ಮಂಗಳೂರು, ಅ.21: ದ.ಕ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೆ ಅ.22 ರ ಗುರುವಾರ ರಜೆ ಘೋಷಣೆಯಾಗಿದೆ.
ನವರಾತ್ರಿ ಉತ್ಸವದ ಕೊನೆಯ ದಿನ (ಅ. 21) ತಡರಾತ್ರಿಯವರೆಗೆ ಕಾರ್ಯಕ್ರಮವಿರುವ ಕಾರಣ ವಿದ್ಯಾರ್ಥಿಗಳಿಗೆ ಮರುದಿನ ಅ.22 ಶಾಲೆಗಳಿಗೆ ತೆರಳಲು ಸಮಸ್ಯೆಯಾಗಲಿರುವ ಕಾರಣ ಈ ಬಗ್ಗೆ ಪರಿಶೀಲಿಸಬೇಕು ಎಂದು ಸಾರ್ವಜನಿಕರು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ರ ಗಮನ ಸೆಳೆದಿದ್ದರು.
ಇದೀಗ ದ.ಕ ಜಿಲ್ಲೆಯ 1 ರಿಂದ 10ನೇ ತರಗತಿಯವರೆಗೆ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಗುರುವಾರ (ಅ.22) ರಂದು ರಜೆ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆದೇಶಿಸಿದ್ದಾರೆ. ಎ.23 ರಿಂದ ಎಂದಿನಂತೆ ಶಾಲೆಗಳು ಮುಂದುವರಿಯಲಿದೆ.






















