• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸ್ತೋಮದ ನಡುವೆ ಕೆಲವರು ಅಸ್ವಸ್ಥ: ಆಸ್ಪತ್ರೆಗೆ ಭೇಟಿ‌ ನೀಡಿದ ಮಾಜಿ ಶಾಸಕ ಮತ್ತು ಪುತ್ತೂರು ಬಜೆಪಿ ಪದಾಧಿಕಾರಿಗಳು

ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸ್ತೋಮದ ನಡುವೆ ಕೆಲವರು ಅಸ್ವಸ್ಥ: ಆಸ್ಪತ್ರೆಗೆ ಭೇಟಿ‌ ನೀಡಿದ ಮಾಜಿ ಶಾಸಕ ಮತ್ತು ಪುತ್ತೂರು ಬಜೆಪಿ ಪದಾಧಿಕಾರಿಗಳು

October 21, 2025
ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮಯ್ಯನವರ ಹೇಳಿಕೆ ಕೈಲಾಗದವನು ಮೈ ಪರಚಿಕೊಂಡಂತಿದೆ: ಸಂಸದ ಕ್ಯಾ.ಚೌಟ

ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮಯ್ಯನವರ ಹೇಳಿಕೆ ಕೈಲಾಗದವನು ಮೈ ಪರಚಿಕೊಂಡಂತಿದೆ: ಸಂಸದ ಕ್ಯಾ.ಚೌಟ

October 21, 2025
ಪುತ್ತೂರು: ಬೆದ್ರಾಳದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ : ಶಾಸಕ ಅಶೋಕ್ ರೈ ಭೇಟಿ

ಪುತ್ತೂರು: ಬೆದ್ರಾಳದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ : ಶಾಸಕ ಅಶೋಕ್ ರೈ ಭೇಟಿ

October 21, 2025
14ರ ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಪ್ರಾಥಮಿಕ ಶಾಲೆಯ ಕು.ರಕ್ಷಿತಾ. ಜೆ  ರಾಷ್ಟ್ರಮಟ್ಟಕ್ಕೆ ಆಯ್ಕೆ.

14ರ ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಪ್ರಾಥಮಿಕ ಶಾಲೆಯ ಕು.ರಕ್ಷಿತಾ. ಜೆ ರಾಷ್ಟ್ರಮಟ್ಟಕ್ಕೆ ಆಯ್ಕೆ.

October 21, 2025
ಬೆಳ್ತಂಗಡಿ: 17ರ ವಯೋಮಾನದ  ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ಪ್ರೌಢಶಾಲೆಯ ಕು. ಯಕ್ಷಿತಾ.ಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ.

ಬೆಳ್ತಂಗಡಿ: 17ರ ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ಪ್ರೌಢಶಾಲೆಯ ಕು. ಯಕ್ಷಿತಾ.ಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ.

October 21, 2025
ಜಿಲ್ಲಾ ಮಟ್ಟದ ಹಿರಿಯರ ಕ್ರೀಡೆ : ಛಾಯಾಗ್ರಾಹಕ ಕುಂತೂರಿನ ರವಿ ಪೂಜಾರಿ ರಾಜ್ಯಮಟ್ಟಕ್ಕೆ

ಜಿಲ್ಲಾ ಮಟ್ಟದ ಹಿರಿಯರ ಕ್ರೀಡೆ : ಛಾಯಾಗ್ರಾಹಕ ಕುಂತೂರಿನ ರವಿ ಪೂಜಾರಿ ರಾಜ್ಯಮಟ್ಟಕ್ಕೆ

October 21, 2025
ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಆಸ್ಪತ್ರೆಗೆ ದಾಖಲಾದ ಅಸ್ವಸ್ಥರನ್ನು ಭೇಟಿ‌ ನೀಡಿದ ಶಾಸಕ ಅಶೋಕ್ ರೈ

ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಆಸ್ಪತ್ರೆಗೆ ದಾಖಲಾದ ಅಸ್ವಸ್ಥರನ್ನು ಭೇಟಿ‌ ನೀಡಿದ ಶಾಸಕ ಅಶೋಕ್ ರೈ

