ಅಸ್ಸಾಂನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರತಿಭಾನ್ವಿತ ಮತ್ತು ಸಮರ್ಥ ಜನರ ಕೊರತೆಯಿದೆ ಎಂದು ಕರ್ನಾಟಕದ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಕಿಡಿ ಕಾರಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಏನಿದು ಎರಡು ರಾಜ್ಯಗಳ ನಡುವಿನ ಗಾಲಾಟೆ? ಕರ್ನಾಟಕ ಬಿಟ್ಟು ಹೋಗುತ್ತಿರುವ್ಯಾದ್ಯಾಕೆ ಹೂಡಿಕೆಗಳು? ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ.
ಸೆಮಿಕಂಡಕ್ಟರ್ ಕೈಗಾರಿಕೆಗಳು ಫ್ಯಾಕಟರಿ ತೆರಯಲು ಅಸ್ಸಾಂ ಮತ್ತು ಗುಜರಾತ್ ರಾಜ್ಯಗಳನ್ನು ಆಯ್ಕೆ ಮಾಡಿಕೊಂಡಿದ್ದುವು; ಈ ವಿಚಾರವಾಗಿ ಕರ್ನಾಟಕದ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, “ಸೆಮಿಕಂಡಕ್ಟರ್ ಉದ್ದಿಮೆಗಳು ವಾಸ್ತವವಾಗಿ ಬೆಂಗಳೂರಿನತ್ತ ಆಕರ್ಷಿತವಾಗಿರುತ್ತವೆ. ಆದ್ರೆ, ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಬರಬೇಕಾದ ಹೂಡಿಕೆಗಳನ್ನು ಗುಜರಾತ್‌ಗೆ ತಿರುಗಿಸುತ್ತಿದೆ. ಹಾಗಾದ್ರೆ ನಿಜವಾಗಿಯೂ ಗುಜರಾತ್ ಮತ್ತು ಅಸ್ಸಾಂನಲ್ಲಿ ಅಂತಹ ಕೈಗಾರಿಕೆಗೆ ಅಗತ್ಯವಿರುವ ನೈಪುಣ್ಯ ಮತ್ತು ಮೂಲಸೌಕರ್ಯಗಳಿವೆಯೆ?” ಎಂದು ಕೇಳಿದ್ದಾರೆ. ಅವರ ಈ ಹೇಳಿಕೆಗೆ ರಾಜಕೀಯ ವಲಯದಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗ ಭಾರಿ ವಿವಾದವನ್ನು ಹುಟ್ಟುಹಾಕಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಸ್ಸಾಂ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಖರ್ಗೆ ಅವರನ್ನು ಕಟುಶಬ್ದಗಳಲ್ಲಿ ಟೀಕಿಸಿ, “ಫಸ್ಟ್ ಕ್ಲಾಸ್ ಈಡಿಯಟ್” ಕರೆದಿದ್ದಾರೆ. ಮುಂದುವರೆದು, “ಅವರು ಅಸ್ಸಾಮಿ ಯುವಕರನ್ನು ಅವಮಾನಿಸಿದ್ದಾರೆ, ಆದರೂ ಕಾಂಗ್ರೆಸ್ ಮಾತ್ರ ಅವರ ಈ ಹೇಳಿಕೆಯನ್ನ ಇನ್ನೂ ಖಂಡಿಸಿಲ್ಲ. ಹಾಗಾಗಿ, ಅಸ್ಸಾಂನಲ್ಲಿ ವಿದ್ಯಾವಂತ ಯುವಕರು ಇಲ್ಲವೆಂದು ಹೇಳಿರುವ ಅವರ ಹೇಳಿಕೆಯು ಅಸ್ಸಾಂ ಯುವಜನರ ಗೌರವಕ್ಕೆ ಅಪಮಾನವಾಗಿದ್ದು, ಈ ಹೇಳಿಕೆಗೆ ನಾವು ಕಾನೂನು ಕ್ರಮ ಕೈಗೊಳ್ಳುವ ವಿಚಾರವನ್ನು ಪರಿಗಣಿಸುತ್ತೇವೆ.” ಎಂದಿದ್ದಾರೆ.
