ಪುತ್ತೂರು: ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನಾಲ್ಕನೇ ವರ್ಷದ ಪ್ರತಿಷ್ಠಾ ವರ್ಧಂತಿ ಹಾಗೂ ಉತ್ಸವ ಎಲಿಯ ಜಾತ್ರೆಯು ಫೆ.6 ಮತ್ತು 7 ರಂದು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ದೇವಳದ ಎಲ್ಲಾ ಸಮಿತಿಗಳು ಹಾಗೂ ಊರ ಕೂಡುಕಟ್ಟಿನ ಯಜಮಾನತ್ವದಲ್ಲಿ ನಡೆಯಲಿದ್ದು ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜ.17 ರಂದು ಬೆಳಗ್ಗೆ ದೇವರ ನಡೆಯಲ್ಲಿ ದೇವಳದ ಪ್ರಧಾನ ಅರ್ಚಕರಾದ ನಾಗೇಶ ಕಣ್ಣಾರಾಯರು ಪ್ರಾರ್ಥನೆ ಮಾಡುವ ಮೂಲಕ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಜಾತ್ರ ಸಮಿತಿ ಗೌರವ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರು, ಶಿವರಾಮ ಭಟ್ ಕೆ ಸರ್ವೆ, ಪವಿತ್ರಪಾಣಿ ಬಾಲಕೃಷ್ಣ ಮುಡಂಬಡಿತ್ತಾಯ ಸೊರಕೆ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಉದಯಕುಮಾರ್ ರೈ ಬಾಕುಡ, ಆನಂದ ರಾವ್ ಸೊರಕೆ, ಎನ್ ರಾಮಯ್ಯ ರೈ ತಿಂಗಳಾಡಿ, ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಜಾತ್ರಾ ಸಮಿತಿ ಸಂಚಾಲಕ ಲಕ್ಷ್ಮೀನಾರಯಣ ಕಡಂಬಳಿತ್ತಾಯ, ಭಾಸ್ಕರ್ ರೈ ಮಾದೋಡಿ, ರಾಧಾಕೃಷ್ಣ ರೈ ಚಾವಡಿ, ಜಾತ್ರಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ರೈ ಸೊರಕೆ, ಶಿವರಾಮ ರೈ ಸೊರಕೆ, ಪ್ರವೀಣ್ ಶೆಟ್ಟಿ ಮಠ ತಿಂಗಳಾಡಿ, ಪ್ರಸನ್ನ ರೈ ಮಜಲುಗದ್ದೆ, ಸೂರ್ಯಪ್ರಸನ್ನ ರೈ ಎಂಡೆಸಾಗು, ವೆಂಕಪ್ಪ ನಾಯ್ಕ ಎಲಿಯ, ಗಣೇಶ ನೇರೋಳ್ತಡ್ಕ, ಉಮೇಶ್ ಸುವರ್ಣ ಸೊರಕೆ, ವಿಶ್ವನಾಥ ರೈ ಸೊರಕೆ ತಿಂಗಳಾಡಿ, ಇಂದುಕುಮಾರ್ ಕೆ ಬಾಳಯ, ಬಾಲಕೃಷ್ಣ ಮಡಿವಾಳ ಸೊರಕೆ, ಯಧುಕುಮಾರ್ ಕಲ್ಪಣೆ, ಪ್ರವೀಣ್ ಎಲಿಯ ದರ್ಬೆ,ಪ್ರಜ್ವತ್ ರೈ ಮಿತ್ರಂಪಾಡಿ, ರವಿಕುಮಾರ್ ರೈ ಮಠ, ಜಯರಾಮ ರೈ ಮಿತ್ರಂಪಾಡಿ, ಬಾಲಚಂದ್ರ ಶೆಟ್ಟಿ ಸೊರಕೆ, ಜಯಾನಂದ ರೈ ಮಿತ್ರಂಪಾಡಿ, ಶ್ರೀಕೃಷ್ಣ ಭಟ್ ಉಂಡೆಮನೆ, ಹರೀತ್ ನೆಕ್ಕಿಲು,ಸುನಿತಾ ಶಶಿಕಿರಣ್ ರೈ ಸೊರಕೆ, ಚಂದ್ರಾವತಿ ಗೋಪಾಲ್ ರೈ ಚಾವಡಿ, ಉಮಾವತಿ ಎಲಿಯ, ಗೌರಿ ಪ್ರವೀಣ್ ಪ್ರಭು ನೇರೋಳ್ತಡ್ಕ, ರೇಖಾ ರೈ ಸೊರಕೆ, ಜಾತ್ರಾ ಮಹಿಳಾ ಸಮಿತಿ ಅಧ್ಯಕ್ಷೆ ಸುಲೋಚನಾ ಬಿ ರೈ,ಜಯಂತಿ ಎ ಆಳ್ವ, ಚಂದ್ರಿಕಾ ಯಶವಂತ ಸೊರಕೆ, ನಿಶ್ಮಿತಾ ನವೀನ್ ಎಲಿಯ,ಸಂಗೀತಾ ರವಿಕುಮಾರ್ ಎಲಿಯ, ಶೋಭಾ ಎಸ್ ರೈ, ಶಾಲಿನಿ ಸುನಿಲ್ ರೈ ಸಾಗು, ಹಸ್ತಾ, ಸಿಂಚನಾ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.


