October 21, 2025
ಅಶೋಕ ಜನಮನ ಕಾರ್ಯಕ್ರಮ ಜನಸ್ತೋಮದ ನಡುವೆ ಕೆಲವರ ಅಸ್ವಸ್ಥ: ಕ್ಷಮೆ ಕೇಳಿದ ಶಾಸಕ ಅಶೋಕ್ ರೈ

ಅಶೋಕ ಜನಮನ ಕಾರ್ಯಕ್ರಮ ಜನಸ್ತೋಮದ ನಡುವೆ ಕೆಲವರ ಅಸ್ವಸ್ಥ: ಕ್ಷಮೆ ಕೇಳಿದ ಶಾಸಕ ಅಶೋಕ್ ರೈ

October 21, 2025
ಸಿಎಂ ಭಾಗವಹಿಸಿದ ಜನಮನ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಪುತ್ತೂರಿನ ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ 11ಕ್ಕೂ ಅಧಿಕ ಮಂದಿ ಮಹಿಳೆಯರು ಹಾಗೂ ಮಕ್ಕಳು ಅಸ್ವಸ್ಥ

ಸಿಎಂ ಭಾಗವಹಿಸಿದ ಜನಮನ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಪುತ್ತೂರಿನ ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ 11ಕ್ಕೂ ಅಧಿಕ ಮಂದಿ ಮಹಿಳೆಯರು ಹಾಗೂ ಮಕ್ಕಳು ಅಸ್ವಸ್ಥ

October 21, 2025
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ವಂಚನೆ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮಹಿಳೆಯ ಬಂಧನ

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ವಂಚನೆ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮಹಿಳೆಯ ಬಂಧನ

October 21, 2025
ಪುತ್ತೂರು: ಸಿಡಿಲಿನ ಆರ್ಭಟಕ್ಕೆ ಎರಡು ಮನೆಗಳು ಛಿದ್ರ : ನಾಲ್ವರು ಅಸ್ವಸ್ಥ

ಪುತ್ತೂರು: ಸಿಡಿಲಿನ ಆರ್ಭಟಕ್ಕೆ ಎರಡು ಮನೆಗಳು ಛಿದ್ರ : ನಾಲ್ವರು ಅಸ್ವಸ್ಥ

October 21, 2025
‘ಅಶೋಕ ಜನಮನ’ ಕಾರ್ಯಕ್ರಮ: ಮೆಡಿಕಲ್‌ ಕಾಲೇಜಿಗೆ ಎಷ್ಟೆ ಖರ್ಚಾದರೂ ಮಾಡಿಯೇ ಮಾಡುತ್ತೇನೆ- ಮುಖ್ಯಮಂತ್ರಿ ಸಿದ್ದರಾಮಯ್ಯ

‘ಅಶೋಕ ಜನಮನ’ ಕಾರ್ಯಕ್ರಮ: ಮೆಡಿಕಲ್‌ ಕಾಲೇಜಿಗೆ ಎಷ್ಟೆ ಖರ್ಚಾದರೂ ಮಾಡಿಯೇ ಮಾಡುತ್ತೇನೆ- ಮುಖ್ಯಮಂತ್ರಿ ಸಿದ್ದರಾಮಯ್ಯ

October 20, 2025
ಅಕ್ಟೋಬರ್ 31ರವರೆಗೆ ‘ಜಾತಿ ಗಣತಿ’ ಮತ್ತೆ ವಿಸ್ತರಣೆ: ಸಮೀಕ್ಷಾದಾರರಿಗೆ ಇಂದಿನಿಂದ ಮೂರು ದಿನ ರಜೆ!

ಅಕ್ಟೋಬರ್ 31ರವರೆಗೆ ‘ಜಾತಿ ಗಣತಿ’ ಮತ್ತೆ ವಿಸ್ತರಣೆ: ಸಮೀಕ್ಷಾದಾರರಿಗೆ ಇಂದಿನಿಂದ ಮೂರು ದಿನ ರಜೆ!

