ಸುಬ್ರಹ್ಮಣ್ಯ: ಕುಮಾರಧಾರ ನದಿ ಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು ಸುಬ್ರಹ್ಮಣ್ಯದಲ್ಲಿ ಅಂಗಡಿ ಹೊಂದಿರುವ ಕೊಲ್ಲಮೊಗರು ಹರಿಪ್ರಸಾದ್ ಮತ್ತು ಸುಜಿತ್ ಎಂದು ಗುರುತಿಸಿಲಾಗಿದೆ ಇಬ್ಬರು ಯುವಕರು ನದಿಗೆ ಈಜಲು ತೆರಳಿರುವ ವೇಳೆ ಮುಳುಗಿ ಸಾವುವಾಗಿದೆ ಎಂದು ಹೇಳಗಿದೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಸುಬ್ರಹ್ಮಣ್ಯ ಕಾಲೇಜು ಹತ್ತಿರದಲ್ಲಿ ಇರುವ ಅನುಗ್ರಹ ಹಾರ್ಡ್ ವೇರ್ ಸಂಸ್ಥೆಯ ಮಾಲಕ ಹರಿಪ್ರಸಾದ್ ಮಲ್ಲಾಜೆ ಮತ್ತು ಕೆಲಸಗಾರ ಸುಜಿತ್ ಗೋಳ್ಯಡಿ ಇವರಿಬ್ಬರು ಕುಲ್ಕುದ ಸಮೀಪ ಕುಮಾರಧಾರಾ ನದಿಗೆ ಸ್ನಾನ ಮಾಡಲೆಂದು ಹೋದಾಗ ಸುಜಿತ್ ನೀರಲ್ಲಿ ಮುಳುಗಿದ್ದು ಅವರನ್ನ ರಕ್ಷಿಸಲು ಹರಿಪ್ರಸಾದ್ ಮುಂದಾಗಿದರೆ ನೀರಿನ ಸೆಳತಕ್ಕೆ ಸಿಲುಕಿ ಇಬ್ಬರು ಪ್ರಾಣ ಕಳ್ಕೊಂಡಿದರೆ ಇಬ್ಬರು ಕೂಡ ಅವಿವಾಹಿತರಾಗಿದ್ದಾರೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪಾರ್ಟಿ ಮಾಡಿದ್ದ ಶಂಕೆ: ಯುವಕರ ತಂಡವೊಂದು ನದಿಯ ನಿರ್ಜನ ಪ್ರದೇಶದ ತಟದಲ್ಲಿ ಪಾರ್ಟಿ ಮಾಡಿತ್ತು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ನದಿ ತೀರದಲ್ಲಿ ಅನ್ನವನ್ನು ಚೆಲ್ಲಿರುವುದು ಕಂಡುಬಂದಿದೆ. ಪಾರ್ಟಿ ಮಾಡಿದ ಬಳಿಕ ಯುವಕರು ನದಿಯಲ್ಲಿ ಸ್ನಾನಕ್ಕಿಳಿದಿರಬಹುದು ಅಥವಾ ಈಜಲು ಹೋಗಿರಬಹುದು ಎಂದು ಶಂಕಿಸಲಾಗಿದೆ. ತಮ್ಮ ಪರಿಚಿತ ಸುಮಾರು 10 ಜನರ ತಂಡ ದೊಂದಿಗೆ ತೆರಳಿದ್ದರು ಎಂದು ಹೇಳಲಾಗುತ್ತಿದೆ.
ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಭೇಟಿ ನೀಡಿದ್ದು, ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಹಾಗೂ ತನಿಖೆ ಮುಂದುವರಿದಿದೆ. ಪೊಲೀಸರ ವಿಚಾರಣೆಯ ನಂತರವಷ್ಟೇ ಘಟನೆಯ ಪೂರ್ಣ ವಿವರ ಹಾಗೂ ಯುವಕರ ಗುರುತು ಪತ್ತೆಯಾಗಲಿದೆ.



























