದ ವಿಶೇಷ ಸಂಭ್ರಮ ಆಗಲಿದೆ ಈ ಬಾರಿಯ ಮಂಗಳೂರು ಕಂಬಳ: ಸಂಸದ ಕ್ಯಾ.ಚೌಟ

    ಖ್ಯಾತ ನಿರೂಪಕ  ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್‌ರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

    ಖ್ಯಾತ ನಿರೂಪಕ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್‌ರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

    ಸರಕಾರಿ ಜಾಗದಲ್ಲಿರುವ ಧಾರ್ಮಿಕ ಕೇಂದ್ರಗಳನ್ನು ದೇವರ ಹೆಸರಿಗೆ ಸಕ್ರಮಗೊಳಿಸಿ ಕಂದಾಯ ಸಚಿವ ಕೃಷ್ಣಬೈರೇ ಗೌಡರಿಗೆ ಶಾಸಕ ಅಶೋಕ್ ರೈ ಮನವಿ

    ಸರಕಾರಿ ಜಾಗದಲ್ಲಿರುವ ಧಾರ್ಮಿಕ ಕೇಂದ್ರಗಳನ್ನು ದೇವರ ಹೆಸರಿಗೆ ಸಕ್ರಮಗೊಳಿಸಿ ಕಂದಾಯ ಸಚಿವ ಕೃಷ್ಣಬೈರೇ ಗೌಡರಿಗೆ ಶಾಸಕ ಅಶೋಕ್ ರೈ ಮನವಿ

    ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ವತಿಯಿಂದ ಮುಂಡೂರಿನಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ

    ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ವತಿಯಿಂದ ಮುಂಡೂರಿನಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ

    ಅಡಕೆ ಬೆಲೆಯಲ್ಲಿ ಏರಿಕೆ, 520 ರೂಪಾಯಿಗಳಿಗೆ ತಲುಪಿದ ದರ 550 ರೂಪಾಯಿ ಗಡಿ ದಾಟುವ ನಿರೀಕ್ಷೆ !

    ಅಡಕೆ ಬೆಲೆಯಲ್ಲಿ ಏರಿಕೆ, 520 ರೂಪಾಯಿಗಳಿಗೆ ತಲುಪಿದ ದರ 550 ರೂಪಾಯಿ ಗಡಿ ದಾಟುವ ನಿರೀಕ್ಷೆ !

    ವಿಶ್ವ ಹಿಂದೂ ಪರಿಷದ್ ಪ್ರಾಂತ್ಯ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಅರೆಸ್ಟ್

    ವಿಶ್ವ ಹಿಂದೂ ಪರಿಷದ್ ಪ್ರಾಂತ್ಯ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಅರೆಸ್ಟ್

    ಬೆಳ್ತಂಗಡಿ : ಮೊಗ್ರು ಗ್ರಾಮ ಮುಗೇರಡ್ಕ ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ

    ಬೆಳ್ತಂಗಡಿ : ಮೊಗ್ರು ಗ್ರಾಮ ಮುಗೇರಡ್ಕ ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ

    ಬಿಸ್ಲೆಘಾಟ್‌ನಲ್ಲಿ ಅಪಘಾತ ಮದುವೆಗೆ ಆಗಮಿಸುತ್ತಿದ್ದ ಟೆಂಪೋ ಉರುಳಿ 22 ಮಂದಿ ಗಾಯ

    ಬಿಸ್ಲೆಘಾಟ್‌ನಲ್ಲಿ ಅಪಘಾತ ಮದುವೆಗೆ ಆಗಮಿಸುತ್ತಿದ್ದ ಟೆಂಪೋ ಉರುಳಿ 22 ಮಂದಿ ಗಾಯ

    ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರೀ ಪ್ಲಾನ್! ಎನ್ಐಎ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ

    ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರೀ ಪ್ಲಾನ್! ಎನ್ಐಎ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ಪುತ್ತೂರು: ಜರ್ನಲಿಸ್ಟ್ ಯೂನಿಯನ್‌ನಿಂದ ಪತ್ರಿಕಾ ದಿನಾಚರಣೆ-ಹಿರಿಯ ಪತ್ರಕರ್ತ ಡಾ. ನರೇಂದ್ರ ರೈ ದೇರ್ಲರವರಿಗೆ ಗೌರವ-ಸನ್ಮಾನ

by ಪ್ರಜಾಧ್ವನಿ ನ್ಯೂಸ್
July 22, 2025
in ಪುತ್ತೂರು
0
ಪುತ್ತೂರು: ಜರ್ನಲಿಸ್ಟ್ ಯೂನಿಯನ್‌ನಿಂದ ಪತ್ರಿಕಾ ದಿನಾಚರಣೆ-ಹಿರಿಯ ಪತ್ರಕರ್ತ ಡಾ. ನರೇಂದ್ರ ರೈ ದೇರ್ಲರವರಿಗೆ ಗೌರವ-ಸನ್ಮಾನ
17
SHARES
48
VIEWS
ShareShareShare

ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಹಿರಿಯ ಪತ್ರಕರ್ತ ಡಾ. ನರೇಂದ್ರ ರೈ ದೇರ್ಲರವರಿಗೆ ಗೌರವ ಸನ್ಮಾನ ಕಾರ್ಯಕ್ರಮ ಜು.24ರಂದು ನಡೆಯಲಿದೆ.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಅಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ ಅವರ ಅಧ್ಯಕ್ಷತೆಯಲ್ಲಿ ಸಂಜೆ 4 ಗಂಟೆಗೆ ಕೆಯ್ಯೂರು ದೇರ್ಲದಲ್ಲಿರುವ ಡಾ. ನರೇಂದ್ರ ರೈ ದೇರ್ಲ ಅವರ ಮನೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಪುತ್ತೂರಿನ ರೋಯಲ್ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕಾಧ್ಯಕ್ಷರಾದ ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ ಸನ್ಮಾನ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜರ್ನಲಿಸ್ಟ್ ಯೂನಿಯನ್ ಸದಸ್ಯರಿಗೆ ಎಸ್‌ಎಲ್‌ವಿ ಬುಕ್‌ಹೌಸ್ ವತಿಯಿಂದ ಲ್ಯಾಪ್‌ಟಾಪ್ ಬ್ಯಾಗ್ ವಿತರಣೆ ನಡೆಯಲಿದೆ. ಜರ್ನಲಿಸ್ಟ್ ಯೂನಿಯನ್ ತಾಲೂಕು ಘಟಕದ ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಸಂತೋಷ್ ಮೊಟ್ಟೆತ್ತಡ್ಕ, ಉಪಾಧ್ಯಕ್ಷರಾದ ಚೈತ್ರ ಬಂಗೇರ, ಸುಮಿತ್ರಾ ಬಿ., ಕಾರ್ಯದರ್ಶಿ ಕವಿತಾ ಮಾಣಿ, ಜತೆ ಕಾರ್ಯದರ್ಶಿ ಚಿನ್ಮಯಕೃಷ್ಣ ಮತ್ತು ಕೋಶಾಧಿಕಾರಿ ಪ್ರಜ್ವಲ್ ಕೋಟ್ಯಾನ್ ತಿಳಿಸಿದ್ದಾರೆ.