October 20, 2025
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Tuesday, October 21, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮಯ್ಯನವರ ಹೇಳಿಕೆ ಕೈಲಾಗದವನು ಮೈ ಪರಚಿಕೊಂಡಂತಿದೆ: ಸಂಸದ ಕ್ಯಾ.ಚೌಟ

    ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮಯ್ಯನವರ ಹೇಳಿಕೆ ಕೈಲಾಗದವನು ಮೈ ಪರಚಿಕೊಂಡಂತಿದೆ: ಸಂಸದ ಕ್ಯಾ.ಚೌಟ

    ಪುತ್ತೂರು: ಬೆದ್ರಾಳದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ : ಶಾಸಕ ಅಶೋಕ್ ರೈ ಭೇಟಿ

    ಪುತ್ತೂರು: ಬೆದ್ರಾಳದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ : ಶಾಸಕ ಅಶೋಕ್ ರೈ ಭೇಟಿ

    ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸ್ತೋಮದ ನಡುವೆ ಕೆಲವರು ಅಸ್ವಸ್ಥ: ಆಸ್ಪತ್ರೆಗೆ ಭೇಟಿ‌ ನೀಡಿದ ಮಾಜಿ ಶಾಸಕ ಮತ್ತು ಪುತ್ತೂರು ಬಜೆಪಿ ಪದಾಧಿಕಾರಿಗಳು

    ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸ್ತೋಮದ ನಡುವೆ ಕೆಲವರು ಅಸ್ವಸ್ಥ: ಆಸ್ಪತ್ರೆಗೆ ಭೇಟಿ‌ ನೀಡಿದ ಮಾಜಿ ಶಾಸಕ ಮತ್ತು ಪುತ್ತೂರು ಬಜೆಪಿ ಪದಾಧಿಕಾರಿಗಳು

    14ರ ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಪ್ರಾಥಮಿಕ ಶಾಲೆಯ ಕು.ರಕ್ಷಿತಾ. ಜೆ  ರಾಷ್ಟ್ರಮಟ್ಟಕ್ಕೆ ಆಯ್ಕೆ.

    14ರ ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಪ್ರಾಥಮಿಕ ಶಾಲೆಯ ಕು.ರಕ್ಷಿತಾ. ಜೆ ರಾಷ್ಟ್ರಮಟ್ಟಕ್ಕೆ ಆಯ್ಕೆ.

    ಬೆಳ್ತಂಗಡಿ: 17ರ ವಯೋಮಾನದ  ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ಪ್ರೌಢಶಾಲೆಯ ಕು. ಯಕ್ಷಿತಾ.ಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ.

    ಬೆಳ್ತಂಗಡಿ: 17ರ ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ಪ್ರೌಢಶಾಲೆಯ ಕು. ಯಕ್ಷಿತಾ.ಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ.

    ಜಿಲ್ಲಾ ಮಟ್ಟದ ಹಿರಿಯರ ಕ್ರೀಡೆ : ಛಾಯಾಗ್ರಾಹಕ ಕುಂತೂರಿನ ರವಿ ಪೂಜಾರಿ ರಾಜ್ಯಮಟ್ಟಕ್ಕೆ

    ಜಿಲ್ಲಾ ಮಟ್ಟದ ಹಿರಿಯರ ಕ್ರೀಡೆ : ಛಾಯಾಗ್ರಾಹಕ ಕುಂತೂರಿನ ರವಿ ಪೂಜಾರಿ ರಾಜ್ಯಮಟ್ಟಕ್ಕೆ

    ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಆಸ್ಪತ್ರೆಗೆ ದಾಖಲಾದ ಅಸ್ವಸ್ಥರನ್ನು ಭೇಟಿ‌ ನೀಡಿದ ಶಾಸಕ ಅಶೋಕ್ ರೈ

    ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಆಸ್ಪತ್ರೆಗೆ ದಾಖಲಾದ ಅಸ್ವಸ್ಥರನ್ನು ಭೇಟಿ‌ ನೀಡಿದ ಶಾಸಕ ಅಶೋಕ್ ರೈ

