ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ನೆಕ್ಕರಾಜೆಯ ರಮೇಶ್ ಪರಂದಾಜೆಯವರು ತೆಂಗಿನಕಾಯಿ ಕೀಳುವಾಗ ಆಕಸ್ಮಿತ ವಾಗಿ ಕಾಲುಜಾರಿ ಬಿದ್ದು ಕೈ, ಕಾಲು ಹಾಗೂ ಸೊಂಟ ಜಖಂಗೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡು ಈಗ ಮನೆಯಲ್ಲಿಯೇ ಮಲಗಿದ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತಿದ್ದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿಂದ ಅವರ ಮನೆಗೆ ಭೇಟಿ ನೀಡಿ ಅವರ ಅರೋಗ್ಯವನ್ನು ವಿಚಾರಿಸಿ ಅವರಿಗೆ ಆರ್ಥಿಕ ಸಹಕಾರದ ಚೆಕ್ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರಾದ ಶ್ರೀರಾಮ್ ಭಟ್ ಪಾತಾಳ,ಕೋಶಾಧಿಕಾರಿ ರೂಪೇಶ್ ನಾಯ್ಕ್, ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೊಡಿಬೈಲ್, ಪ್ರಮುಖರಾದ, ಮಹೇಂದ್ರ ವರ್ಮ,ಹರಿಕೃಷ್ಣ ಕಾಂಚನ,ಉಪ್ಪಿನಂಗಡಿ ಸಿ. ಎ. ಬ್ಯಾಂಕಿನ ನಿರ್ದೇಶಕರಾದ ಸುಂದರ ಮತ್ತು ಇತರರು ಉಪಸ್ಥಿರಿದ್ದರು