ಖರ್ಗೆ ಅವರ ಹೇಳಿಕೆಯನ್ನ ಕಂಡಿಸಿರುವ ಅಸ್ಸಾಂ ಬಿಜೆಪಿಯು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, “ಕಾಂಗ್ರೆಸ್ ಅಸ್ಸಾಂ ಅನ್ನು ಉದ್ದೇಶಪೂರ್ವಕವಾಗಿ ಅಭಿವೃದ್ಧಿಯಿಂದ ದೂರವು ಇರಿಸಲು ಬಯಸುತ್ತದೆ ಎಂದು ಆರೋಪಿಸುತ್ತದೆ. ಇದರಿಂದ ದೆಹಲಿಯಲ್ಲಿರುವ ಅವರ “ಸಾಕು ನಾಯಿಗಳು” (ನಾಯಕರು) ಅಸ್ಸಾಂನನ್ನು ತಮ್ಮಿಷ್ಟಕ್ಕೆ ಟೀಕಿಸಬಹುದು ಎಂದು ಟೀಕಿಸಿದೆ
ಬಿಜೆಪಿ ಅಸ್ಸಾಂ ರಾಜ್ಯ ವಕ್ತಾರ ಜಯಂತ ಕುಮಾರ್ ಗೋಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಅಸ್ಸಾಂ ಹಾಗೂ ಈಶಾನ್ಯ ಭಾರತದ ಪ್ರದೇಶಗಳನ್ನು ಪದೇಪದೇ ನಿರ್ಲಕ್ಷ್ಯ ವಹಿಸಿದೆ ಎಂದರು. ಮುಂದುವರೆದು, 1962ರ ಚೀನಾ-ಭಾರತ ಯುದ್ಧದ ಸಮಯದಲ್ಲಿ ಜವಾಹರಲಾಲ್ ನೆಹರು ಅಸ್ಸಾಂನನ್ನು ಬಿಟ್ಟಿದ್ದ ರೀತಿಯನ್ನು ಉಲ್ಲೇಖಿಸಿದರು. ಜೊತೆಗೆ, 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ಇಂದಿರಾ ಗಾಂಧಿ ತೆಗೆದುಕೊಂಡ ನಿರ್ಧಾರವು ರಾಜ್ಯಕ್ಕೆ ಲಕ್ಷಾಂತರ ಅಕ್ರಮ ವಲಸಿಗರು ಬರುವಂತೆ ಮಾಡಿತು ಎಂದು ಹೇಳಿದರು.
ದೇಶದ ಹೂಡಿಕೆಗಳ ರಾಜಧಾನಿ ಎಂದು ಕರೆಸಿಕೊಳ್ಳುವ ಕರ್ನಾಟಕದಲ್ಲಿ ಕಳೆದ ಒಂದು ವರ್ಷದಲ್ಲಿ ಅಸ್ಸಾಂ ಮತ್ತು ಗುಜರಾತ್ ರಾಜ್ಯಗಳ ಪಾಲದ ಸೆಮಿಕಂಡಕ್ಟರ್ ಕೈಗಾರಿಕೆಗಳು ಹೊರತು ಕೆಲವು ಬಹುಕೋಟಿ ಯೋಜನೆಗಳು ಸಹ ಹೊರರಾಜ್ಯಗಳ ಪಲಾಗಿದೆ. ಅದು ಆಡಳಿತಾತ್ಮಕ ವಿಳಂಬ, ಮೂಲಸೌಕರ್ಯದ ಕೊರತೆ ಮತ್ತು ನೆರೆಯ ರಾಜ್ಯಗಳ ಆಕ್ರಮಣಕಾರಿ ಉತ್ತೇಜನಗಳಿಂದಾಗಿ ಈ ಹೂಡಿಕೆಗಳು ಬೇರೆ ರಾಜ್ಯಗಳ ಪಾಲಾದವು. ಅವುಗಳ ಕುರಿತು ಮಾಹಿತಿ ಇಲ್ಲಿದೆ:
ಕರ್ನಾಟಕ ಕಳೆದುಕೊಂಡ ಅತಿದೊಡ್ಡ ಹೂಡಿಕೆಗಳಲ್ಲಿ ಗೂಗಲ್‌ನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೂಲಸೌಕರ್ಯ ಹಬ್ ಪ್ರಮುಖವಾಗಿದೆ. ಅಂದಾಜು $15 ಬಿಲಿಯನ್ (₹1.3 ಲಕ್ಷ ಕೋಟಿ) ಮೌಲ್ಯದ ಈ ಬೃಹತ್ ಯೋಜನೆಯು ಬೆಂಗಳೂರಿಗೆ ಬರಬೇಕಿತ್ತು. ಆದರೆ, ಬೆಂಗಳೂರಿನ ಹದಗೆಟ್ಟ ರಸ್ತೆಗಳು, ಮೂಲಸೌಕರ್ಯ ಸಮಸ್ಯೆಗಳು ಮತ್ತು ರಾಜ್ಯ ಸರ್ಕಾರದ ನಿಧಾನಗತಿಯ ನಿರ್ಧಾರಗಳಿಂದಾಗಿ ಈ ಯೋಜನೆ ಆಂಧ್ರಪ್ರದೇಶದ ವಿಶಾಖಪಟ್ಟಣಂಗೆ ವರ್ಗಾವಣೆಯಾಯಿತು. ಇದು ಕರ್ನಾಟಕದ ಟೆಕ್ ಪ್ರತಿಷ್ಠೆಗೆ ಬಹುದೊಡ್ಡ ಹೊಡೆತವಾಗಿದೆ.
