ದಶಕಗಳ ಕಾಲ ಹಿಂದೂ ಸಮಾಜಕ್ಕೋಸ್ಕರ ಹೋರಾಡಿಕೊಂಡು ಬಂದಿರುವ ಶ್ರೀಯುತ ಅರುಣ್ ಕುಮಾರ್ ಪುತ್ತಿಲರಿಗೆ “ಧರ್ಮರತ್ನ” ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಸನಾತನ ಹಿಂದೂ ಪ್ರತಿಷ್ಠಾನದ ವತಿಯಿಂದ ಆರಾಧಿಸಲ್ಪಟ್ಟುಕೊಂಡು ಬರುತ್ತಿರುವ ಗಣೇಶೋತ್ಸವದಲ್ಲಿ ರಾಜರಾಜೇಶ್ವರಿ ನಗರದ ಶಾಸಕರಾದ ಮುನಿರತ್ನ ಇವರು ಅರುಣ್ ಕುಮಾರ್ ಪುತ್ತಿಲರ ಗುಣಗಾನವನ್ನು ಮಾಡಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪುತ್ತಿಲರು, ಹಿಂದೂ ಸಮಾಜಕ್ಕೋಸ್ಕರ ದುಡಿದದ್ದನ್ನು ಪರಿಗಣಿಸಿ ಕೊಟ್ಟ ಪ್ರಶಸ್ತಿಗೆ ತಾನು ಚಿರಋಣಿ ಎಂದು ಹೇಳುತ್ತಾ ತಾನು ಜೀವನಪೂರ್ತಿ ಹಿಂದೂ ಬಾಂಧವರ ಅಭಿವೃದ್ಧಿ ಹಾಗೂ ರಕ್ಷಣೆಗಾಗಿ ಸದಾ ಬದ್ಧ ಎಂಬ ವಾಗ್ದಾನವನ್ನು ನೀಡಿದರು. ಪ್ರತಿಷ್ಠಾನದ ಹಾಗೂ ಊರಿನ ಹಲವು ಮುಖಂಡರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.