ಬೆಳ್ತಂಗಡಿ : ಸರ್ಕಾರಿ ಪ್ರೌಢಶಾಲೆ ಅರಸಿನಮಕ್ಕಿ ಮುಂತಾದ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಹಾಗೂ ಹಲವು ಪದವಿ ಪೂರ್ವ ಕಾಲೇಜುಗಳನ್ನು ಉನ್ನತಿಕರಿಸಿ ಕರ್ನಾಟಕ ಪಬ್ಲಿಕ್ ಶಾಲೆ ಗಳನ್ನಾಗಿ ಪ್ರಾರಂಭಿಸಲು ಮಂಜೂರು ಮಾಡಿ ಆದೇಶಿಸುವಂತೆ ಜುಲೈ 18 ರoದು ಬೆಳ್ತಂಗಡಿ ಶಾಸಕರ ಹರೀಶ್ ಪೂಂಜ ರವರು ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ
ಸರ್ಕಾರಿ ಪ್ರೌಢಶಾಲೆ ಮಚ್ಚಿನ, ಸರ್ಕಾರಿ ಪ್ರೌಢಶಾಲೆ ಕಳಿಯ,
ಸರ್ಕಾರಿ ಪ್ರೌಢಶಾಲೆ ವೇಣೂರು, ಸರ್ಕಾರಿ ಪ್ರೌಢಶಾಲೆ ಅಳದಂಗಡಿ,
ಸರ್ಕಾರಿ ಪ್ರೌಢಶಾಲೆ ಪದ್ಮುಂಜ, ಸರ್ಕಾರಿ ಪ್ರೌಢಶಾಲೆ ಕೊಕ್ರಾಡಿ,
ಹಾಗೂ ಇದೇ ವಿಷಯವಾಗಿ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾದ ರಶ್ಮಿ ಹಾಗೂ ಶಿಕ್ಷಣ ಇಲಾಖೆಯ ಕಮಿಷನರ್ ಆಗಿರುವ ತ್ರಿಲೋಕ್ ಚಂದ್ರ ಅವರನ್ನು ಭೇಟಿಯಾಗಿ ಅತೀ ಶೀಘ್ರದಲ್ಲಿ ಮೆಲ್ಕಾಣಿಸಿರುವ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ ಗಳನ್ನಾಗಿ ಪ್ರಾರಂಭಿಸಲು ಮಂಜೂರು ಮಾಡಿ ಆದೇಶಿಸುವಂತೆ ವಿನಂತಿಸಿದರು.



                                









			










