ತರೀಕೆರೆ (ಆ.12):- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಮಗಳೂರು, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ,ತರೀಕೆರೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ರೋಟರಿ ಕ್ಲಬ್ ತರೀಕೆರೆ ಮತ್ತು ಸೇವಾಭಾರತಿ – ಸೇವಾಧಾಮ, ಚಿಕ್ಕಮಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ
31ನೇ ವಸತಿಯುತ ಉಚಿತ ಆರೋಗ್ಯ ತಪಾಸಣಾ, ಮಾಹಿತಿ ಹಾಗೂ ಜಾಗೃತಿ ಶಿಬಿರದ ಉದ್ಘಾಟನಾ ಸಮಾರಂಭವು ಆಗಸ್ಟ್ 12 ರಂದು ತರೀಕೆರೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ತರೀಕೆರೆ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ| ಚಂದ್ರಶೇಖರ್ ಬಿ.ಜಿ ಉದ್ಘಾಟಿಸಿ ಸೇವಾಧಾಮ ಮಾಡುವ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಸಮಾಜದಲ್ಲಿ ಹಿಂದುಳಿಯದೆ ಪ್ರತಿಯೊಂದು ವಿಷಯದಲ್ಲೂ ಮುಂದೆ ಬರಬೇಕು ಎನ್ನುವ ದೃಷ್ಟಿಯಿಂದ ಇಂತಹ ಶಿಬಿರವನ್ನು ಆಯೋಜಿಸುವಾಗ ನಮ್ಮಿಂದ ಸಂಪೂರ್ಣವಾಗಿ ಸಹಕಾರವನ್ನು ನೀಡುತ್ತೇವೆ ಹಾಗೇ ಸೇವಾಭಾರತಿ ಸಂಸ್ಥೆಯು ಇನ್ನು ಹೆಚ್ಚಿನ ಸೇವಾಕಾರ್ಯಗಳನ್ನು ಮಾಡುವ ಯಶಸ್ಸು ನಿಮ್ಮದಾಗಲಿ ಎಂದು ಉದ್ಘಾಟಕರ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ತರೀಕೆರೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಚನ್ನಬಸಪ್ಪ ಎಂ. ಜೆ, ಸಹಾಯಕ ಗವರ್ನರ್, ವಲಯ -7, ಜಿಲ್ಲೆ -3182 ರೋ। ಪ್ರವೀಣ್ ನಹರ್ ಟಿ ಎಂ, ತರೀಕೆರೆ ರೋಟರಿ ಕ್ಲಬ್ ಅಧ್ಯಕ್ಷರಾದ ರೋ। ರವಿ ಕುಮಾರ್ ಬಿ. ಪಿ, ತರೀಕೆರೆ ರೋಟರಿ ಕ್ಲಬ್ ಕಾರ್ಯದರ್ಶಿ ರೋ। ಪ್ರವೀಣ್ ಪಿ, ಜಿಲ್ಲಾ ಸಂಯೋಜಕರು ಶ್ರೀ ರಾಬರ್ಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೇವಾಭಾರತಿ ಫಂಡ್ ರೈಸಿಂಗ್ ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀ ಆಶ್ರಿತ್ ಸಿ.ಪಿ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕರಾದ ಶ್ರೀ ನಾಗಾರ್ಜುನ್ ಡಿ ಎ ಕಾರ್ಯಕ್ರಮವನ್ನು ನಿರೂಪಿಸಿ, ದಕ್ಷಿಣ ಕನ್ನಡ ಮತ್ತು ಕೊಡಗು ಕ್ಷೇತ್ರ ಸಂಯೋಜಕರಾದ ಕುಸುಮಾಧರ್ ಧನ್ಯವಾದವಿತ್ತರು.
ಒಟ್ಟು 8 ಮಂದಿ ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.
