ಡಾ. ದೇರ್ಲರವರಿಗೆ ಜರ್ನಲಿಸ್ಟ್ ಯೂನಿಯನ್‌ನಿಂದ ವಿಶೇಷ ಗೌರವ-ರಾಮದಾಸ್ ಶೆಟ್ಟಿ:
ನಿವೃತ್ತ ಕನ್ನಡ ಪ್ರಾಧ್ಯಾಪಕರು, ಪರಿಸರಾಸಕ್ತರು, ಅಂಕಣಕಾರರು ಮತ್ತು ಕೃಷಿಕರಾಗಿರುವ ಡಾ. ನರೇಂದ್ರ ರೈ ದೇರ್ಲ ಅವರನ್ನು ಅವರ ಮನೆಯಲ್ಲಿಯೇ ಸನ್ಮಾನಿಸಿ ಗೌರವಿಸುವ ಮೂಲಕ ವಿಶೇಷ ಗೌರವ ನೀಡಲಾಗುತ್ತಿದೆ ಎಂದು ಯೂನಿಯನ್ ಅಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ ತಿಳಿಸಿದ್ದಾರೆ. ತರಂಗ ವಾರಪತ್ರಿಕೆಯಲ್ಲಿ ಏಳು ವರ್ಷಗಳ ಕಾಲ ಸಹಸಂಪಾದಕ ಹುದ್ದೆ ಅಲಂಕರಿಸಿದ್ದಲ್ಲದೆ ಉನ್ನತ ಶಿಕ್ಷಣ ಇಲಾಖೆಯ ರಾಜ್ಯದ ವಿವಿಧ ಸರಕಾರಿ ಪದವಿ ಕಾಲೇಜುಗಳಲ್ಲಿ ೨೮ ವರ್ಷಗಳ ಸೇವೆ ಸಲ್ಲಿಸಿರುವ ಡಾ. ದೇರ್ಲ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಬೇಟೆ ಪರಿಕಲ್ಪನೆ ಮತ್ತು ಧೋರಣೆಗಳು ಎಂಬ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ಮಾಡಿದವರು. ಸಾಹಿತ್ಯ, ಪತ್ರಿಕೋದ್ಯಮ, ಪರಿಸರ, ಕೃಷಿ, ಜಾನಪದ, ಗ್ರಾಮ ಅಧ್ಯಯನ ಇತ್ಯಾದಿಗಳಲ್ಲಿ ಆಸಕ್ತಿ ಹೊಂದಿರುವ ಡಾ. ನರೇಂದ್ರ ರೈ ಅವರಿಗೆ ಈಗಾಗಲೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಅನುವಾದ ಪ್ರಶಸ್ತಿ, ಪ.ಗೋ.ಪತ್ರಿಕೋದ್ಯಮ ಪ್ರಶಸ್ತಿ, ಅಕ್ಷರ ಪ್ರತಿಷ್ಠಾನ ಪ್ರಶಸ್ತಿ, ಎರಡು ಬಾರಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅತ್ಯುತ್ತಮ ಕೃಷಿ ಪುಸ್ತಕ ಪ್ರಶಸ್ತಿ, ಡಾ. ಹಾ.ಮಾ ನಾಯಕ ಅಂಕಣ ಪ್ರಶಸ್ತಿ ಒಲಿದಿದೆ. ಪ್ರಜಾವಾಣಿಯ ಅಜ್ಜನ ಜಗಲಿ, ವಿಜಯವಾಣಿ ಹಸಿರು ಉಸಿರು, ವಾರ್ತಾಭಾರತಿಯ ತನ್ಮಯ, ವಾರೆ ಕೋರೆ-ಮಣ್ಣು ಮಸಿ ಇವರ ಗಮನ ಸೆಳೆದ ಕೃತಿಗಳಾಗಿದೆ. ಕರಾವಳಿ ಕರ್ನಾಟಕದ ಕೃಷಿ ಪಲ್ಲಟ ಮತ್ತು ಪರಿಣಾಮ ಎಂಬ ಸಂಶೋಧನೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಂಶೋಧನಾ ಫೆಲೋಶಿಪ್ ಪಡೆದಿರುವ ಡಾ. ದೇರ್ಲ ಅವರ 1200ಕ್ಕಿಂತ ಹೆಚ್ಚು ನುಡಿ ಚಿತ್ರಗಳು ರಾಜ್ಯದ ಬೇರೆ ಬೇರೆ ನಿಯತಕಾಲಿಕ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇವರು ಬರೆದಿರುವ ಸುಮಾರು 18 ಕೃಷಿ ಪರಿಸರ ಪರ ಲೇಖನಗಳು ಕರ್ನಾಟಕ ಮತ್ತು ಕೇರಳದ ಪ್ರೌಢ ಮತ್ತು ಪದವಿ ಪಠ್ಯಗಳಲ್ಲಿ ಪಾಠಗಳಾಗಿ ಸೇರಿವೆ. ಕರ್ನಾಟಕದ ಪಿಯು ಪಠ್ಯ, ಕರ್ನಾಟಕದ ಮಂಗಳೂರು, ಬೆಂಗಳೂರು, ಧಾರವಾಡ ವಿಶ್ವವಿದ್ಯಾನಿಲಯಗಳ ಪದವಿ ಪಠ್ಯಗಳಲ್ಲಿ ಇವರ ಲೇಖನಗಳು ಪಠ್ಯಗಳಾಗಿವೆ.