    ಅಶೋಕ ಜನಮನ ಕಾರ್ಯಕ್ರಮ ಜನಸ್ತೋಮದ ನಡುವೆ ಕೆಲವರ ಅಸ್ವಸ್ಥ: ಕ್ಷಮೆ ಕೇಳಿದ ಶಾಸಕ ಅಶೋಕ್ ರೈ

    ಅಶೋಕ ಜನಮನ ಕಾರ್ಯಕ್ರಮ ಜನಸ್ತೋಮದ ನಡುವೆ ಕೆಲವರ ಅಸ್ವಸ್ಥ: ಕ್ಷಮೆ ಕೇಳಿದ ಶಾಸಕ ಅಶೋಕ್ ರೈ

    ಸಿಎಂ ಭಾಗವಹಿಸಿದ ಜನಮನ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಪುತ್ತೂರಿನ ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ 11ಕ್ಕೂ ಅಧಿಕ ಮಂದಿ ಮಹಿಳೆಯರು ಹಾಗೂ ಮಕ್ಕಳು ಅಸ್ವಸ್ಥ

    ಸಿಎಂ ಭಾಗವಹಿಸಿದ ಜನಮನ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಪುತ್ತೂರಿನ ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ 11ಕ್ಕೂ ಅಧಿಕ ಮಂದಿ ಮಹಿಳೆಯರು ಹಾಗೂ ಮಕ್ಕಳು ಅಸ್ವಸ್ಥ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸ್ತೋಮದ ನಡುವೆ ಕೆಲವರು ಅಸ್ವಸ್ಥ: ಆಸ್ಪತ್ರೆಗೆ ಭೇಟಿ‌ ನೀಡಿದ ಮಾಜಿ ಶಾಸಕ ಮತ್ತು ಪುತ್ತೂರು ಬಜೆಪಿ ಪದಾಧಿಕಾರಿಗಳು

 ಜನಮನದಲ್ಲಿ ಅವ್ಯವಸ್ಥೆ – ಬಿಜೆಪಿ ಆರೋಪ

by ಪ್ರಜಾಧ್ವನಿ ನ್ಯೂಸ್
October 21, 2025
in ಪುತ್ತೂರು
0
ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸ್ತೋಮದ ನಡುವೆ ಕೆಲವರು ಅಸ್ವಸ್ಥ: ಆಸ್ಪತ್ರೆಗೆ ಭೇಟಿ‌ ನೀಡಿದ ಮಾಜಿ ಶಾಸಕ ಮತ್ತು ಪುತ್ತೂರು ಬಜೆಪಿ ಪದಾಧಿಕಾರಿಗಳು
5
SHARES
15
VIEWS
ShareShareShare

ಪುತ್ತೂರು: ಅಶೋಕ ಜನಮನ ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಪೈಕಿ ಇಬ್ಬರು ಮಹಿಳೆಯರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಕಡಬ ಕೋಟೆಗುಡ್ಡೆಯ ನಿವಾಸಿ ಬಾಲಕೃಷ್ಣ ಅವರ ಪತ್ನಿ ಲೀಲಾವತಿ(53) ಮತ್ತು ಮೊಮ್ಮಕ್ಕಳೊಂದಿಗೆ ಬಂದಿದ್ದ ಬೆಳ್ಳಾರೆ ನಿವಾಸಿ ಬೀಫಾತಿಮಾ (60) ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಆಸ್ಪತ್ರೆಗೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ಮಾಡಿ ಆಸ್ಪತ್ರೆಯಲ್ಲಿ ದಾಖಲಾದ ಮಹಿಳೆಯರಿಬ್ಬರ ಆರೋಗ್ಯ ವಿಚಾರಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮಕ್ಕೆ ಮಾಹಿತಿ