ಬೆಂಗಳೂರು ಮೂಲದ ಪ್ರಮುಖ ಎಲೆಕ್ಟ್ರಿಕ್ ವಾಹನ (EV) ತಯಾರಕ ಸಂಸ್ಥೆ ಏಥರ್ ಎನರ್ಜಿಯು ತನ್ನ ಹೊಸ ಉತ್ಪಾದನಾ ಘಟಕವನ್ನು ಸ್ಥಾಪಿಸಲು ನಿರ್ಧರಿಸಿತ್ತು. ಆದರೆ, ಕರ್ನಾಟಕದಲ್ಲಿ ಭೂಮಿ ಮಂಜೂರಾತಿ ಪ್ರಕ್ರಿಯೆಯಲ್ಲಿನ ವಿವಾದಗಳು ಮತ್ತು ವಿಳಂಬಗಳಿಂದ ಬೇಸತ್ತು, ಸುಮಾರು 2,000 ಕೋಟಿ ಮೌಲ್ಯದ ಈ ಯೋಜನೆಯು ಮಹಾರಾಷ್ಟ್ರದ ಪಾಲಾಯಿತು. EV ವಲಯದಲ್ಲಿ ರಾಜ್ಯದ ಅಗ್ರಸ್ಥಾನಕ್ಕೆ ಈ ನಿರ್ಧಾರ ಸವಾಲೆಸೆದಿದೆ.
ಬೆಂಗಳೂರು ಏರೋಸ್ಪೇಸ್ ವಲಯದಲ್ಲಿ ಜಾಗತಿಕ ಕೇಂದ್ರವಾಗಿದ್ದರೂ, ದೇವನಹಳ್ಳಿ ಬಳಿ ಏರೋಸ್ಪೇಸ್ ಹಬ್‌ಗಾಗಿ ಉದ್ದೇಶಿಸಿದ್ದ ಭೂಸ್ವಾಧೀನ ಪ್ರಕ್ರಿಯೆಯು ರೈತರ ಪ್ರತಿಭಟನೆಗಳಿಂದ ಸ್ಥಗಿತಗೊಂಡಿತು. ಈ ಅನಿಶ್ಚಿತತೆಯನ್ನು ಬಳಸಿಕೊಂಡ ಆಂಧ್ರಪ್ರದೇಶ ಸರ್ಕಾರವು ತ್ವರಿತವಾಗಿ ಭೂಮಿ ಮತ್ತು ಪ್ರೋತ್ಸಾಹಕಗಳನ್ನು ನೀಡಿ, ಈ ವಲಯದ ಹೂಡಿಕೆದಾರರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿದೆ.
ಅನುಮೋದನೆಗಳಲ್ಲಿನ ವಿಳಂಬವೇ ಹೂಡಿಕೆಗಳು ಕೈತಪ್ಪಲು ಮುಖ್ಯ ಕಾರಣ ಎಂದು ಸರ್ಕಾರದ ಆಂತರಿಕ ವರದಿಗಳು ಸೂಚಿಸಿವೆ. ಕರ್ನಾಟಕದಲ್ಲಿ ಕೇವಲ ಭೂ ಪರಿವರ್ತನೆಗೆ ಸರಾಸರಿ 120 ದಿನಗಳು ಬೇಕಾಗುತ್ತವೆ, ಆದರೆ ನೆರೆಯ ತಮಿಳುನಾಡು ಮತ್ತು ತೆಲಂಗಾಣಗಳಲ್ಲಿ ಈ ಪ್ರಕ್ರಿಯೆ 60 ದಿನಗಳೊಳಗೆ ಅಥವಾ ಇನ್ನೂ ವೇಗವಾಗಿ ನಡೆಯುತ್ತದೆ. ಈ ಆಡಳಿತಾತ್ಮಕ ತೊಡಕುಗಳು “ವ್ಯವಹಾರ ಮಾಡುವ ಸುಲಭ” ವಾತಾವರಣಕ್ಕೆ ಅಡ್ಡಿಯಾಗುತ್ತಿವೆ.
ಕರ್ನಾಟಕವು ಪ್ರಸ್ತಾವಿತ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾದರೂ, ಅವುಗಳನ್ನು ವಾಸ್ತವವಾಗಿ ಅನುಷ್ಠಾನಗೊಳಿಸುವಲ್ಲಿ ಹಿಂದುಳಿದಿದೆ. ತ್ವರಿತ ಅನುಮೋದನೆ ಪ್ರಕ್ರಿಯೆ ಮತ್ತು ಉತ್ತಮ ಮೂಲಸೌಕರ್ಯವನ್ನು ಒದಗಿಸುವುದರ ಕಡೆಗೆ ಗಮನ ಹರಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯವು ಮತ್ತಷ್ಟು ಪ್ರಮುಖ ಯೋಜನೆಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.



 
                                









 
			










