ತಣ್ಣೀರುಪoತ : ಪ್ರಾಕೃತಿಕ ವಿಕೋಪ ಹಾಗೂ ವಿವಿಧ ರೀತಿಯ ರೋಗ ಬಾಧೆಗಳಿಂದ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳು ವಿಪರೀತ ನಾಶವಾಗಿದ್ದು ರೈತರು ಕಂಗೆಟಿದ್ದಾರೆ, ಈ ವರ್ಷ ರೈತರು ಹವಾಮಾನ ಆಧಾರಿತ ಫಸಲು ಬೆಲೆ ವಿಮೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀರಿಕ್ಷಿಸುತ್ತಿದ್ದರೂ, ಈ ವರ್ಷ ಬಹಳಷ್ಟು ಕಡಿಮೆ ಪ್ರಮಾಣದಲ್ಲಿ ವಿಮೆ ಮೊತ್ತ ರೈತರ ಖಾತೆಗೆ ಜಮಾಗೊಂಡಿದ್ದು, ನಮ್ಮ ಸಂಘ ವ್ಯಾಪ್ತಿಯ ಉರುವಾಲು ಗ್ರಾಮದ ರೈತರ ಖಾತೆಗೆ ಇನ್ನೂ ಕೂಡ ವಿಮೆ ಹಣ ಜಮಾ ಆಗದೆ ರೈತರು ಸಂಕಷ್ಟದಲ್ಲಿದ್ದಾರೆ.
ನಮ್ಮ ಸಂಘದ ವ್ಯಾಪ್ತಿಯ ಕರಾಯ, ಹಾಗೂ ತಣ್ಣೀರುಪoತ ಗ್ರಾಮದ ರೈತರಿಗೆ ಈ ವರ್ಷ ಕಳೆದ ವರ್ಷಗಳಿಗಿಂತಲೂ ತುಂಬಾ ಕಡಿಮೆ ಮೊತ್ತ ರೈತರಿಗೆ ಜಮಾವಣೆಯಾಗಿದ್ದು, ಈ ಬಗ್ಗೆ ಡಿಸೆಂಬರ್ 12 ರಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಸಭೆ ಕರೆದಿದ್ದು ಈ ಬಗ್ಗೆ ಎಲ್ಲಾ ಸಹಕಾರಿ ಸಂಘಗಳೂ ಕೂಡ ಕಾನೂನು ಹೋರಾಟ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು, ಈ ತಾರತಮ್ಯ ನೀತಿಯಿಂದ ಬಯಲು ಸೀಮೆಯ ರೈತರಂತೆ ನಮ್ಮ ಜಿಲ್ಲೆಯ ರೈತರು ತುಂಬಾ ಶೋಚನಿಯ ಪರಿಸ್ಥಿತಿ ಜೀವನ ನಡೆಸಬಹುದು, ಈ ಬಗ್ಗೆ ಸರ್ಕಾರ ಎಚ್ಚೆತ್ತುಗೊಂಡು ಸಮಸ್ಯೆ ಪರಿಹರಿಸದಿದ್ದಲ್ಲಿ ಕಾನೂನು ಹೋರಾಟ ನಡೆಸಲು ಸಿದ್ದರಾಗಿದ್ದೇವೆoದು ತಣ್ಣೀರುಪoತ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಜಯಾನಂದ ಕಲ್ಲಾಪು ತಿಳಿಸಿದ್ದಾರೆ























