ಎಲ್ಲಿ ನೋಡಿದ್ರೂ ರಸ್ತೆ ಅವ್ಯವಸ್ಥೆಗಳದ್ದೇ ಸಮಸ್ಯೆ. ಕಳಪೆ ಕಾಮಗಾರಿಯ ಕಾರಣದಿಂದಾಗಿ ಅಲ್ಲಲ್ಲಿ ಗುಂಡಿ ಬಿದ್ದು, ವಾಹನ ಸಂಚಾರ ಕೂಡ ಕಷ್ಟ ಸಾಧ್ಯವಾಗಿದೆ. ಇನ್ನೂ ಇದಕ್ಕೆ ಸಂಬಂಧಪಟ್ಟವರು ಈ ಬಗ್ಗೆ ಕ್ಯಾರೇ ಅನ್ನುತ್ತಿಲ್ಲ. ಇದರಿಂದ ಗರಂ ಆದ ಉಡುಪಿಯ ಜನ ಸರ್ಕಾರ, ರಾಜಕೀಯ ಪಕ್ಷಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಗುಂಡಿ.. ಗುಂಡಿ… ಗುಂಡಿ… ಈಗಂತೂ ಎಲ್ಲಾ ಕಡೆಗಳಲ್ಲೂ ಹದಗೆಟ್ಟ ರಸ್ತೆಗಳದ್ದೇ ದೊಡ್ಡ ರಗಳೆಯಾಗಿ ಹೋಗಿವೆ. ಕಳಪೆ ಕಾಮಗಾರಿಯ ಕಾರಣದಿಂದಾಗಿ ಹೊಂಡ-ಗುಂಡಿಗಳು ಬಿದ್ದು, ರಸ್ತೆಗಳು ಹದಗೆಟ್ಟಿದ್ದು ಈ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸುವುದೇ ಜನರಿಗೊಂದು ದೊಡ್ಡ ತಲೆ ಬಿಸಿಯಾಗಿದೆ. ಹದಗೆಟ್ಟ ರಸ್ತೆಯ ಕಾರಣದಿಂದಾಗಿ ಸಂಚಾರಕ್ಕೆ ಅಡ್ಡಿಯಾಗುವುದು ಮಾತ್ರವಲ್ಲದೆ, ಅದೆಷ್ಟೋ ಅಮಾಯಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಷ್ಟದ್ರೂ ಕೂಡ ಸಂಬಂಧಪಟ್ಟವರು ಇದಕ್ಕೆ ಕ್ಯಾರೇ ಅನ್ನುತ್ತಿಲ್ಲ. ಇದರಿಂದ ಬೇಸತ್ತ ಉಡುಪಿಯ ಜನ ಸರ್ಕಾರ ಹಾಗೂ ರಾಜಕೀಯ ಪಕ್ಷಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ. ನಾವು ಟ್ಯಾಕ್ಸ್ ಪೇ ಮಾಡ್ತಿದ್ದೇವೆ, ನೀವು ರಸ್ತೆ ಸರಿ ಮಾಡಿಕಕೊಡ್ಬೇಕು ಅಷ್ಟೆ ಇಲ್ಲದಿದ್ರೆ ಉಗ್ರ ಹೋರಾಟ ಮಾಡ್ತೀವಿ ಎಂದು ರಾಜಕೀಯ ಪಕ್ಷಗಳನ್ನು ಬೆಂಡೆತ್ತಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ರಸ್ತೆ ಗುಂಡಿಗಳ ಸಮಸ್ಯೆಯಿಂದ ಬೇಸತ್ತ ಉಡುಪಿಯ ಜನ ರಾಜಕೀಯ ಪಕ್ಷಗಳನ್ನು ಬೆಂಡೆತ್ತಿದ್ದಾರೆ. ಇದು ನಮ್ಮ ಹಕ್ಕು, ನಮಗೆ ರಸ್ತೆ ಸರಿ ಮಾಡಿಕೊಡ್ಬೇಕು ಅಷ್ಟೇ ಎಂದು ಹೇಳಿದ್ದಾರೆ.
ಎಲ್ಲಾ ಪಕ್ಷದವರು ಒಂದು ಸಲ ಗಾಡಿ ತೆಗೆದುಕೊಂಡು ಈ ರೋಡಲ್ಲಿ ಬನ್ನಿ. ಇಲ್ಲಿನ ಅವಸ್ಥೆ ನಿಮ್ಗೂ ಗೊತ್ತಾಗುತ್ತದೆ. ನಾವೆಲ್ಲರೂ ಟ್ಯಾಕ್ಸ್ ಪೇ ಮಾಡ್ತಿದ್ದೇವೆ, ಹಾಗಾಗಿ ರೋಡನ್ನು ನೀವು ಸರಿ ಮಾಡಿಕೊಡ್ಬೇಕು, ನಾವು ವಿನಂತಿ ಮಾಡುವುದಲ್ಲ, ಇದು ನಮ್ಮ ಹಕ್ಕು, ಅದನ್ನು ಕೇಳ್ತಿದ್ದೇವೆ. ನಿಮ್ಮನ್ನು ಜನ ನಾಯಕರು ಅಂತ ಆರಿಸಿದ್ದು ನಾವು, ನಮ್ಮ ಗ್ರಾಮ ಊರನ್ನು ಅಭಿವೃದ್ಧಿ ಮಾಡುವುದು ನಿಮ್ಮ ಜವಾಬ್ದಾರಿ. ಈ ರೋಡಲ್ಲಿ ಹೋಗೋಕಾಗದೆ ನಾವು ಪರದಾಡ್ತಿದ್ದೇವೆ. ಯಾವುದೇ ಪಕ್ಷದವರಾಗಿರ್ಬೋದು ನಮ್ಗೆ ರೋಡ್ ಸರಿಯಾಗ್ಬೇಕು ಅಷ್ಟೆ. ಇಲ್ಲವೇ ಉಗ್ರ ಹೋರಾಟ ಮಾಡ್ತೇವೆ ಎಂದು ಕಿಡಿ ಕಾರಿದ್ದಾರೆ.