ಪುತ್ತೂರು : ಹೊಸಲಕ್ಕೆ ಮೂಡಾಯೂರು, ಚಿಕ್ಕಮುಡ್ನೂರು ಇಲ್ಲಿ ದಿನಾಂಕ 14. 12. 2025ನೇ ರವಿವಾರ ಶ್ರೀ ರಕ್ತೇಶ್ವರಿ ಹಾಗೂ ಮಹಿಷoತಾಯ, ಗುಳಿಗ ದೈವಗಳ ಪ್ರತಿಷ್ಠಾ ಮಹೋತ್ಸವವು ಜರಗಿತು.
ಬೆಳಿಗ್ಗೆ ಗಂಟೆ 11:30ಕ್ಕೆ ಪುರೋಹಿತ ಶ್ರೀ ಸದಾಶಿವ ಹೊಳ್ಳರ ನೇತೃತ್ವದಲ್ಲಿ ಹೊಸಲಕ್ಕೆ ಮೂಡಾಯೂರು ದೈವಗಳ ಸಾನಿಧ್ಯದಲ್ಲಿ ಶ್ರೀ ರಕ್ತೇಶ್ವರಿ ಹಾಗೂ ಮಹೀಷಂತಾಯ, ಗುಳಿಗ ದೈವಗಳ, ಪ್ರತಿಷ್ಠಾ ದಿವಸದ ಪ್ರಯುಕ್ತ ಸಾರ್ವಜನಿಕ ತಂಬಿಲ ಸೇವೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮವು ಜರಗಿತು.
ಅದೇ ರೀತಿ ಸಾನಿಧ್ಯಕ್ಕೆ ನೂತನವಾಗಿ ನಿರ್ಮಿಸಲಾದ ಶೀಟಿನ ಮೇಲ್ಚಾವನಿಗೆ ಧನಸಹಾಯ ನೀಡಿದ ದಾನಿಗಳಿಗೆ ದೈವಸ್ಥಾನದಲ್ಲಿ ಪ್ರಸಾದವನ್ನು ನೀಡಿ ಗೌರವಿಸಲಾಯಿತು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನದಲ್ಲಿ ತಂಬಿಲ ಸೇವೆ ಮಾಡಿ, ದೈವಗಳ ಆಶೀರ್ವಾದವನ್ನು ಬೇಡಿ, ಅನ್ನ ಸಂತರ್ಪಣೆಯನ್ನು ಸ್ವೀಕರಿಸಿದರು.
ದೇವಸ್ಥಾನದ ಗೌರವಾಧ್ಯಕ್ಷರು ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನೆರವೇರಿಸಿ ಕೊಟ್ಟರು.






















