ಧರ್ಮಸ್ಥಳ-ಮುಂಡಾಜೆ-ದಿಡುಪೆ ರಾಜ್ಯ ಹೆದ್ದಾರಿ 276ರ ಕಲ್ಮಂಜ ಗ್ರಾಮದ ಕೊತ್ತಲಿಗೆ, ವಂಜರೆಬೈಲ್ ಮತ್ತು ಪಿಲತಡ್ಕ ಭಾಗಗಳಲ್ಲಿನ ಹಳೆಯ ಸೇತುವೆಗಳು ಕಿರಿದಾಗಿದ್ದು, ಕುಸಿತಕೊಳಗಾಗಿ ನಾದುರಸ್ತಿಯಲ್ಲಿದ್ದು ಅಪಾಯದ ಮಟ್ಟವನ್ನು ಮೀರಿತ್ತು ಇದರಿಂದಾಗಿ ದಿನನಿತ್ಯ ವಾಹನ ಸವಾರರ ಹಾಗೂ ಪಾದಚಾರಿಗಳ ಸಂಚಾರಕ್ಕೆತೀರಾ ಅಡಚಣೆಯಾಗುತ್ತಿರುವುದನ್ನು ಆ ಭಾಗದ ಗ್ರಾಮಸ್ಥರು ಮಾನ್ಯ ಶಾಸಕರ ಗಮನಕ್ಕೆ ತಂದ ತತ್ಪರಿಣಾಮವಾಗಿ ಪ್ರಮುಖ ಜಿಲ್ಲಾ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿ ಲೆಕ್ಕಶೀರ್ಷಿಕೆಯಡಿ ಅನುದಾನವನ್ನು ಬಿಡುಗಡೆಗೊಳಿಸಲು ಮಾನ್ಯ ಶಾಸಕರು ವಿಶೇಷವಾಗಿ ಶ್ರಮವಹಿಸಿದರು.
ಸಾರ್ವಜನಿಕರ ಬಹುಕಾಲದ ಬೇಡಿಕೆಯ ತೀರಾ ಅಗತ್ಯತೆಯ ಸೇತುವೆಗಳ ಪುನರ್ ನಿರ್ಮಾಣ ಮಾಡುವ ಕಾರ್ಯವು ಈಗಾಗಲೇ ಕಾರ್ಯರಂಭಗೊಂಡಿದ್ದು ರೂ.3 ಕೋಟಿ 75ಲಕ್ಷವೆಚ್ಚದಲ್ಲಿ 3 ಭಾಗಗಳಲ್ಲಿ ನೂತನ ಸೇತುವೆಗಳು ನಿರ್ಮಾಣಗೊಳ್ಳಲಿದೆ. ಸದರಿ ಕಾಮಗಾರಿಗಳ ಪುನರ್ ನಿರ್ಮಾಣ ಕಾರ್ಯಕ್ಕೆ ಅನುದಾನ ಬಿಡುಗಡೆಗೊಳಿಸಿದ ತಾಲೂಕಿನ ಜನಪ್ರಿಯ ಶಾಸಕರಾದ ಹರೀಶ್ ಪೂಂಜಾರವರಿಗೆ ಮುಂಡಾಜೆ ಮತ್ತು ಕಲ್ಮಂಜ ಗ್ರಾಮದ ಉಭಯ ಗ್ರಾಮಸ್ಥರುಗಳು ವಿಶೇಷ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.


























