ಕರ್ನಾಟಕ ಬಿಜೆಪಿಯಲ್ಲಿ ಹಿಂದುತ್ವ ಹಿಂದೆ ಸರಿದು ಜಾತೀಯತೆ ಮೇಲೈಸುತ್ತಿದೆ.ಕರ್ನಾಟಕದಲ್ಲಿ ಅಪ್ಪ ಮಕ್ಕಳನ್ನು ಪಕ್ಷದಿಂದ ಮುಕ್ತ ಮಾಡಬೇಕು ಎಂಬ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ:- ಕೆ ಎಸ್ ಈಶ್ವರಪ್ಪ
ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ರಘಪತಿ ಭಟ್ ಪರ ಮತಯಾಚನೆ ಸಂಧರ್ಭ ಮಾತಾನಾಡಿದ ಅವರು ದೇಶದಲ್ಲಿ ಮೋದಿಯವರ ಆಡಳಿತದ ಮೂಲಕ ಸುಭದ್ರವಾಗಿದೆ.ರಾಮ ಲಕ್ಷಣರಂತೆ ಮೋದಿ ಅಮಿತ್ ಶಾ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಒಂದು ಸಿದ್ದಾಂತವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಸಿದ್ದಾಂತಕ್ಕೆ ತೀಲಾಂಜಲಿ ಇಟ್ಟು ಬಿಜೆಪಿ ನಡೆಯಿತ್ತಿದೆ.ಕಾಂಗ್ರೆಸ್ ಸಂಸ್ಕೃತಿ ಕರ್ನಾಟಕ ಬಿಜೆಪಿಯಲ್ಲಿ ಬಂದಿರೋದು ನೋವು ತಂದಿದೆ.
ಕರ್ನಾಟಕದಲ್ಲಿ ಅಪ್ಪ ಮಕ್ಕಳನ್ನು ಮುಕ್ತ ಮಾಡುವ ಹೋರಾಟಕ್ಕೆ ನಾವು ಕೆಲಸ ಆರಂಭಿಸಿದ್ದೇವೆ.ಬಿಜೆಪಿ ಶುದ್ದೀಕರಣ ಆಗಬೇಕಾಗಿದೆ. ಕರ್ನಾಟಕದಲ್ಲಿ ಹಿಂದುತ್ವ, ರಾಷ್ಟ್ರೀಯತೆ,ರೈತ ಹೋರಾಟದಿಂದ ಹಿಂದೆ ಸರಿದು ಜಾತಿ ವ್ಯವಸ್ಥೆ ಕಡೆಗೆ ವಾಲುತ್ತಿರುವ ಈ ಸಂಧರ್ಭ ಪಕ್ಷ , ಹಿಂದುತ್ವ ಎಂದು ಯೋಚಿಸುವ ಕಾರ್ಯಕರ್ತರು ರಘಪತಿ ಭಟ್ ಅವರನ್ನು ಗೆಲ್ಲಿಸಲು ಕೆಲಸ ಮಾಡಬೇಕು.
ಪ್ರಸ್ತುತ ಕರ್ನಾಟಕ ಬಿಜೆಪಿಯಿಂದ ಹಿಂದುತ್ವಕ್ಕೆ ಆಗುತ್ತಿರುವ ಅವಮಾನ,ರಘಪತಿ ಭಟ್, ನನಗೆ ಆಗಿರುವ ಅನ್ಯಾಯದ ಬಗ್ಗೆ ಎಲ್ಲರೂ ಗಮನಿಸುತ್ತಿದ್ದಾರೆ.
ಕಾಂಗ್ರೆಸ್ ನಿಂದ ಬಂದವರಿಗೆ ಬಿಜೆಪಿಯಿಂದ ಟಿಕೇಟ್
ಹರ್ಷಾ ಕೊಲೆ ಸಂಧರ್ಭ ನಕ್ಸಲಿಸ್ಟ್,ಮುಸ್ಲಿಂರನ್ನು ಇಟ್ಟುಕೊಂಡು ಶಾಂತಿಗಾಗಿ ನಡಿಗೆ ಮಾಡಿದ ವ್ಯಕ್ತಿಗೆ ಬಿಜೆಪಿ ಟಿಕೇಟ್ ನೀಡಿದೆ.ಶಿಕಾರಿಪುರದಲ್ಲಿ ಮಗನ ಚುನಾವಣೆ ಗೆಲ್ಲಬೇಕೆಂಬ ಯೋಚನೆಯಿಂದ ಜಾತಿವಾದಿಗೆ ಬಿ ಎಸ್ ವೈ ಟಿಕೇಟ್ ನೀಡಿ ಮಣೆ ಹಾಕಿದ್ದಾರೆ.
ಜನತಾ ಪಕ್ಷ ಕಟ್ಟಿದ್ದು ಒಂದು ಇತಿಹಾಸ.ವಿಧಾನ ಸಭಾ ಚುನಾವಣೆಯ ವೇಳೆ 45 ವರ್ಷಗಳಿಂದ ರಘಪತಿ ಭಟ್ ನನ್ನ ಜೊತೆ ಕೆಲಸ ಮಾಡಿದ್ದಾರೆ. ನನಗೆ ದೆಹಲಿಯಿಂದ ಕರೆ ಮಾಡಿದ್ದಾರೆ. ರಘಪತಿ ಭಟ್ ಅವರಿಗೆ ಅದೂ ಬಂದಿಲ್ಲ ಆದರೂ ಪಕ್ಷ ನಿಷ್ಟೆ ಬಿಟ್ಟಿಲ್ಲ.ಈ ಚುನಾವಣೆಯಲ್ಲಿ ಮತ್ತೆ ಅನ್ಯಾಯವಾಗಿದೆ.ಇದರ ನೋವು ಕಾರ್ಯಕರ್ತರಿಗೆ ಇದೆ.ಅದಕ್ಕಾಗಿ ರಘಪತಿ ಭಟ್ ಅವರನ್ನು ಗೆಲ್ಲಿಸುವಂತೆ ಈಶ್ವರಪ್ಪ ವಿನಂತಿಸಿದರು.