ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಅಪಾರ ಅಭಿಮಾನಿಗಳನ್ನು ಹೊಂದಿರುವ ಕರ್ನಾಟಕದ ಬಲಿಷ್ಠ ಲೋಕ ಸಭಾ ಕ್ಷೇತ್ರವಾಗಿರುವ ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ಬ್ರಿಜೇಶ್ ಚೌಟ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಪದ್ಮರಾಜ್ ವಿರುದ್ಧ ಭರ್ಜರಿ ಮತಗಳ ಅಂತರದ ವಿಜಯ ಸಾಧಿಸಿದ್ದಾರೆ. ಈ ಮೂಲಕ ಕೇಸರಿ ಪಕ್ಷ ಪಾರಮ್ಯ ಇಲ್ಲಿ ಮುಂದುವರಿದಿದೆ. ಆಡಳಿತ ವಿರೋಧಿ ಅಲೆಯನ್ನು ಮೀರುವ ಬಿಜೆಪಿಯ ತಂತ್ರ ಫಲಿಸಿದ್ದು, ಹೊಸ ಮುಖವೊಂದು ಪಾರ್ಲಿಮೆಂಟ್ಗೆ ಏರಿದೆ.
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರ ಪಶ್ಚಿಮ ಘಟ್ಟಗಳು ಮತ್ತು ಅರೇಬಿಯನ್ ಸಮುದ್ರದ ನಡುವೆ ವ್ಯಾಪಿಸಿದೆ. ಇದು ಸಮುದ್ರ, ವಾಯು, ರೈಲು ಮತ್ತು ರಸ್ತೆ ಸಂಪರ್ಕವನ್ನು ಹೊಂದಿರುವ ಕರ್ನಾಟಕದ ಏಕೈಕ ಕ್ಷೇತ್ರವಾಗಿದೆ. ಈ ಭೌಗೋಳಿಕ-ಆರ್ಥಿಕ ಪ್ರಗತಿಯು ಈ ಕ್ಷೇತ್ರವನ್ನು ಹೆಚ್ಚು ಪೈಪೋಟಿ ಸೃಷ್ಟಿಯಾಗುವಂತೆ ಮಾಡಿದೆ. ವಾಸ್ತವವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಹಿರಿಯ ನಾಗರಿಕರು ಮತ್ತು ಅಂಗವಿಕಲ ಮತದಾರರು ಇದ್ದಾರೆ. 2024 ರ ಚುನಾವಣೆಗೆ 6658 ಕ್ಕೂ ಹೆಚ್ಚು ಹಿರಿಯ ನಾಗರಿಕರು ಮತ್ತು ಅಂಗವಿಕಲರು ಇಲ್ಲಿ ಮತ ಚಲಾಯಿಸಿದ್ದಾರೆ.
ಬಿಜೆಪಿ, ವಿಶೇಷವಾಗಿ ನರೇಂದ್ರ ಮೋದಿ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಸಾಕಷ್ಟು ಜನಪ್ರಿಯ. ಪಕ್ಷವು ತನ್ನ ಮತದಾರರ ನೆಲೆಯನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿಸಲು ಆಕ್ರಮಣಕಾರಿಯಾಗಿ ಪ್ರಚಾರ ನಡೆಸಿದೆ. ನಳಿನ್ ಕುಮಾರ್ ಕಟೀಲ್ ಅವರನ್ನು ಕೆಳಗಿಳಿಸುವ ಮೂಲಕ ಬಿಜೆಪಿ ಆಡಳಿತ ವಿರೋಧಿ ಅಂಶಗಳನ್ನು ತೆಗೆಹಾಕಿತ್ತು