ಚಿನ್ನಯ್ಯ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಮೊದಲ ಬಾರಿಗೆ ಭೇಟಿ ನೀಡಿದ್ದ ವೇಳೆ ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎನ್ನಲಾಗ್ತಿದೆ. ವಿಡಿಯೋದಲ್ಲಿ ಏನಿದೆ ಗೊತ್ತಾ?
ಧರ್ಮಸ್ಥಳ ಶವಹೂತಿಟ್ಟ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ಸಾಗಿದೆ. ಕೇಸ್ ಕುರಿತು ಹಲವು ವಿಚಾರಗಳು ಬಯಲಾಗ್ತಿದೆ. ದೂರುದಾರ ಚಿನ್ನಯ್ಯನನ್ನು ಎಸ್ಐಟಿ ಬಂಧಿಸಿ ಸುದೀರ್ಘ ವಿಚಾರಣೆ ನಡೆಸಿತು. ಇದೀಗ ಚಿನ್ನಯ್ಯ ಶಿವಮೊಗ್ಗ ಜೈಲಿನಲ್ಲಿದ್ದಾನೆ. ಚಿನ್ನಯ್ಯ ದೂರು ದಾಖಲಿಸುವ ಮುನ್ನ ಮಾಡಿದ ಕೆಲ ವಿಡಿಯೋಗಳು ಈಗ ಸದ್ದು ಮಾಡ್ತಿದೆ. ಇದೀಗ ಚಿನ್ನಯ್ಯನ ಎರಡನೇ ವಿಡಿಯೋ ರಿಲೀಸ್ ಆಗಿದೆ. ತಿಮರೋಡಿ ಮನೆಯಲ್ಲಿ ಮಾಡಲಾಗಿದೆ ಎನ್ನಲಾಗ್ತಿರುವ ಈ ವಿಡಿಯೋದಲ್ಲಿ ಚಿನ್ನಯ್ಯ ಏನ್ ಹೇಳಿದ್ದಾನೆ.
ದೂರುದಾರ ಚಿನ್ನಯ್ಯ, ಸೌಜನ್ಯನ ಹೋರಾಟಗಾರರನ್ನು ಭೇಟಿ ಮಾಡಿದ ವೇಳೆ ಮಾತಾಡಿದ್ದಾರೆ ಎನ್ನಲಾಗ್ತಿರೋ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. 2 ನಿಮಿಷಗಳ 2ನೇ ವಿಡಿಯೋ ಇದೀಗ ರಿಲೀಸ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮಹೇಶ್ ತಿಮರೋಡಿ ಮನೆಯಲ್ಲಿ ಚಿನ್ನಯ್ಯ ಮಾತುಕತೆ ನಡೆಸಿದ ವಿಡಿಯೋ ಇದಾಗಿದೆ ಎನ್ನಲಾಗ್ತಿದೆ. 2023ರ ಆಗಸ್ಟ್ನಲ್ಲಿ ಈ ವಿಡಿಯೋ ಮಾಡಲಾಗಿದ್ದು, ಚಿನ್ನಯ್ಯ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಮೊದಲ ಬಾರಿಗೆ ಭೇಟಿ ನೀಡಿದ್ದ ವೇಳೆ ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎನ್ನಲಾಗ್ತಿದೆ.
ತಿಮರೋಡಿ ಮನೆಯಲ್ಲೇ ಮಾಡಲಾಗಿದೆ ಎನ್ನಲಾಗ್ತಿರೋ ಈ 2 ನಿಮಿಷದ 58 ಸೆಕೆಂಡ್ಗಳ ಈ ವಿಡಿಯೋದಲ್ಲಿ ದೂರುದಾರ ಚಿನ್ನಯ್ಯ, ಧರ್ಮಸ್ಥಳ ತಾನೇ 70ಕ್ಕೂ ಹೆಚ್ಚು ಶವಗಳನ್ನ ಹೂತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಕೊಲೆಗೈದಿರುವ ಅನುಮಾನವನ್ನ ವ್ಯಕ್ತಪಡಿಸಿದ್ದಾನೆ.
ವಿಡಿಯೋದಲ್ಲಿ ಸ್ಪಾಟ್ ನಂಬರ್ 17ರ ಬಗ್ಗೆಯೂ ಚಿನ್ನಯ್ಯ ಮಾತಾಡಿದ್ದಾನೆ. ಗೋಮಟ್ಟ ಬೆಟ್ಟದಿಂದ ಬರುವ ಫಸ್ಟ್ ಟರ್ನ್ ನಲ್ಲಿ ಏನಿಲ್ಲ ಅಂದ್ರೂ 70ಕ್ಕೂ ಹೆಚ್ಚು ಹೆಣ ಹೂತು ಹಾಕಿದ್ದೇನೆ ಎಂದಿದ್ದಾನೆ. ಆ ಟರ್ನ್ ನಲ್ಲಿ ಬಿಳಿ ಸೀರೆಯ ಕೇರಳ ಮೂಲದ ಹೆಂಗಸಿನ ಹೆಣ ಹೂತು ಹಾಕಿದ್ದೇನೆ ಎಂದು ಆತ ಹೇಳಿದ್ದಾನೆ.