ಕೊಪ್ಪಳ ತಾಲೂಕಿನ ಹೊಸಲಿಂಗಾಪುರದಲ್ಲಿ ಮೂವರ ನಿಗೂಢ ಸಾವಿನ ಪ್ರಕರಣವನ್ನು ಪೋಲಿಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು ಈ ಮೂಲಕ ಹತ್ಯೆಯಾದ ರಾಜೇಶ್ವರಿ (50), ಮಗಳು ವಸಂತ ಕುಮಾರಿ (32) ಮೊಮ್ಮಗ ಸಾಯಿಧರ್ಮ ತೇಜ(5) ಪ್ರಕರಣಕ್ಕೆ ಅಂತ್ಯ ಸಿಕ್ಕಿದೆ.
ಹತ್ಯೆಯಾದ ವಸಂತ ಕುಮಾರಿ ಎಂಬವಳು ಈ ಹಿಂದೆ ಆಂಧ್ರಪ್ರದೇಶ ಸಮೀಪದ ನಂದ್ಯಲ ಮೂಲದ ವ್ಯಕ್ತಿ ಜೊತೆ ಮದುವೆಯಾಗಿತ್ತು. ಈ ದಂಪತಿಗೆ ಸಾಯಿಧರ್ಮತೇಜ್ ಎನ್ನುವ ಮಗ ಇದ್ದನು. ಆದರೆ ಕೌಟುಂಬಿಕ ಕಲಹದಿಂದ ವಸಂತ ಕುಮಾರಿ ಗಂಡನಿಂದ ಬೇರೆಯಾಗಿ, ನಂತರ ಹೊಸಲಿಂಗಾಪುರ ಗ್ರಾಮದಲ್ಲಿ ತನ್ನ ತಾಯಿ ಮಗನ ಜೊತೆ ಬಾಡಿಗೆ ಮನೆಯಲ್ಲಿದ್ದು ಜೀವನೋಪಾಯಕ್ಕಾಗಿ ಗೊಂಬೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.ಇದೇ ಜಾಗದಲ್ಲಿ ಆರೀಪ್ ಜೊತೆ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಿದ್ದಳು.
ಹತ್ಯೆಯಾದ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೋಲಿಸರಿಗೆ ಮೇಲ್ನೋಟಕ್ಕೆ ಆತ್ಮಹತ್ಯೆ ಎಂದೆನಿಸಿದರು ಒಂದೇ ರೀತಿ ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದು ಸಂದೇಹವಾಗಿತ್ತು.ಆದರೆ ಯಾವುದೇ ಕುರುಹು ಸಿಗದ ಕಾರಣ ಬೇರೆ-ಬೇರೆ ರೀತಿಯಲ್ಲಿ ತನಿಖೆ ನಡೆಸಿ ಹತ್ಯೆಯ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಯಾರು…?
ಮೊದಲ ಗಂಡನ ವಿಚ್ಚೇದನ ನಂತರ ಆರೀಪ್ ನನ್ನು ಮದುವೆಯಾದ ಕಾರಣವೇ ಈ ಹತ್ಯೆ ನಡೆದಿದೆ. ಕಾರಣವೇನೆಂದರೆ ಆರೀಪ್ ನನ್ನು ಮದುವೆಯಾಗುವ ಮೊದಲು ಆಸೀಫ್ ನನ್ನು ಪ್ರೀತಿಸುತ್ತಿದ್ದಳು. ಆದರೆ ಆರೀಫ್‌ಗೆ ಈಗಾಗಲೇ ಮದುವೆಯಾಗಿದ್ದು, ಮೊದಲ ಹೆಂಡತಿಯಿಂದ ಮಕ್ಕಳು ಇದ್ದವು.
ಆಸೀಪ್ ನನ್ನು ದೂರ ಮಾಡಿದ ಸಿಟ್ಟಿನಿಂದ ವಸಂತಳ ಬಾಡಿಗೆ ಮನೆಗೆ ಬಂದು ಮೊದಲು ತಾಯಿ ರಾಜೇಶ್ವರಿ,ಮಗು ತೇಜ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ.
ಸಂಜೆ ಕೆಲಸ ಮುಗಿಸಿ ಬಂದ ವಸಂತಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಆಸೀಪ್ ಪರಾರಿಯಾಗಿದ್ದ ಆದರೆ ಪೋಲಿಸರ ಸಮರ್ಪಕ ತನಿಖೆಯಿಂದ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಎಸ್ ಪಿ ಯಶೋದಾ ಒಂಟಗೋಡಿ ತಿಳಿಸಿದ್ದಾರೆ.