ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಪುತ್ತೂರು ವತಿಯಿಂದ ರಾಣಿ ಅಬ್ಬಕ್ಕ ಅವರ 500 ನೇ ಜನ್ಮ ದಿನಾಚರಣೆ ನಿಮಿತ್ತ ದಕ್ಷಿಣ ಕರ್ನಾಟಕದಾದ್ಯಂತ ರಥಯಾತ್ರೆ, ಪುತ್ತೂರಿನ ಕಾರ್ಯಕ್ರಮಗಳ ಬಗ್ಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ನಗರ ಕಾರ್ಯದರ್ಶಿ ಚರಣ್ ರಾಜ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ. ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಉಳ್ಳಾಲದ ವೀರ ರಾಣಿ ಅಬ್ಬಕ್ಕ ಅವರ 500 ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಯೋಜಿಸಲಾಗಿದೆ. ಇದರ ಅಂಗವಾಗಿ, ದಿನಾಂಕ:06-09-2025ರಿಂದ 17-09-2025ರವರೆಗೆ ದಕ್ಷಿಣ ಕರ್ನಾಟಕದಾದ್ಯಂತ ಒಂದು ಬೃಹತ್ ರದಯಾತ್ರೆಯನ್ನು ಆಯೋಜಿಸಲಾಗಿದೆ. ಈ ರಥಯಾತ್ರೆಯು ದಿನಾಂಕ 15-09-2025ನೇ ಸೋಮವಾರ ಉಪ್ಪಿನಂಗಡಿಯ ಮೂಲಕ ಪುತ್ತೂರಿಗೆ ಆಗಮಿಸಲ್ಲಿದ್ದು ಪುತ್ತೂರಿನ ಪಡೀಲಿನಲ್ಲಿ ರಥವನ್ನು ಸ್ವಾಗತಿಸಿ ನಂತರ ಬೊಳುವಾರು ಮೂಲಕ ನೆಹರು ನಗರಕ್ಕೆ ತೆರಳಿ ವಿವೇಕಾನಂದ ವಿದ್ಯಾವರ್ದಕ ಸಂಘದ ಆವರಣದಲ್ಲಿ ಸಭಾಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಸಭಾಕಾರ್ಯಕ್ರಮದಲ್ಲಿ ಹಿರಿಯರಾದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಇವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಭಾವಿಪ ಮಂಗಳೂರು ವಿಭಾಗ ಪ್ರಮುಖರಾದ ಶ್ರೀ ಕೇಶವ ಬಂಗೇರ ರವರು ಮುಖ್ಯ ವಕ್ತಾರರಾಗಿರುತ್ತಾರೆ. ಮುಖ್ಯ ಅಧಿತಿಗಳಾಗಿ ಉದ್ಯಮಿ ಶ್ರೀ ಕಿರಣ್ ಚಂದ್ರ ಪುಷ್ಪಗಿರಿ ಇವರು ಉಪಸ್ತಿತರಿರುತ್ತಾರೆ, ಅಭಾವಿಪ ಪುತ್ತೂರು ಜಿಲ್ಲಾ ಸಂಚಾಲಕರಾದ ಸಮನ್ವಿತ್ ಕೆ ಇವರು ಪ್ರಾಸ್ತವಿಕ ನುಡಿಗಳನ್ನು ಆಡಲಿದ್ದಾರೆ. ಈ ಸಂರ್ದಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಎಲ್ಲಾ ಪದಾಧಿಕಾರಿಗಳು ಹಾಗೂ ವಿವೇಕಾನಂದ ವಿದ್ಯಾಸಂಸ್ಥೆಗಳ ಸಂಚಾಲಕರು, ಪ್ರಾಂಶುಪಾಲರು, ಉಪಾನ್ಯಸಕರು ಹಾಗು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಆ ಬಾ ವಿ ಪ ಜಿಲ್ಲಾ ಸಂಚಾಲಕ ಸಮನ್ವಿತ್, ಮಂಗಳೂರು ವಿಭಾಗ ವಿದ್ಯಾರ್ಥಿ ಪ್ರಮುಖ ಸಿಂಚನ, ಪುತ್ತೂರು ನಗರ ಸಹ ಸಂಚಾಲಕ ರಕ್ಷಾ ಉಪಸ್ಥಿತರಿದ್ದರು.