ಹಂಪಿ ವಿಶ್ವವಿದ್ಯಾನಿಲಯದ ಪಿಎಚ್‌ಡಿ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸುತ್ತಿರುವ ನರೇಂದ್ರ ರೈ ಅವರು ರಾಜ್ಯದ ಬೇರೆ ಬೇರೆ ಕಾಲೇಜುಗಳ ಪಠ್ಯ ರಚನಾ ಸಮಿತಿಯಲ್ಲೂ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಈವರೆಗೆ ಸುಮಾರು 40ಕ್ಕಿಂತ ಹೆಚ್ಚು ಕೃತಿಗಳನ್ನು ಬರೆದು ಸಂಪಾದಿಸಿರುವ ದೇರ್ಲ ಅವರ ತೇಜಸ್ವಿ ಪತ್ರಗಳು ಬಹಳ ಜನಪ್ರಿಯವಾದ ಸಂಪಾದನಾ ಕೃತಿಯಾಗಿದೆ. ಕುವೆಂಪು, ಕಾರಂತ, ತೇಜಸ್ವಿ, ಅನಂತಮೂರ್ತಿ, ಲಂಕೇಶ್, ದೇವನೂರು, ಶಿವರುದ್ರಪ್ಪ ಮೊದಲಾದವರು ಪರಸ್ಪರ ಬರೆದುಕೊಂಡ ಸುಮಾರು 700 ಪತ್ರಗಳು ಈ ಕೃತಿಯಲ್ಲಿ ಸಂಪಾದನೆಗೊಂಡು ಇದು ಒಂದು ಕಾಲದ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯೂ ಆಗಿದೆ. ಕರ್ನಾಟಕ ಕೃಷಿ ಕಥನ ಮಾಲಿಕೆ ದೇರ್ಲ ಅವರ ಒಂದು ವಿಶಿಷ್ಟ ಅಧ್ಯಯನ ದಾಖಲಾತಿಯಾಗಿದ್ದು ಈ ದೇಶದಲ್ಲಿ ಮುತ್ಸದ್ಧಿಗಳ, ರಾಜಕಾರಣಿಗಳ, ಸಮಾಜ ಸುಧಾರಕರ ಸಾಹಿತಿಗಳ, ವಿಜ್ಞಾನಿಗಳ ಆತ್ಮ ಚರಿತ್ರೆಗಳು ಜೀವನ ಚರಿತ್ರೆಗಳು ಯಥೇಚ್ಛವಾಗಿ ಪ್ರಕಟವಾಗುತ್ತವೆ. ಆದರೆ ಎಲ್ಲರ ಹೊಟ್ಟೆ ತುಂಬಿಸುವ ರೈತರ ಸಾಧನೆಯನ್ನು ಯಶೋಗಾಥೆಯನ್ನು ದಾಖಲಿಸುವ ದೃಷ್ಟಿಯಲ್ಲಿ ಈಗಾಗಲೇ ಈ ರಾಜ್ಯದ ಆರು ಜನ ಅನಾಮಿಕ ರೈತರನ್ನು ಪುಸ್ತಕ ರೂಪದಲ್ಲಿ ‘ಕರ್ನಾಟಕ ಕೃಷಿ ಕಥನ ಮಾಲಿಕೆ’ ಎಂಬ ಸರಣಿಯಲ್ಲಿ ನರೇಂದ್ರ ರೈ ಅವರು ಅವರು ದಾಖಲಿಸಿದ್ದಾರೆ. ಈ ಸರಣಿ ಮತ್ತಷ್ಟು ರೈತರ ಜೀವನ ಚರಿತ್ರೆಯನ್ನು ದಾಖಲಿಸಲಿದೆ.

