• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಮುಂದಿನ ಹತ್ತು ವರ್ಷಗಳ ಕಾಲ ನಾವೇ ಆಡಳಿತದಲ್ಲಿದ್ದು, ಅತ್ಯುತ್ತಮ ಆಡಳಿತ ನೀಡಲಿದ್ದೇವೆ: ನರೇಂದ್ರ ಮೋದಿ

June 7, 2024
ಪುತ್ತೂರು: ಅಶೋಕ ಜನಮನ 2025 ದೀಪಾವಳಿ ಕಾರ್ಯಕ್ರಮದ ಕರಪತ್ರ ಬಿಡುಗಡೆ. ವಿವಿಧ ಸಮಿತಿಗಳ ನೇಮಕ: ಸುಮಾ ಅಶೋಕ್‌ ರೈ

September 18, 2025
ಪೊಲೀಸ್ ಆಗುವ ಕನಸು ಕಂಡಿದ್ದ ವ್ಯಕ್ತಿ ತಂದೆಯನ್ನು ಕೊಂದು ಜೈಲುಪಾಲಾದ

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಗೆ ಕೊಳೆರೋಗ ; ಈ ಬಾರಿ ರೈತರಿಗೆ ಆರ್ಥಿಕ ಸಂಕಷ್ಟದ ಹೊಡೆತ

ಹಂಪನಕಟ್ಟೆ ಪೂಂಜಾ ಇಂಟರ್ನ್ಯಾಶನಲ್ ಹೊಟೇಲ್ ಮಾಲಕ ಪ್ರಭಾಕರ ಪೂಂಜಾ ನಿಧನ

ಸೆ 17 ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ  ನರೇಂದ್ರ ಮೋದಿಜೀ ಯವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕಳೆoಜ ನಂದಗೋಕುಲ ಗೋಶಾಲೆಗೆ  ಧನಸಹಾಯ ಹಾಗೂ ಎರಡು ಅಶಕ್ತ ಕುಟುಂಬಗಳಿಗೆ  ಆಹಾರಧಾನ್ಯ ಕಿಟ್ ವಿತರಣೆ

ಧರ್ಮಸ್ಥಳ ಬಂಗ್ಲೆಗುಡ್ಡೆಯ ಸಂಭಾವ್ಯ ಪುರಾವೆ ಸ್ಥಳವೆಂದು ಗುರುತಿಸಲಾದ ಈ ಪ್ರದೇಶದಲ್ಲಿ ತಲೆಬರುಡೆ ಸಮೇತ ಭಾರಿ ಮೂಳೆಗಳು ಪತ್ತೆ

September 17, 2025
Ai ಫೋಟೋ ಎಡಿಟ್ ಟ್ರೆಂಡ್‌ ಬಗ್ಗೆ ಭಾರೀ ಎಚ್ಚರಿಕೆ ನೀಡಿದ ಪೊಲೀಸರು: ಈ ಆಪ್ಗಳ ಮೂಲಕ ಖಾಸಗಿ ವಿಡಿಯೋ ಫೋಟೋ ಅಪ್ಲೋಡ್ ಆಗಬಹುದು ಡೇಂಜರ್

ನಿಟ್ಟುಸಿರು ಬಿಟ್ಟ ವಿಟ್ಲ ಕಳುವಾಜೆ ಶಿವಾಜಿನಗರ ನಿವಾಸಿಗಳು 15 ವರ್ಷಗಳಿಂದ ಇದ್ದ ದಾರಿ ವಿವಾದಕ್ಕೆ ಅಂತ್ಯ ಹಾಡಿದ ಶಾಸಕ ಅಶೋಕ್ ರೈ

ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.),ಅರಸಿನಮಕ್ಕಿ ಇದರ ನೇತೃತ್ವದಲ್ಲಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಅರಸಿನಮಕ್ಕಿಯಲ್ಲಿ ಬೃಹತ್ ರಕ್ತದಾನ ಶಿಬಿರ

ಪುತ್ತೂರು : KSRTC ಬಸ್ಸಿನಲ್ಲಿ ಯುವತಿಗೆ ಕಿರುಕುಳ ಆರೋಪಿಗೆ ಶಿಕ್ಷೆ

ಕರಾವಳಿ ಜಿಲ್ಲೆಗಳ ಪ್ರವಾಸ ಉದ್ಯಮ ಅಭಿವೃದ್ಧಿಗೆ ಸರಕಾರದ ಮಾಸ್ಟರ್ ಪ್ಲಾನ್

ಮಾಣಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ : ರಾ.ಹೆದ್ದಾರಿ ಪ್ರಾದೇಶಿಕ ಅಧಿಕಾರಿ ಜೊತೆ ಶಾಸಕ ರೈ ಮಾತುಕತೆ ಆದಷ್ಟು ಶೀಘ್ರ ಕಾಮಗಾರಿ ಪ್ರಾರಂಭಿಸಲು‌ ಮನವಿ