HPR Institute Of Nursing And Paramedical Sciences & Friends Beke

ಜಾಹೀರಾತು

ಅಶೋಕ ಜನಮನ ಕಾರ್ಯಕ್ರಮದಲ್ಲಿ ಕೇವಲ ರಾಜಕೀಯ ಲಾಭಕ್ಕಾಗಿ ಬಡ ಜನರನ್ನು ಕರೆಸಿ, ಅವರನ್ನು ಗೂಡಲ್ಲಿ ಕೂಡಿ ಹಾಕಿ ಹಿಂಸೆ ಕೊಟ್ಟದ್ದು ಬಿಟ್ರೆ ಬೇರೇನು ಇಲ್ಲ. ಇದರ ಜೊತೆಗೆ 13 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವುದು ಕಾರ್ಯಕ್ರಮದ ಅವ್ಯವಸ್ಥೆಯನ್ನು ಸೂಚಿಸುತ್ತದೆ. ಇದೊಂದು ಸ್ಟೇಟ್ ಇಶ್ಯೂ, ರಾಜ್ಯ ಸರಕಾರ, ಗೃಹ ಇಲಾಖೆ, ಜಿಲ್ಲಾಡಳಿತ ಇದಕ್ಕೆ ಹೊಣೆ ಎಂದು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮತ್ತು ಮಾಜಿ ಶಾಸಕ ಸಂಜೀವ ಮಠಂದೂರು ಬಿಜೆಪಿ ಕಚೇರಿಯಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.

ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮಾತನಾಡಿ, ಟ್ರಸ್ಟ್ ಮೂಲಕ ನಡೆಯುವ ಕಾರ್ಯಕ್ರಮಕ್ಕೆ ಒಂದೂವರೆ ತಿಂಗಳಿನಿಂದ ಲಕ್ಷ ಲಕ್ಷ ಜನ ಸೇರುತ್ತಾರೆ ಎಂದು ಮಾಧ್ಯಮದಲ್ಲಿ ಬಿತ್ತರಿಸಿರುವುದನ್ನು ಎಲ್ಲರೂ ಗಮನಿಸಿದ್ದಾರೆ. ಕ್ರೀಡಾಪಟುಗಳಿಗೆ ಉಪಯೋಗಿಸುವ ಕ್ರೀಡಾಂಗಣವನ್ನು ಹಾಳು ಮಾಡದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ ನಿನ್ನೆ ನಡೆದ ಕಾರ್ಯಕ್ರಮ ಕ್ರೀಡಾ ಇಲಾಖೆಯ ಮೈದಾನದಲ್ಲಿ ಆಯೋಜನೆಯಾಗಿತ್ತು. ದೊಡ್ಡ ಕಾರ್ಯಕ್ರಮ ಮಾಡುವಾಗ ಆಯೋಜಕರು ಗಂಭೀರವಾಗಿ ಗಮನಿಸಬೇಕಾಗಿತ್ತು. ಪೊಲೀಸ್ ಇಲಾಖೆಯೂ ಅದನ್ನು ನೋಡಬೇಕಾಗಿತ್ತು. ಇದೆಲ್ಲವನ್ನು ಮೀರಿ ಮುಖ್ಯಮಂತ್ರಿಗಳು ಬಂದ ಸಂದರ್ಭ ಬಡಜನರು ಸೇರಿದ್ದರು. ವಸ್ತ್ರ ವಿತರಣೆಯ ಕಾರ್ಯಕ್ರಮದಲ್ಲಿ ಬೆಳಗ್ಗಿನಿಂದಲೇ ಜನ ಜಮಾಯಿಸಿದ್ದರು. ಅಲ್ಲಿ ಒಮ್ಮೆ ಒಳಗೆ ಹೋದವರಿಗೆ ಸರಿಯಾದ ವ್ಯವಸ್ಥೆಯೂ ಇರಲಿಲ್ಲ. ಬಂದವರಿಗೆ ನೀರು ನೀಡಿಲ್ಲ. ಊಟೋಪಚಾರವೂ ಸಮಯಕ್ಕೆ ಸರಿಯಾಗಿ ನೀಡದೆ ಬೆಳಿಗ್ಗೆ 9 ಗಂಟೆಗೆ ಬಂದವರನ್ನೆಲ್ಲ ಕೂಡಿ ಹಾಕಿ ಮುಖ್ಯಮಂತ್ರಿಗೆ ಶಕ್ತಿ ಪ್ರದರ್ಶನ ಮಾಡುವ ರೀತಿಯಲ್ಲಿ ಆಯೋಜನೆ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಆರೋಪಿಸಿದರು.

