‘ಬಿಗ್ ಬಾಸ್’ನಲ್ಲಿ ಹಲವು ರೀತಿಯ ಸ್ಪರ್ಧಿಗಳು ಬಂದು ಹೋಗಿದ್ದಾರೆ. ವಿವಾಹ ಆದವರು, ಪ್ರೇಮಿಗಳು ಕೂಡ ದೊಡ್ಮನೆಗೆ ಬಂದ ಉದಾಹರಣೆ ಇದೆ. ಮಲಯಾಳಂನಲ್ಲಿ ಲೆಸ್ಬಿಯನ್ ಕಪಲ್ ಗಮನ ಸೆಳೆಯುತ್ತಿದ್ದಾರೆ. ಈ ಜೋಡಿ ಬಿಗ್ ಬಾಸ್ ಮನೆಯಲ್ಲೇ ರಿಂಗ್ ಬದಲಿಸಿಕೊಂಡು, ಫ್ರೆಂಚ್ ಕಿಸ್ ಮಾಡಿದ್ದಾರೆ. ಸದ್ಯ ಈ ಜೋಡಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.
ಅಧಿಲಾ ಹಾಗೂ ನೂರಾ ದೊಡ್ಮನೆಗೆ ಬಂದಿದ್ದಾರೆ. ಇವರು ಲೆಸ್ಬಿಯನ್ ಕಪಲ್. ಅಂದರೆ, ಇವರಿಗೆ ಪುರಷರನ್ನು ಕಂಡರೆ ಆಕರ್ಷಣೆ ಉಂಟಾಗೋದಿಲ್ಲ. ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ. ಅವರನ್ನು ಕರೆತಂದ ಬಗ್ಗೆ ಕೆಲವರು ಅಪಸ್ವರ ಕೂಡ ತೆಗೆದಿದ್ದಾರೆ. ಆದರೆ, ಇದಕ್ಕೆ ಶೋ ನಡೆಸುವವರಿಂದಲೇ ಸಂಪೂರ್ಣ ಬೆಂಬಲ ಇದೆ.