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Thursday, September 18, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಪುತ್ತೂರು: ಅಶೋಕ ಜನಮನ 2025 ದೀಪಾವಳಿ ಕಾರ್ಯಕ್ರಮದ ಕರಪತ್ರ ಬಿಡುಗಡೆ. ವಿವಿಧ ಸಮಿತಿಗಳ ನೇಮಕ: ಸುಮಾ ಅಶೋಕ್‌ ರೈ

    ಪುತ್ತೂರು: ಅಶೋಕ ಜನಮನ 2025 ದೀಪಾವಳಿ ಕಾರ್ಯಕ್ರಮದ ಕರಪತ್ರ ಬಿಡುಗಡೆ. ವಿವಿಧ ಸಮಿತಿಗಳ ನೇಮಕ: ಸುಮಾ ಅಶೋಕ್‌ ರೈ

    ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಗೆ ಕೊಳೆರೋಗ ; ಈ ಬಾರಿ ರೈತರಿಗೆ ಆರ್ಥಿಕ ಸಂಕಷ್ಟದ ಹೊಡೆತ

    ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಗೆ ಕೊಳೆರೋಗ ; ಈ ಬಾರಿ ರೈತರಿಗೆ ಆರ್ಥಿಕ ಸಂಕಷ್ಟದ ಹೊಡೆತ

    ಹಂಪನಕಟ್ಟೆ ಪೂಂಜಾ ಇಂಟರ್ನ್ಯಾಶನಲ್ ಹೊಟೇಲ್ ಮಾಲಕ ಪ್ರಭಾಕರ ಪೂಂಜಾ ನಿಧನ

    ಹಂಪನಕಟ್ಟೆ ಪೂಂಜಾ ಇಂಟರ್ನ್ಯಾಶನಲ್ ಹೊಟೇಲ್ ಮಾಲಕ ಪ್ರಭಾಕರ ಪೂಂಜಾ ನಿಧನ

    ಸೆ 17 ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ  ನರೇಂದ್ರ ಮೋದಿಜೀ ಯವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕಳೆoಜ ನಂದಗೋಕುಲ ಗೋಶಾಲೆಗೆ  ಧನಸಹಾಯ ಹಾಗೂ ಎರಡು ಅಶಕ್ತ ಕುಟುಂಬಗಳಿಗೆ  ಆಹಾರಧಾನ್ಯ ಕಿಟ್ ವಿತರಣೆ

    ಸೆ 17 ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ನರೇಂದ್ರ ಮೋದಿಜೀ ಯವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕಳೆoಜ ನಂದಗೋಕುಲ ಗೋಶಾಲೆಗೆ ಧನಸಹಾಯ ಹಾಗೂ ಎರಡು ಅಶಕ್ತ ಕುಟುಂಬಗಳಿಗೆ ಆಹಾರಧಾನ್ಯ ಕಿಟ್ ವಿತರಣೆ

    ಧರ್ಮಸ್ಥಳ ಬಂಗ್ಲೆಗುಡ್ಡೆಯ ಸಂಭಾವ್ಯ ಪುರಾವೆ ಸ್ಥಳವೆಂದು ಗುರುತಿಸಲಾದ ಈ ಪ್ರದೇಶದಲ್ಲಿ ತಲೆಬರುಡೆ ಸಮೇತ ಭಾರಿ ಮೂಳೆಗಳು ಪತ್ತೆ

    ಧರ್ಮಸ್ಥಳ ಬಂಗ್ಲೆಗುಡ್ಡೆಯ ಸಂಭಾವ್ಯ ಪುರಾವೆ ಸ್ಥಳವೆಂದು ಗುರುತಿಸಲಾದ ಈ ಪ್ರದೇಶದಲ್ಲಿ ತಲೆಬರುಡೆ ಸಮೇತ ಭಾರಿ ಮೂಳೆಗಳು ಪತ್ತೆ

    ನಿಟ್ಟುಸಿರು ಬಿಟ್ಟ ವಿಟ್ಲ ಕಳುವಾಜೆ ಶಿವಾಜಿನಗರ ನಿವಾಸಿಗಳು 15 ವರ್ಷಗಳಿಂದ ಇದ್ದ ದಾರಿ ವಿವಾದಕ್ಕೆ ಅಂತ್ಯ ಹಾಡಿದ ಶಾಸಕ ಅಶೋಕ್ ರೈ

    ನಿಟ್ಟುಸಿರು ಬಿಟ್ಟ ವಿಟ್ಲ ಕಳುವಾಜೆ ಶಿವಾಜಿನಗರ ನಿವಾಸಿಗಳು 15 ವರ್ಷಗಳಿಂದ ಇದ್ದ ದಾರಿ ವಿವಾದಕ್ಕೆ ಅಂತ್ಯ ಹಾಡಿದ ಶಾಸಕ ಅಶೋಕ್ ರೈ

