ಪುತ್ತೂರು: ದಿನಾಂಕ :25.04.2022 ರಂದು ಕೆ ಎಸ್ ಆರ್ ಟಿ ಸಿ ಬಸ್ ಸುಳ್ಯದಿಂದ ಪುತ್ತೂರಿಗೆ ಸಂಚರಿಸುತ್ತಿದ್ದ ಸಮಯ ಯುವತಿ ಕುಳಿತಿದ್ದ ಸೀಟಿನ ಪಕ್ಕಕ್ಕೆ ಕುಳಿತಿದ್ದ ಆರೋಪಿ ಮೊಹಮ್ಮದ್ ಸತ್ತಾರ್ ಮಾಡೂರು ಗ್ರಾಮದ ನಿವಾಸಿ ಎಂಬಾತನು ಬಸ್ಸು ಸಂಚರಿಸುತ್ತಿದ್ದ ಸಮಯ ಲೈಂಗಿಕ ಕಿರಿಕುಳ ನೀಡಿರುವ ಪ್ರಕರಣದಲ್ಲಿ ತನಿಖಾಧಿಕಾರಿಗಳಾಗಿ ಪುತ್ತೂರು ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕರಾಗಿದ್ದ ಶ್ರೀ ರಾಜೇಶ್ ಕೆ ವಿ ರವರು ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸದ್ರಿ ಪ್ರಕರಣದಲ್ಲಿ ಮಾನ್ಯ ಪ್ರಧಾನ ಹಿರಿಯ ಸಿವಿಲ್ ಮತ್ತು ಎ ಸಿ ಜೆ ಎಂ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಪ್ರಕೃತಿ ಕಲ್ಯಾಣಪುರ್ ರವರು ಆರೋಪಿಯ ಮೇಲೆ ಆರೋಪ ಸಾಬೀತಾಗಿದೆ ಎಂದು ನಾಲ್ಕು ತಿಂಗಳಗಳ ಕಾರವಾಸ ಮತ್ತು 10,000 ರೂ ದಂಡ ಹಾಗೂ ದಂಡ ನೀಡಲು ತಪ್ಪಿದಲ್ಲಿ ಒಂದು ತಿಂಗಳ ಕಾಲ ಹೆಚ್ಚುವರಿ ಕಾರವಾಸ ಶಿಕ್ಷೆಯನ್ನು ವಿಧಿಸಿರುತ್ತಾರೆ.