ಕಾಬೂಲ್: ಪಾಕಿಸ್ತಾನ ಗಡಿಯ ಬಳಿ ಪೂರ್ವ ಅಫ್ಘಾನಿಸ್ತಾನದಲ್ಲಿ ಭಾನುವಾರ ತಡರಾತ್ರಿ 6.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.
ಪ್ರಬಲ ಭೂಕಂಪನದಿಂದ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು 15 ಜನರು ಗಾಯಗೊಂಡಿದ್ದಾರೆ ಎಂದು ಅಫಘಾನ್ ನಂಗರ್ಹಾರ್ ಸಾರ್ವಜನಿಕ ಆರೋಗ್ಯ ಇಲಾಖೆಯ ವಕ್ತಾರ ನಕಿಬುಲ್ಲಾ ರಹೀಮಿ ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಮಾಹಿತಿ ನೀಡಿದ್ದು, ಭೂಕಂಪದ ಕೇಂದ್ರಬಿಂದು ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ ಬಳಿ ಇತ್ತು ಮತ್ತು ಅದು 8 ಕಿಲೋಮೀಟರ್ ಆಳದಲ್ಲಿತ್ತು ಎಂದು ಯುಎಸ್ಜಿಎಸ್ ತಿಳಿಸಿದೆ. ಸ್ಥಳೀಯ ಸಮಯ ಭಾನುವಾರ ರಾತ್ರಿ 11:47 ಕ್ಕೆ ಇದು ಸಂಭವಿಸಿದೆ.