ನಿನ್ನೆ ಆಗಿರುವ ಘಟನೆಯಿಂದ ಆಸ್ಪತ್ರೆಯಲ್ಲಿ ದಾಖಲಾದವರನ್ನು ನಾವು ಭೇಟಿ ಮಾಡಿ ಪರಿಶೀಲಿಸಿದ್ದೇವೆ. ಅಲ್ಲಿ ಸರಿಯಾದ ಇಂಟಿಮೇಷನ್ ಪೊಲೀಸ್ ಇಲಾಖೆಗೆ ಹೋಗಿಲ್ಲ. ಘಟನೆಯಲ್ಲಿ 3 ತಿಂಗಳ ಮಗು ನಾಲ್ಕು ಗಂಟೆ ಯಾರ್‍ಯಾರೋ ಕೈಯಲ್ಲಿ ಇರುವಂತೆ ಆಯಿತು. ದೇವಸ್ಥಾನದ ಸ್ಥಳವನ್ನು ಟ್ರಸ್ಟ್‌ಗೆ ಉಪಯೋಗಿಸಲಾಗಿತ್ತು. ನಿನ್ನೆ ಘಟನೆಗೆ ಯಾರು ಕಾರಣರು? ಜಿಲ್ಲಾಡಳಿತ ಇದನ್ನು ಗಮನಿಸಬೇಕು. ಇದಕ್ಕೆ ಪೂರಕವಾಗಿ ಎರಡು ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಐಪಿಎಲ್‌ಗೆ ಸಂಬಂಧಿಸಿ ಆರ್‌ಸಿಬಿ ವಿಜಯೋತ್ಸವದಲ್ಲಿ ದೊಡ್ಡ ಮಟ್ಟದ ಅನಾಹುತ ಆಗಿತ್ತು. ಜನ ಪ್ರಶ್ನೆ ಮಾಡಲು ಪ್ರಾರಂಭಿಸಿದಾಗ ದಕ್ಷ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಅವರ ಸರಕಾರ ತೀಟೆಯನ್ನು ತೀರಿಸಿಕೊಂಡರು. ಇವತ್ತು ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಘಟನೆಯಲ್ಲಿ ಯಾರ ತಪ್ಪು? ಯಾರು ಇವರಿಗೆ ಅಧಿಕಾರ ಕೊಟ್ಟದ್ದು ಎಂದು ಜನ ಪ್ರಶ್ನಿಸುತ್ತಿದ್ದಾರೆ. 1 ಲಕ್ಷ ಜನ ಬರುತ್ತಾರೆ ಎಂದಾದರೆ 10 ಸಾವಿರ ಸೇರುವ ಸ್ಥಳದಲ್ಲಿ 1 ಲಕ್ಷ ಜನವನ್ನು ಹೇಗೆ ತುಂಬಿಸುವುದು. ಜನ ಸತ್ರು ತೊಂದರೆ ಇಲ್ಲ, ತನ್ನ ರಾಜಕೀಯ ಲಾಭಕ್ಕಾಗಿ ಈ ರೀತಿ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಪ್ರತಿ ವಿಚಾರದಲ್ಲೂ ಮಹಾಲಿಂಗೇಶ್ವರನ ದಯೆ ಎಂದು ಹೇಳುವ ಶಾಸಕರು ನಿನ್ನೆ ಮುಖ್ಯಮಂತ್ರಿಗಳನ್ನು ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಕರೆದೊಯ್ಯಬಹುದಿತ್ತಲ್ಲ. ಒಟ್ಟಿನಲ್ಲಿ ಕೇವಲ ರಾಜಕೀಯ ಲಾಭಕ್ಕಾಗಿ ಬಡ ಜನರನ್ನು ಕರೆಸಿ, ಅವರನ್ನು ಗೂಡಲ್ಲಿ ಕೂಡಿ ಹಾಕಿ ಹಿಂಸೆ ಕೊಟ್ಟದ್ದು ಬಿಟ್ರೆ ಬೇರೇನು ಕಾಣಿಸಿಲ್ಲ. ಈ ಕುರಿತು ಜನ ಶಾಪ ಇಟ್ಟು ಹೋಗುತ್ತಿದ್ದರು ಎಂದು ದಯಾನಂದ ಶೆಟ್ಟಿ ಉಜಿರೆಮಾರು ಹೇಳಿದರು.

ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ನಿನ್ನೆ ಮುಖ್ಯಮಂತ್ರಿಗಳು ಬಂದು ನಡೆದ ಕಾರ್ಯಕ್ರಮದ ಜಾಗ ಯುವಜನ ಮತ್ತು ಕ್ರೀಡಾ ಇಲಾಖೆಗೆ ಸೇರಿದ್ದು, ನಾನು ಶಾಸಕನಾಗಿದ್ದ ಸಂದರ್ಭ ತಾಲೂಕು ಕ್ರೀಡಾಂಗಣವನ್ನು ಕ್ರೀಡೆಗೆ ಮಾತ್ರ ಕೊಡಬೇಕು. ಬೇರೆ ಯಾವುದೇ ಉದ್ದೇಶಕ್ಕೆ ಕೊಡಬಾರದು ಎಂದು ತೀರ್ಮಾನ ಆಗಿತ್ತು. ಅದೇ ರೀತಿ ಅದು ನಡೆದುಕೊಂಡು ಬರುತ್ತಿತ್ತು. ಅಲ್ಲಿ ಹಾಕಿದ ಲಕ್ಷಾಂತರ ರೂಪಾಯಿ ಟ್ರ್ಯಾಕ್ ಕೆಟ್ಟು ಹೋಗುತ್ತದೆ. ಕ್ರೀಡಾಚಟುವಟಿಕೆಗೆ ಅಲ್ಲಿ ಸಮಸ್ಯೆ ಆಗುತ್ತದೆ ಎಂದು ಕ್ರೀಡೆಗೆ ಮಾತ್ರ ಕೊಡುವಂತೆ ಸರಕಾರದ ಉದ್ದೇಶವಾಗಿತ್ತು. ಇವತ್ತು ಆ ಕ್ರೀಡಾಂಗಣವನ್ನು ಒಂದು ಟ್ರಸ್ಟ್‌ಗೆ, ವೈಯುಕ್ತಿಕ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟವರು ಯಾರು? ಯುವಜನ ಕ್ರೀಡಾ ಇಲಾಖೆ ಅಥವಾ ಜಿಲ್ಲಾಧಿಕಾರಿಯವರು ಕೊಟ್ಟಿದ್ದಾರೋ? ಯಾರಾದರೂ ಕೊಟ್ಟಿದ್ದರೆ ಅವರು ಯಾವ ಕಂಡಿಷನ್ ಹಾಕಿ ಕೊಟ್ಟಿದ್ದಾರೆ? ಇವತ್ತು ಕಾರ್ಯಕ್ರಮ ಮಾಡುವಾಗ ಸರಕಾರ ಸಂಘ ಸಂಸ್ಥೆಗಳಿಗೆ ಕಂಡಿಷನ್ ಹಾಕಿದೆ. ಯಾವ ಜಾಗದಲ್ಲಿ ಎಷ್ಟು ಜನ ಸೇರಿದರೆ ಏನು ಮಾಡಬೇಕು. ಪುತ್ತೂರು ತಾಲೂಕಿನ ತಾಲೂಕು ಕ್ರೀಡಾಂಗಣದಲ್ಲಿ 10 ಸಾವಿರ ಚಯರ್ ಹಾಕಿದ್ದಾರೆ. 2 ಸಾವಿರ ರಿಸರ್ವ್ ಇಟ್ಟಿದ್ದರು. 10 ಸಾವಿರ ಚಯರ್ ಹಾಕಿ 1 ಲಕ್ಷ ಸೇರಿಸುವಾಗ ಈ ಪೊಲೀಸ್ ಇಲಾಖೆ ಎಲ್ಲಿತ್ತು? ಅನುಮತಿ ಕೊಟ್ಟವರು ಎಲ್ಲಿದ್ರು? ಪೊಲೀಸ್ ಇಲಾಖೆ ನಿಯಮ ಬಾಹಿರವಾಗಿ ನಡೆದುಕೊಂಡಿದೆ.

