ಪದ್ಮುಂಜ: ಅಡಿಕೆ ಬೆಳೆಗಾರರು ಅಡಿಕೆ ಕೃಷಿಗೆ ಬಂದಿರುವ ಎಲೆ ಚುಕ್ಕಿ ರೋಗ, ಅತೀವ ಗಾಳಿ,ಮಳೆ,ಕೊಳೆ ರೋಗ, ಬೆಂಕಿ ರೋಗ, ಪ್ರಕೃತಿ ವಿಕೋಪದಿಂದ ಇಳುವರಿ ಕಮ್ಮಿ ಆಗಿ ರೈತರು ತೀವ್ರ ಸಂಕಷ್ಟದಲ್ಲಿದ್ದು, ಕಾಳುಮೆಣಸು ಸಮಸ್ಯೆ ಕೂಡ ಹೇಳತೀರದು, ಕಳೆದ ವರ್ಷಕ್ಕೆ ಹೋಲಿಸಿದರೆ ಕೊಕ್ಕಡ ಹೋಬಳಿಗೆ ಈ ವರ್ಷ ಹೆಚ್ಚಿನ ರೈತರಿಗೂ ಇನ್ನೂ ಬೆಳೆ ವಿಮೆ ಬ್ಯಾಂಕ್ ಖಾತೆಗೆ ಬಂದಿರೋದಿಲ್ಲ ಬಂದ ಬೆಳೆ ವಿಮೆ ತುಂಬಾ ಕಡಿಮೆ ಜಮಾ ಆಗಿದ್ದು ಇನ್ನೂ ತುಂಬಾ ರೈತರಿಗೆ ನಮ್ಮ ಸಂಘದ ವ್ಯಾಪ್ತಿಯ ಗ್ರಾಮಗಳಿಗೂ ತಾರತಮ್ಯ ಮಾಡಿದ್ದು, ಆದಷ್ಟು ಬೇಗ ಈ ಗೊಂದಲ ನಿವಾರಿಸಿ ವಾರದ ಒಳಗೆ ರೈತರ ಖಾತೆಗೆ ಬೆಳೆ ವಿಮೆ ಜಮೆ ಮಾಡಬೇಕು ತಪ್ಪಿದ್ದಲ್ಲಿ ವಿಮಾ ಕಂಪನಿಯ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಇದರ ಬಗ್ಗೆ ಈಗಾಗಲೇ ಹೈಕೋರ್ಟ್ ವಕೀಲರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ ತಿಳಿಸಿದ್ದಾರೆ.























