ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ರಿ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಪುದುವೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದೂರುದ್ರ ಭೂಮಿಯನ್ನು ನಿರ್ಮಿಸಿದ್ದು ಸಿಲಿಕಾನ್ ಚೇಂಬರ್ ಅಳವಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ,151630 ಮೊತ್ತದ ಸಹಾಯಧನದ ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿಯವರಾದ ಶ್ರೀಯುತ ಯಶೋಧರ ಕೆ ರವರು ರುದ್ರಭೂಮಿ ಸಮಿತಿಯ ಅಧ್ಯಕ್ಷರಾದ ಬೊಮ್ಮಣ್ಣ ಗೌಡ ಹಾಗೂ ಪದಾಧಿಕಾರಿಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಯುತ ರವಿಬಸಪ್ಪ ಗೌಡ,ಪುದುವೆಟ್ಟು ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಪೂರ್ಣಾಕ್ಷ ಬಿ,ಜನಜಾಗೃತಿ ಗ್ರಾಮ ಸಮಿತಿಯ ಅಧ್ಯಕ್ಷರಾದ ದೇವನಗೌಡ ಬೊಲ್ಮಾನರು, ರುದ್ರಭೂಮಿ ಸಮಿತಿಯ ಪದಾಧಿಕಾರಿಗಳಾದ ಸಜೀವ್ ಹಾಗೂ ಚಿತ್ತರಂಜನ್ ಜೈನ್, ಪುದುವೆಟ್ಟು ಒಕ್ಕೂಟದ ಅಧ್ಯಕ್ಷರಾದ ಶಶಿಧರ ಮೀಯರು ಒಕ್ಕೂಟದ ಅಧ್ಯಕ್ಷರಾದ ಅಪೂರ್ವ ಜೈನ್, ಕೆಮ್ಮಟೆ ಒಕ್ಕೂಟದ ಅಧ್ಯಕ್ಷರಾದ ಗಣೇಶ್ ಸಾಲಿಯಾನ್ ಹಾಗೂ ಪದಾಧಿಕಾರಿಗಳು,ಪುದುವೆಟ್ಟು ಶೌರ್ಯ ಘಟಕದ ಸ್ವಯಂಸೇವಕರು, ಅಶೋಕ್ ಟ್ರೇಡರ್ಸ್ ಮಾಲಕರಾದ ಅಶೋಕ್, ವಲಯ ಮೇಲ್ವಿಚಾರಕ ರವೀಂದ್ರ ಬಿ, ಸೇವಾ ಪ್ರತಿನಿಧಿಗಳಾದ ಆನಂದ್ ಹಾಗು ಚೈತ್ರರವರು ಉಪಸ್ಥಿತರಿದ್ದರು