ಬಳಂಜ: ಮನಸ್ವಿನಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ( ರಿ) ಬಳಂಜ ಇದರ ವಾರ್ಷಿಕ ಮಹಾಸಭೆ ಯನ್ನು ದಿನಾಂಕ 19/09/2025 ರ ಶುಕ್ರವಾರ ದಂದು ಒಕ್ಕೂಟದ ಅಧ್ಯಕ್ಷ ರಾದ ಶ್ರೀಮತಿ ಲತಾ ರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು.
ಸ್ವಚ್ಛ ವಾಹಿನಿ ಯ ಚಾಲಕಿ, ನವಶಕ್ತೀ ಸಂಘದ ಸದಸ್ಯೆ ಶ್ರೀಮತಿ ಭಾರತಿ ರವರ ಪ್ರಾರ್ಥನೆ ಯೊಂದಿಗೆ ಸಭೆ ಯನ್ನು ಆರಂಭಿ ಸಲಾಯಿತು.
ಒಕ್ಕೂಟದ ಸದಸ್ಯೆ ಶ್ರೀಮತಿ ಶ್ರೀ ದೇವಿ ರವರು ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಸದಸ್ಯೆ ಶ್ರೀಮತಿ ಅಶ್ವಿನಿ ಯವರು ಗಣ್ಯರನ್ನು ಸ್ವಾಗತಿಸಿದರು. ಪಂಚಾಯತ್ ಸದಸ್ಯೆ ಹಾಗೂ ಒಕ್ಕೂಟದ ಅಧ್ಯಕ್ಷ ರು ಮಹಾಸಭೆ ಯನ್ನು ಉದ್ಘಾಟಿಸಿದರು.
ಪ್ರಸನ್ನ ರವರು ಉದ್ಘಾಟನಾ ಮಾತುಗಳನ್ನಾಡಿದರು.ವಲಯ ಮೇಲ್ವಿಚಾರಕ ರಾದ ಶ್ರೀ ಯುತ ಸ್ವಸ್ತಿಕ್ ಜೈನ್ ಸರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಜೀವಿನಿ ಯ ಧ್ಯೇಯೋದ್ದೇಶ ಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಯನ್ನು ನೀಡಿದರು.
MBK ವಿಮಲಾ ರವರು ಒಕ್ಕೂಟದ ವಾರ್ಷಿಕ ವರದಿ ಯನ್ನು ಮಂಡಿಸಿದರು.ವರದಿಯು ಸಂಜೀವಿನಿ ಚಪ್ಪಾಳೆ ಯೊಂದಿಗೆ ಸಭೆ ಯಲ್ಲಿ ಅನುಮೋದನೆ ಗೊಂಡಿತು.ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಭಾರತಿ ರವರು ಶಾಸನ ಬದ್ಧ ಲೆಕ್ಕ ಪರಿಶೋಧನೆ ಯ ವರದಿ ಯನ್ನು ಮಂಡಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯವರಾದ ಶ್ರೀ ಯುತ ಗಣೇಶ್ ಶೆಟ್ಟಿ ಸರ್ ರವರು ಸ್ವಚ್ಚತೆ ಬಗ್ಗೆ, ಘಟಕದ ಬಗ್ಗೆ, ಮಾಹಿತಿ ಯನ್ನು ನೀಡಿದರು.BRP-PRI ಶ್ರೀ ಕಲಾ ಮೇಡಂ ರವರು VPRP concept seeding ಬಗ್ಗೆ ಮಾಹಿತಿ ಯನ್ನು ನೀಡಿದರು.ನಂತರ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯನ್ನು ನಡೆಸಲಾಯಿತು.ಮತ್ತು ಪುಷ್ಪ ಗುಚ್ಛ ನೀಡಿ ದಾಖಲಾತಿ ಗಳನ್ನು ವರ್ಗಾಯಿಸುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು.ನಿರ್ಗಮಿತ ಸದಸ್ಯರು ಗಳನ್ನು ಗೌರವಿಸಲಾಯಿತು.
ಒಕ್ಕೂಟದ ಪ್ರಗತಿ ಗೆ ಸೂಕ್ತವಾದ ಮಾರ್ಗದರ್ಶನ ನೀಡುವ ಮೂಲಕ ಸಂಜೀವಿನಿ ಸಿಬ್ಬಂದಿ ಗಳಿಗೆ ಬೆನ್ನೆಲುಬಾಗಿ ನಿಂತ ವಲಯ ಮೇಲ್ವಿಚಾರಕ ರಾದ ಶ್ರೀಯುತ ಸ್ವಸ್ತಿಕ್ ಜೈನ್ ಸರ್ ಹಾಗೂ BRP-PRI ಶ್ರೀ ಕಲಾ ಮೇಡಂ ರವರನ್ನೂ ಗೌರವಿಸಲಾಯಿತು.ನಂತರ ವಲಯ ಮೇಲ್ವಿಚಾರಕ ರು “ವ್ಯಸನ ಮುಕ್ತ ಕರ್ನಾಟಕ ‘ ದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಧ್ಯೇಯ ಗೀತೆಯನ್ನು ಹಾಡುವುದರ ಮೂಲಕ ಸಭೆಯ ಮೆರುಗು ಇನ್ನಷ್ಟು ಹೆಚ್ಚಿಸಿತ್ತು . “ಸ್ವಚ್ಛತಾ ಹೀ ಸೇವಾ ” ಕಾರ್ಯಕ್ರಮ ದಡಿ ಪ್ರತಿಜ್ಞಾ ವಿಧಿ ಯನ್ನು ಕೈಗೊಳ್ಳಲಾಯಿತು.
ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.ಸಂಜೀವಿನಿ ಸಿಬ್ಬಂದಿ ಗಳು ಹಾಜರಿದ್ದು .ಸರ್ವ ರೀತಿಯಲ್ಲೂ ಸಹಕರಿಸಿ ದರು.LCRP ಬೇಬಿರವರ ಧನ್ಯವಾದ ಗಳೊಂದಿಗೆ ಸಭೆಯು ಸಂಪನ್ನಗೊಂಡಿತು.