ಬೆಳ್ತಂಗಡಿ: ಸ.20: ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ಅತೀ ಅವಶ್ಯಕ ಬೇಡಿಕೆಗಳನ್ನು ದಿನಾಂಕ:30.06.2025 ರಂದು ನಡೆದ ಜಿಲ್ಲಾ ಕೆ.ಡಿ.ಪಿ ಸಭೆಯಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವರ ವಿಶೇಷ ಗಮನಕ್ಕೆ ತಂದಿದ್ದು ಹಾಗೂ ಮನವಿಯನ್ನು ಸಚಿವರಿಗೆ ನೀಡಿದ್ದು ಅದರಂತೆ ಆಸ್ಪತ್ರೆಯ ಕಟ್ಟಡದ ನಿರ್ವಹಣೆಗೆ ರೂ.50.00ಲಕ್ಷ ಅನುದಾನ ಬಿಡುಗಡೆಗೊಂಡಿದೆ.
ಅನುದಾನವನ್ನು ಆದ್ಯತೆಯ ಮೇರಗೆ ತಾಲೂಕು ಆಸ್ಪತ್ರೆಯಲ್ಲಿ ಶವಗಾರ ರಚನೆಗೆ ವಿನಿಯೋಗಿಸಲು ಅಧ್ಯಕ್ಷರು ಆರೋಗ್ಯ ರಕ್ಷಾ ಸಮಿತಿ ಬೆಳ್ತಂಗಡಿ ತಾಲೂಕು ಹಾಗೂ ಶಾಸಕರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಇವರು ಸಂಬಂಧಪಟ್ಟ ಆರೋಗ್ಯ ಇಲಾಖೆಯ ಇಂಜಿನಿಯರಿಂಗ್ ವಿಭಾಗಕ್ಕೆ ಸೂಚನೆಯನ್ನು ನೀಡಿದ್ದಾರೆ.