ಅರಸಿನಮಕ್ಕಿ: (ಅ. 27) ಇತ್ತೀಚೆಗೆ ಬಾವಿಗೆ ಬಿದ್ದು ಮೃತರಾದ ಅರಸಿನಮಕ್ಕಿಯ ಗೋಪಾಲಕೃಷ್ಣ ಅನುದಾನಿತ ಹಿ. ಪ್ರಾ. ಶಾಲೆಯ ಗೌರವ ಶಿಕ್ಷಕಿ ಹತ್ಯಡ್ಕ ಗ್ರಾಮದ ಬೂಡುಮುಗೇರು ನಿವಾಸಿ ತೇಜಸ್ವಿನಿಯವರ ಮನೆಗೆಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜರವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಧರ್ಮಸ್ಥಳ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿಗಳಾದ ಗಣೇಶ್ ಹೊಸ್ತೋಟ, ಹತ್ಯಡ್ಕ ಶಕ್ತಿಕೇಂದ್ರ ಪ್ರಮುಖ್ ಜಯಪ್ರಸಾದ್ ಶೆಟ್ಟಿಗಾರ್, ಪಕ್ಷದ ಪ್ರಮುಖರಾದ ವೃಷಾಂಕ್ ಖಾಡಿಲ್ಕರ್, ಗಣೇಶ್ ಪಲಸ್ತಡ್ಕ, ಶ್ರೀಕಾಂತ್ ಕಾಂತ್ರೆಲ್, ಇನ್ನಿತರರು ಉಪಸ್ಥಿತರಿದ್ದರು.























