ಉಡುಪಿ ಮಾಜಿ ಶಾಸಕ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಘಪತಿ ಭಟ್ ಪುತ್ತೂರಿಗೆ.
ವಿಧಾನಪರಿಷತ್ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಘಪತಿ ಭಟ್ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದರು.
ರಘಪತಿ ಭಟ್ ಪುತ್ತೂರಿಗೆ ಆಗಮಿಸಿದ ಸಂಧರ್ಭದಲ್ಲಿ ಸಾಮಾಜಿಕ ಹೋರಾಟಗಾರ ರಾಜಾರಾಂ ಭಟ್, ಪ್ರಮುಖರಾದ ನವೀನ್ ಕುಲಾಲ್, ಶಿವ ಭಟ್ ಉಪಸ್ಥಿತರಿದ್ದರು.
ಈ ದಿನ ಪುತ್ತೂರಿನ ಶಾಲಾ ಕಾಲೇಜು, ಪದವೀಧರರನ್ನು ಭೇಟಿಯಾಗಿ ಮತಯಾಚನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.