ಇದರ ನಡುವೆ ಇಬ್ಬರು ದಿಗ್ಗಜ ಕ್ರಿಕೆಟಿಗರಲ್ಲಿ ಒಬ್ಬರಿಗೆ ಈ ಪಂದ್ಯ ತಮ್ಮ ಐಪಿಎಲ್ ವೃತ್ತಿ ಜೀವನದ ಕೊನೆಯ ಪಂದ್ಯವಾಗುವ ನಿರೀಕ್ಷೆಯಿದೆ. ಹೌದು, ಆರ್‌ಸಿಬಿಯ ಸ್ಟಾರ್ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹಾಗೂ ಚೆನ್ನೈನ ತಲಾ ಧೋನಿ ಇಬ್ಬರಲ್ಲಿ ಒಬ್ಬರಿಗೆ ಈ ಪಂದ್ಯ ಕೊನೆಯ ಪಂದ್ಯವಾಗುವ ನಿರೀಕ್ಷೆಯಿದೆ.
ಇದಕ್ಕಾಗಿ ಗೆಲುವಿನ ಮೇಲೆ ಇನ್ನಷ್ಟು ನಿರೀಕ್ಷ ಹೆಚ್ಚಿದೆ. ಹೌದು, ಆರ್‌ಸಿಬಿಯ ದಿನೇಶ್ ಕಾರ್ತಿಕ್ ಅವರು ಈ ಸಲ ಐಪಿಎಲ್ ಬಳಿಕ ತಮ್ಮ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ಏನಾದರೂ ಆರ್‌ಸಿಬಿ ಸೋತರೆ ಕಾರ್ತಿಕ್‌ಗೆ ನಾಳೆಯ ಪಂದ್ಯವೇ ಕೊನೆಯ ಪಂದ್ಯವಾಗಲಿದೆ. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲಿ ಅನೇಕ ಪ್ರಾಂಚೈಸಿಗಳಲ್ಲಿ ಆಡಿದ್ದಾರೆ. 38 ವರ್ಷದ ದಿನೇಶ್ ಕಾರ್ತಿಕ್ ತಂಡಕ್ಕೆ ಅನುಗುಣವಾಗಿ ತಮ್ಮ ಆಟವನ್ನು ಬದಲಾಯಿಸಿದ್ದಾರೆ.
ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಫಿನಿಶರ್ ಆಗಿ ಆಡುತ್ತಿದ್ದಾರೆ. ಕಳೆದ ಎರಡು ಸೀಸನ್‌ಗಳಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ, ತಂಡಕ್ಕೆ ರಜತ್ ಪಾಟಿದಾರ್ ಮತ್ತು ಕ್ಯಾಮರೂನ್ ಗ್ರೀನ್ ಆಗಮನದಿಂದ ಆರ್ ಸಿಬಿಯಲ್ಲಿ ಮ್ಯಾಚ್ ಫಿನಿಶರ್ ಗಳ ಸಂಖ್ಯೆ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ಕಾರ್ತಿಕ್ ಗೆ ಇದು ಕೊನೆಯ ಐಪಿಎಲ್ ಆಗಿರಬಹುದು ಎನ್ನಲಾಗುತ್ತಿದ್ದು, ಇದಕ್ಕೆ ಕಾರ್ತಿಕ್ ಸಹ ಅಕೆಲ ಸಂದರ್ಶನದ ವೇಳೆ ಸುಳಿವು ನೀಡಿದ್ದಾರೆ.
ಇತ್ತ ಚೆನ್ನೈ ತಂಡದ ಜೀವಾಳ, ಮಾಜಿ ನಾಯಕ ಎಂಎಸ್ ಧೋನಿ ಅವರಿಗಂತೂ ಖಂಡಿತವಾಗಿ ಕೊನೆಯ ಐಪಿಎಲ್ ಸೀಸನ್ ಆಗಿರಲಿದೆ. ಈಗಾಗಲೇ ಅವರು ಚೆನ್ನೈನ ಜನತೆಗೆ ಧನ್ಯವಾದ ತಿಳಿಸಿದ್ದು, ಏನಾದರೂ ನಾಳೆ ಆರ್‌ಸಿಬಿ ವಿರುದ್ಧ ಚೆನ್ನೈ ಸೋತರೆ ಧೋನಿ ಐಪಿಎಲ್‌ಗೆ ನಿವೃತ್ತಿ ಘೊಷಿಸುವುದು ಖಂಡಿತ ಹಾಗೂ ಅವರಿಗೆ ಇದೇ ಕೊನೆಯ ಐಪಿಎಲ್ ಪಂದ್ಯವಾಗಲಿದೆ.
ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ಬಾರಿ ಟ್ರೋಫಿ ಗೆಲ್ಲಲು ಪ್ರಮುಖರಾಗಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧೋನಿ ತಮ್ಮ ವೃತ್ತಿಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದಾರೆ. 2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಧೋನಿ ಐಪಿಎಲ್‌ನಿಂದಲೂ ಈ ವರ್ಷ ನಿವೃತ್ತರಾಗುತ್ತಾರೆ ಎನ್ನಲಾಗಿದೆ.
ಏಕೆಂದರೆ ಆರ್‌ಸಿಬಿ ಮತ್ತು ಚೆನ್ನೈ ಪಂದ್ಯದಲ್ಲಿ ಗೆದ್ದ ತಂಡ ಮಾತ್ರ ಮುಂದಿನ ಪ್ಲೇಆಫ್‌ಗೆ ಲಗ್ಗೆಯಿಡಲಿದೆ. ಸೋತ ತಂಡ ಲೀಗ್‌ನಿಂದ ಹೊರಬೀಳಲಿದೆ. ಹೀಗಾಗಿ ಗೆದ್ದರೆ ಆ ತಂಡಕ್ಕೆ ಇನ್ನೂ ಪ್ಲೇಆಫ್‌ನಲ್ಲಿ ಒಂದು ಅಥವಾ 2 ಪಂದ್ಯ ಸಿಗಲಿದೆ. ಆದರೆ ಸೋತರೆ ಇದೇ ಕೊನೆಯ ಪಂದ್ಯವಾಗಲಿದೆ. ಹೀಗಾಗಿ ಇವರಿಬ್ಬರು ಪ್ರತಿನಿಧಿಸುವ ಈ 2 ತಂಡದಲ್ಲಿ ಯಾವ ತಂಡದ ಸೋಲುತ್ತದೆಯೋ ಆ ತಂಡದ ಒಬ್ಬ ಆಟಗಾರ ಗುಡ್‌ಬೈ ಹೇಳುವುದು ಖಚಿತವಾಗಿದೆ.