ಈ ಭೂಮಿ ನಮ್ಮದಲ್ಲ ಮುಂದೆ ಹುಟ್ಟಬೇಕಾದ ಮಕ್ಕಳದ್ದು ಎಂಬ ಇರಾದೆಯಿಂದ ನೀರು ಗಾಳಿ ಮಣ್ಣು ಹಾಳಾಗುವ ದಿನಮಾನದಲ್ಲಿ ರೈ ಅವರು ಹೆಚ್ಚು ಬರೆಯುತ್ತಿರುವುದು ಪರಿಸರದ ಬಗ್ಗೆ. ಅವರ 40 ಕೃತಿಗಳ ಪೈಕಿ ಸುಮಾರು 18 ಕೃತಿಗಳು ಪರಿಸರ ಸಂಬಂಧಿಸಿದ ಕೃತಿಗಳೇ ಆಗಿವೆ. ‘ದಿ ಹಿಂದು’ ರಾಷ್ಟ್ರೀಯ ದೈನಿಕ ಪ್ರಕಟಿಸುವ ವಾರ್ಷಿಕ ಕೃಷಿ ವಿಶೇಷಾಂಕದಲ್ಲಿ ‘ಕರ್ನಾಟಕದ ಕೃಷಿ ಸಾಧನೆ ಸಾಧ್ಯತೆ’ ಎನ್ನುವ ವಿಶೇಷ ಲೇಖನ ಪ್ರಕಟವಾಗಿದೆ.

ತರಂಗದಲ್ಲಿ ಇವರು ಸಹಸಂಪಾದಕರಾಗಿದ್ದಾಗ ಕನ್ನಡದ ಸಾಹಿತ್ಯ ದಿಗ್ಗಜರಾದ ತೇಜಸ್ವಿ, ಪುತಿನ, ಕೆಎಸ್ ನರಸಿಂಹಸ್ವಾಮಿ, ಎಸ್‌ಎಲ್ ಭೈರಪ್ಪ, ಚದುರಂಗ ಚೆನ್ನವೀರ ಕಣವಿ, ವೈಎನ್ಕೆ, ಕೈಯಾರ ಮೊದಲಾದವರ ವಿಶೇಷ ಸಂದರ್ಶನವನ್ನು ನಡೆಸಿದ್ದರು. ಇವರ ಕೃತಿಗಳಲ್ಲಿ ನೆಲದವರು, ಕೃಷಿ-ದೇಸೀ ಚಿಂತನೆ, ಹಸಿರು-ಉಸಿರು (ಅತ್ಯುತ್ತಮ ಕೃಷಿ ಪುಸ್ತಕ-ಬೆಂಗಳೂರು ಕೃಷಿ ವಿವಿ ಪ್ರಶಸ್ತಿ)., ನೆಲಮುಖಿ (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಡಾ. ಹಾ.ಮಾ. ನಾಯಕ ಅಂಕಣ ಪ್ರಶಸ್ತಿ ಪಡೆದ ಕೃತಿ) ಬೀಜಧ್ಯಾನ, ಹಳ್ಳಿಯ ಆತ್ಮಕಥೆ, ಬೇರು-ಬದುಕು (ಅತ್ಯುತ್ತಮ ಕೃಷಿ ಪುಸ್ತಕ ಬೆಂಗಳೂರು ಕೃಷಿ ವಿವಿ ಪ್ರಶಸ್ತಿ), ಕೊರೋನಾ ನಂತರದ ಗ್ರಾಮ ಭಾರತ, ಕಾಂಕ್ರೀಟ್ ಕಾಡಿನ ಪುಟ್ಟ ಕಿಟಕಿ, ಬೊಗಸೆ ತುಂಬಾ ಬೀಜ, ಸಾವಯವ ಕೃಷಿ (8ನೇ ಮುದ್ರಣ), ಹಸಿರು ಕೃಷಿಯ ನಿಟ್ಟುಸಿರುಗಳು (2ನೇ ಮುದ್ರಣ) ನಂದನವನ ಚೌಟರ ತೋಟ ಹಣ್ಣುಗಳ ಆಗರ-ಸಸ್ಯಕಾಶಿ ಸೋನ್ಸ್‌ಫಾರ್ಮ್, ಮನಮೋಹನ-ಜೇನೇ ಜೀವನ, ಬಿ.