ಘಟನೆ ಆದ ಸಂದರ್ಭದಲ್ಲಿ 13 ಮಂದಿ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅದರಲ್ಲಿ 2 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಡಬದ ಲೀಲಾವತಿ, ಬೆಳ್ಳಾರೆಯ ಬಿಪಾತುಮ್ಮ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನು ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಒಂದು ಘಟನೆಯಾಗಿ ಹತ್ತಾರು ಜನರಿಗೆ ಗಾಯ ಆಗಿದೆ. ಸರಕಾರಿ ಆಸ್ಪತ್ರೆಯಿಂದ ಪೊಲೀಸ್ ಸ್ಟೇಷನ್‌ನಿಂದ ಇಂಟಿಮೇಷನ್ ಹೋಗಿದ್ಯಾ? ಚಿಕಿತ್ಸೆ ನೀಡುವ ಕುರಿತು ಜಿಲ್ಲಾಡಳಿತಕ್ಕೆ ತಿಳಿಸಿದ್ರಾ? ಎಫ್‌ಐಆರ್ ಆಗಿದ್ಯಾ? ಎಫ್‌ಐಆರ್ ಯಾರ ಮೇಲೆ ಆಗಿದೆ ಎಂಬೆಲ್ಲ ಪ್ರಶ್ನೆ ಮೂಡುತ್ತದೆ. ಯಾಕೆಂದರೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದಲ್ಲಿ 11 ಮಂದಿ ಮರಣ ಹೊಂದಿದ ಘಟನೆಯನ್ನು ಜನರು ಪ್ರಶ್ನಿಸಿದಾಗ ಎಫ್‌ಐಆರ್ ಮಾಡಿದರು. ಒಂದಷ್ಟು ಪೊಲೀಸರನ್ನು ಅಮಾನತು ಮಾಡಿದ್ದರು. ಆದರೆ ಇಲ್ಲಿ ಜೀವ ಹೋಗಿಲ್ಲ. ಆದರೆ 13 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಇಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ? ಈ ಕಾರ್ಯಕ್ರಮ ಟ್ರಸ್ಟ್‌ಗೆ ಸಂಬಂಧಿಸಿದ್ದು, ದೇವಸ್ಥಾನದ ಜಾಗದಲ್ಲಿ ರಾಜಕೀಯ ಬ್ಯಾನರ್ ಅಳವಡಿಸಿದ್ದಾರೆ. ಅಮಾಯಕರು ಕಾರ್ಯಕ್ರಮದ ಮೂಲಕ ಆಸ್ಪತ್ರೆ ಸೇರುವ ಕೆಲಸ ಆಗಿದೆ. ಬೇರೆ ಬೇರೆ ಇಲಾಖೆಗಳು ಕಾನೂನು ಉಲ್ಲಂಘನೆ ಮಾಡುವ ಕೆಲಸ ಮಾಡಿದ್ಧಾರೆ. ಸರಕಾರ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ ಉಪಸ್ಥಿತರಿದ್ದರು.

SendShare2Share
Previous Post

14ರ ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಪ್ರಾಥಮಿಕ ಶಾಲೆಯ ಕು.ರಕ್ಷಿತಾ. ಜೆ ರಾಷ್ಟ್ರಮಟ್ಟಕ್ಕೆ ಆಯ್ಕೆ.

Next Post

ಪುತ್ತೂರು: ಬೆದ್ರಾಳದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ : ಶಾಸಕ ಅಶೋಕ್ ರೈ ಭೇಟಿ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಪುತ್ತೂರು: ಬೆದ್ರಾಳದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ : ಶಾಸಕ ಅಶೋಕ್ ರೈ ಭೇಟಿ

ಪುತ್ತೂರು: ಬೆದ್ರಾಳದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ : ಶಾಸಕ ಅಶೋಕ್ ರೈ ಭೇಟಿ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..