ಮಂಗಳೂರು: ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕವೇ ಹವಾ ಸೃಷ್ಟಿಸಿದ್ದ ನಾಗುರಿ ನಿವಾಸಿ ಆಶಾ ಪಂಡಿತ್ ಗುರುವಾರ (ಜ.23) ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ.
ಆಶಾ ಪಂಡಿತ್ ತಮ್ಮ ಚಿತ್ರ ವಿಚಿತ್ರ ರೀಲ್ಸ್ ಗಳಿಂದಲೇ ಇನ್‌ಸ್ಟಾಗ್ರಾಮ್‌ನಲ್ಲಿ ಜನಪ್ರಿಯತೆ ಗಳಿಸಿದ್ದರು. ಪಡೀಲ್ ಬಳಿ ಸಣ್ಣ ಗೂಡಂಗಡಿ ಹೊಂದಿದ್ದರು. ನಿನ್ನೆ ರಾತ್ರಿ ಆನಾರೋಗ್ಯ ಸಮಸ್ಯೆ ಉಂಟಾಗಿದ್ದು, ನಂತರ ಹೃದಯಾಘಾತಕ್ಕೊಳಗಾಗಿ ಅಂಗಳದಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಾಗೂ ಪೋಸ್ಟ್ ಮಾಡಿದ್ದು ನೆಟ್ಟಿಗರು ಶಾಕ್ ಆಗಿದ್ದಾರೆ.

