ಕೆ. ದೇವರಾವ್-ಅನ್ನದಾರಿಯ ಅನಂತ ಹೆಜ್ಜೆ, ಬದನಾಜೆ ಶಂಕರ ಭಟ್-ಅಡಿಕೆ ಮೌಲ್ಯವರ್ಧನೆಯ ನೆಲವಿಜ್ಞಾನಿ, ಎಂಟು ಲೋಕ, ವಿಶುಕುಮಾರ್ ಬದುಕು ಬರಹ, ಹೊನ್ನಯ್ಯ ಶೆಟ್ಟಿ ಬದುಕು ಬರಹ ಡಾ. ಮೋಹನ ಆಳ್ವ, ಬದುಕು ಬರಹ ತೇಜಸ್ವಿಯೊಳಗೊಬ್ಬ ಕಲಾವಿದ, ಕೃಷಿಕ ಕವಿ, ಮೇಧಾವಿ ಕಯ್ಯಾರ ಕಿಂಞ್ಞಣ್ಣ ರೈ, ಬೇಟೆಗಾರನ ಹುಲಿಹೆಜ್ಜೆ ಕೆದಂಬಾಡಿ ಬದುಕು ಬರಹ ತೊದಲು, ಬೆಳ್ಳಿ ಗುರುತು, ಇದೂ ಪತ್ರಿಕೋದ್ಯಮ, ಕನ್ನಡದಲ್ಲಿ ಬೇಟೆ ಸಾಹಿತ್ಯ, ಕರ್ವಾಲೊ (ತುಳು ಅನುವಾದ) (ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಾಶನ)-ಕುವೆಂಪು ಭಾಷಾಭಾರತಿ ಪ್ರಶಸ್ತಿ ಪಡೆದ ಕೃತಿ, ಕರಾವಳಿ ಕನ್ನಡದ ಪತ್ರ ಸಾಹಿತ್ಯ, ಪೂರ್ಣಚಂದ್ರ ತೇಜಸ್ವಿ ನಮ್ಮೆಲ್ಲರ ತೇಜಸ್ವಿ, ಹಸಿರು ಅಧ್ಯಾತ್ಮ ಪ್ರಮುಖವಾಗಿದೆ. ಲಂಕೇಶ್ ನೆನಪು, ನೆಲೆ, ಶ್ರೀದುರ್ಗಾ, ಪಂಚದುರ್ಗಾ, ಮಂಟಮೆ, ರಥಲೋಕ, ಸಿರಿ ಹೆಜ್ಜೆ, ಅಮೃತಬಿಂದು-ಶಾಶ್ವತಿ, ಬಾಳ್ವೆಯೇ ಬೆಳಕು. ಅಜಾತಶತ್ರು ಪಾಲ್ತಾಡಿ ನೆನಪು ಇವುಗಳು ಡಾ. ದೇರ್ಲ ಅವರ ಸಂಪಾದನೆಗಳಾಗಿದೆ. ಇಂತಹ ಸಾಧಕರನ್ನು ಗೌರವಿಸಲು ಜರ್ನಲಿಸ್ಟ್ ಯೂನಿಯನ್ ಸಂತಸ ಪಡುತ್ತದೆ ಎಂದು ರಾಮದಾಸ್ ಶೆಟ್ಟಿ ತಿಳಿಸಿದ್ದಾರೆ.

HPR Institute Of Nursing And Paramedical Sciences & Friends Beke

ಜಾಹೀರಾತು

SendShare7Share
Previous Post

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ) ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಪುತ್ತೂರು ವಲಯ ಇದರ ವಾರ್ಷಿಕ ಮಹಾಸಭೆ, ಛಾಯಾಗ್ರಾಹಕರ ಅಕಾಡೆಮಿ ಸ್ಥಾಪನೆಗೆ ಸರಕಾರಕ್ಕೆ ಮನವಿ: ಪದ್ಮಪ್ರಸಾದ್ ಜೈನ್

Next Post

ಸರಕಾರಿ ಶಾಲೆಯಲ್ಲಿ ಬಿಸಿಯೂಟ ಸವಿದ ಪುತ್ತೂರು ಶಾಸಕರು :ಬಿಸಿಯೂಟದ ಬಗ್ಗೆ ಪರಿಶೀಲನೆ ಮಾಡುವುದು ನನ್ನ ಕರ್ತವ್ಯ ಎಂದ ಶಾಸಕ ಅಶೋಕ್ ರೈ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..