ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಯಾಣಿಕರಿಗೆ ಶುಭ ಸುದ್ದಿ. ಶೀಘ್ರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಸೂಪರ್‌ಫಾಸ್ಟ್ ಬಸ್‌ಗಳ (KSRTC Bus) ಓಡಾಟ ಆರಂಭಗೊಳ್ಳಲಿದೆ. ಹೌದು, ಮಂಗಳೂರಿನಿಂದ ಧರ್ಮಸ್ಥಳದವರೆಗೆ ನಾಲ್ಕು ಸೂಪರ್‌ಫಾಸ್ಟ್ ಬಸ್‌ಗಳ ಸಂಚಾರ ಆರಂಭವಾಗಲಿದೆ.
KSRTC ಮಂಗಳೂರು ವಿಭಾಗವು ಮಂಗಳೂರು ಮತ್ತು ಧರ್ಮಸ್ಥಳ ನಡುವೆ ನಾಲ್ಕು ‘ಸೂಪರ್‌ಫಾಸ್ಟ್’ ಬಸ್‌ಗಳನ್ನು ಪ್ರಾರಂಭಿಸಿದೆ. ಬಸ್‌ಗಳು ಮಂಗಳೂರಿನ ಬಿಜೈನಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕಾರ್ಯನಿರ್ವಹಿಸಲಿವೆ. ಬಂಟ್ವಾಳ, ಕಾರಿಂಜ ಕ್ರಾಸ್, ಪುಂಜಾಲಕಟ್ಟೆ, ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ ಮತ್ತು ಉಜಿರೆಯಲ್ಲಿ ಈ ಬಸ್‌ಗಳು ಸ್ಟಾಪ್ ನೀಡಲಿದೆ.
ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬೆಳಗ್ಗೆ 6.15, 6.40, 7.15, 10, 10.45, 11.35, 12.15, ಸಂಜೆ 4.30, ಸಂಜೆ 5.15 ಮತ್ತು ಸಂಜೆ 6 ಗಂಟೆಗೆ ಬಸ್‌ಗಳು ಧರ್ಮಸ್ಥಳಕ್ಕೆ ಹೊರಡಲಿವೆ. ಹಾಗೆಯೇ ಧರ್ಮಸ್ಥಳದ ಬಸ್ ನಿಲ್ದಾಣದಿಂದ ಬೆಳಿಗ್ಗೆ 7.15, 8.15 ಕ್ಕೆ ಹೊರಡಲಿವೆ. ಬೆಳಗ್ಗೆ 8.45, 9.10, ಮಧ್ಯಾಹ್ನ 1, 2.15, 3 ಹಾಗೂ ಸಂಜೆ 4, 6 ಮತ್ತು 6.30ಗಂಟೆಗೆ ಹೊರಡಲಿವೆ.
ಮಂಗಳೂರಿನಿಂದ ನಿಗದಿಪಡಿಸಲಾದ ದರ ಕಾರಿಂಜ ಕ್ರಾಸ್‌ಗೆ 51, ಪುಂಜಾಲಕಟ್ಟೆಗೆ 56, ಗುರುವಾಯನಕೆರೆಗೆ 62, ಬೆಳ್ತಂಗಡಿಗೆ 66, ಉಜಿರೆಗೆ 71, ಮತ್ತು ಧರ್ಮಸ್ಥಳಕ್ಕೆ 86 ದರ ನಿಗದಿಪಡಿಸಲಾಗಿದೆ.ಇನ್ಮುಂದೆ ಮಂಗಳೂರಿನಿಂದ ಧರ್ಮಸ್ಥಳ ಹೋಗುವವರಿಗೆ ತುಂಬಾನೇ ಸುಲಭವಾಗಲಿದ್ದು, ತುರ್ತು ಸಂದರ್ಭಗಳಲ್ಲಿ ಇದು ಸಹಕಾರಿಯಾಗಲಿದೆ. ಕಡಿಮೆ ಸಮಯದಲ್ಲಿ ತಮಗೆ ಬೇಕಾದ ಸ್ಥಳಗಳಿಗೆ ಈ ಮೂಲಕ ಸಂಚಾರ ಮಾಡಬಹುದು.