ಪುತ್ತೂರು : ಕೇರಳ ರಾಜ್ಯದ ಲಾಟರಿಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡುವವರ ವಿರುದ್ಧ ಪುತ್ತೂರು ಪೊಲೀಸರು ಸಮರ ಸಾರಿದ್ದಾರೆ. ರಾಜ್ಯದ ವಿವಿಧ ಗಡಿ ಭಾಗಗಳಲ್ಲಿ ನಿರಂತರವಾಗಿ ದಾಳಿ ನಡೆಸುತ್ತಿರುವ ಪೊಲೀಸರು ಇದೀಗ ಪುತ್ತೂರಿನಲ್ಲಿ ಅಕ್ರಮ ಲಾಟರಿ ಟಿಕೆಟ್ಗಳನ್ನು ಮಾರಟ ಮಾಡುವ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅ.14 ರಂದು ಪುತ್ತೂರಿನ ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜಾ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಪೇಟಯ ಮುಖ್ಯರಸ್ತೆಯಲಲಿರುವ ಶ್ರೀನಿವಾಸ ಪೈ ಅವರ ಅಂಗಡಿ ಮತ್ತು ಮಂಜಲ್ಪಡ್ಪು ಬಳಿ ಇರುವ ಲಕ್ಷ್ಮಣ ಎಂಬುವವರ ಅಂಗಡಿಗೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ಕೇರಳದ ಲಾಟರಿ ಟಿಕೆಟ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
























