ಪುತ್ತೂರು: ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಿಚಾರದಲ್ಲಿ ಮುಸ್ಲಿಂ ಸಮುದಾಯದವರನ್ನು ಎಳೆದು ತರುತ್ತಿರುವುದು ಖೇದಕರ. ಮುಸ್ಲಿಂ ಧಾರ್ಮಿಕ ಮುಖಂಡರಾಗಲೀ, ಸಂಘಟನೆಯ ಪ್ರಮುಖರಾಗಲೀ ಧರ್ಮಸ್ಥಳದ ಪರ ವಿರುದ್ಧ ಮಾತಾಡಿಲ್ಲ. ಕೆಲವು ವ್ಯಕ್ತಿಗಳು ವಿನಾಕರಣ ಮುಸ್ಲಿಮರನ್ನು ಪಿತೂರಿಯ ಭಾಗವೆಂದು ಆರೋಪಿಸುತ್ತಿರುವುದು ಸರಿಯಲ್ಲ ಎಂದು ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಹೇಳಿದರು.
ದಕ್ಷಿಣ ಭಾರತದ ಏಕೈಕ ಜೈನ ಆಡಳಿತದ ಧರ್ಮಸ್ಥಳವನ್ನು ಅವರಿಂದ ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿರುವುದನ್ನು ಧರ್ಮಾಧಿಕಾರಿಗಳು ಅರ್ಥಮಾಡಿಕೊಳ್ಳಬೇಕಾಗಿದೆ. ವಿರೋಧ ಪಕ್ಷ ನಾಯಕ ಆರ್. ಅಶೋಕ್ ಮುಸ್ಲಿಮರ ಕೈವಾಡವಿದ್ದು, ಅನಾಮಿಕ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿ. ಆತ ದೂರು ನೀಡಿದ ಕಾರಣ ಎಸ್. ಐ. ಟಿ. ತನಿಖೆ ನಡೆಯುತ್ತಿದೆ ಎಂಬ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮಾಜಿ ಮುಖ್ಯ ಮಂತ್ರಿ ಅಶ್ವಥ್ ನಾರಾಯಣ ಪಿ.ಎಪ್. ಐ. ಕೈವಾಡವಿದೆ ಎಂದು ಹೇಳುತ್ತಿದ್ದು, ನಿಷೇಧಿತ ಸಂಘಟನೆಯ ಹೆಸರು ಹೇಳುವುದು ಸರಿಯಲ್ಲ. ಘಟನೆಯನ್ನು ತಿರುಚಿ ಕೋಮುಗಲಭೆ ಸೃಷ್ಠಿಸುವ ಹುನ್ನಾರ ನಡೆಯುತ್ತಿದೆ. ಜನಾರ್ಧನ ಪೂಜಾರಿ ಧರ್ಮಸ್ಥಳದಲ್ಲಿ ಯಾಕೆ ಚರ್ಚ್-ಮಸೀದಿಯಲ್ಲಿ ಹುಡುಕಿದರೂ ಶವ ಸಿಗುತ್ತದೆ ಎಂಬ ಬಾಲಿಶ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಸ್ಲಿಂ ಹೆಣ್ಣು ಮಕ್ಕಳನ್ನು ಮದುವೆಯಾಗುವ ಹಿಂದೂ ಹುಡುಗರಿಗೆ ರೂ.೫ ಲಕ್ಷ ನೀಡುತ್ತೇನೆ ಎನ್ನುವ ಬಸವನಗೌಡ ಪಾಟೀಲ್ ಯತ್ನಾಳ್ ಹಿಂದೂ ಸಮಾಜದ ಪ್ರಾಯ ಮೀರಿದ ಹೆಣ್ಣುಮಕ್ಕಳಿಗೆ ಮೊದಲು ಮದುವೆ ಮಾಡಿಸಬೇಕು. ಮುಸ್ಲಿಂ ಹೆಣ್ಣುಮಕ್ಕಳಿಗೆ ಮದುವೆ ಮಾಡಲು ಅವರ ತಂದೆತಾಯಿ-ಜಅಮಾತ್ ಇದ್ದು, ನೀವು ತಲೆ ಕೆಡಿಸಿಕೊಳ್ಳಬೇಡಿ. ಪ್ರಧಾನಿ ಮೋದಿಯವರ ಪತ್ನಿ ಒಂದಾಗಿರುವ ಕಾರ್ಯ ಮಾಡಲಿ. ಪುತ್ತೂರಿನಲ್ಲಿ ಹಿಂದು ಮುಖಂಡನ ಮಗ ಗರ್ಭಿಣಿಯಾಗಿಸಿದ ಪ್ರಕರಣದಲ್ಲಿ ಯುವತಿಯ ಜತೆಗೆ ಮೊದಲು ಮದುವೆ ಮಾಡಿಸಿ. ಈ ಮೂಲಕ ಸಮಾಜದ ಸುಧಾರಣೆಗೆ ಒಳ್ಳೆಯ ಕೆಲಸ ಮಾಡಿ ಎಂದರು.
ಮುಸ್ಲಿಂ ಯುವಜನ ಪರಿಷತ್ ಕೋಶಾಧಿಕಾರಿ ಅಶ್ರಫ್ ಬಾವು ಪಡೀಲು, ಕಾರ್ಯದರ್ಶಿ ಬಶೀರ್ ಪರ್ಲಡ್ಕ, ಪ್ರಮುಖರಾದ ಹಂಝ ಕಬಕ, ನೌಶದ್ ಬೊಳುವಾರು ಉಪಸ್ಥಿತರಿದ್ದರು.
