    ಪುತ್ತೂರು : KSRTC ಬಸ್ಸಿನಲ್ಲಿ ಯುವತಿಗೆ ಕಿರುಕುಳ ಆರೋಪಿಗೆ ಶಿಕ್ಷೆ

    ಪುತ್ತೂರು : KSRTC ಬಸ್ಸಿನಲ್ಲಿ ಯುವತಿಗೆ ಕಿರುಕುಳ ಆರೋಪಿಗೆ ಶಿಕ್ಷೆ

    ಕರಾವಳಿ ಜಿಲ್ಲೆಗಳ ಪ್ರವಾಸ ಉದ್ಯಮ ಅಭಿವೃದ್ಧಿಗೆ ಸರಕಾರದ ಮಾಸ್ಟರ್ ಪ್ಲಾನ್

    ಕರಾವಳಿ ಜಿಲ್ಲೆಗಳ ಪ್ರವಾಸ ಉದ್ಯಮ ಅಭಿವೃದ್ಧಿಗೆ ಸರಕಾರದ ಮಾಸ್ಟರ್ ಪ್ಲಾನ್

    ಮಾಣಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ : ರಾ.ಹೆದ್ದಾರಿ ಪ್ರಾದೇಶಿಕ ಅಧಿಕಾರಿ ಜೊತೆ ಶಾಸಕ ರೈ ಮಾತುಕತೆ ಆದಷ್ಟು ಶೀಘ್ರ ಕಾಮಗಾರಿ ಪ್ರಾರಂಭಿಸಲು‌ ಮನವಿ

    ಮಾಣಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ : ರಾ.ಹೆದ್ದಾರಿ ಪ್ರಾದೇಶಿಕ ಅಧಿಕಾರಿ ಜೊತೆ ಶಾಸಕ ರೈ ಮಾತುಕತೆ ಆದಷ್ಟು ಶೀಘ್ರ ಕಾಮಗಾರಿ ಪ್ರಾರಂಭಿಸಲು‌ ಮನವಿ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ರಾಷ್ಟ್ರೀಯ

ಮುಂದಿನ ಹತ್ತು ವರ್ಷಗಳ ಕಾಲ ನಾವೇ ಆಡಳಿತದಲ್ಲಿದ್ದು, ಅತ್ಯುತ್ತಮ ಆಡಳಿತ ನೀಡಲಿದ್ದೇವೆ: ನರೇಂದ್ರ ಮೋದಿ

by ಪ್ರಜಾಧ್ವನಿ ನ್ಯೂಸ್
June 7, 2024
in ರಾಷ್ಟ್ರೀಯ
0
ಮುಂದಿನ ಹತ್ತು ವರ್ಷಗಳ ಕಾಲ ನಾವೇ ಆಡಳಿತದಲ್ಲಿದ್ದು, ಅತ್ಯುತ್ತಮ ಆಡಳಿತ ನೀಡಲಿದ್ದೇವೆ: ನರೇಂದ್ರ ಮೋದಿ
166
SHARES
473
VIEWS
ShareShareShare

ಹೊಸದಿಲ್ಲಿ: ಮುಂದಿನ ಹತ್ತು ವರ್ಷಗಳ ಕಾಲ ನಾವೇ ಆಡಳಿತದಲ್ಲಿದ್ದು, ಅತ್ಯುತ್ತಮ ಆಡಳಿತ ನೀಡಲಿದ್ದೇವೆ. ನಾನು ಇದನ್ನು ಹೆಚ್ಚಿನ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ  ನುಡಿದರು. ನೂತನ ಎನ್‌ಡಿಎ ಸಂಸದರ ಸಭೆಯಲ್ಲಿ, ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಅವರು ಸಂಸದರನ್ನು ಉದ್ದೇಶಿಸಿ ಮಾತನಾಡಿದರು. ಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸಂವಿಧಾನ ಸಧನದಲ್ಲಿ ಸಂವಿಧಾನಕ್ಕೆ ನಮಸ್ಕರಿಸಿದರು ಬಳಿಕ ಮಿತ್ರ ಪಕ್ಷಗಳ ಮುಖ್ಯಸ್ಥರಾದ ಚಂದ್ರಬಾಬು ನಾಯ್ಡು, ನಿತೀಶ್​ ಕುಮಾರ್ ಹಾಗೂ ಎಚ್​ಡಿ ಕುಮಾರಸ್ವಾಮಿ ಬಳಿ ಮಾತನಾಡಿದರು. ಬಳಿಕ ಮಾತನಾಡಿದ ಮೋದಿ, ‘‘ಸರ್ಕಾರ ನಡೆಸಲು ಬಹುಮತ ಅಗತ್ಯ ದೇಶವನ್ನು ಮುನ್ನಡೆಸಲು ಒಮ್ಮತ ಅಗತ್ಯ’’ ಎಂದು ಹೇಳಿದರು.

ಭಾರತದ ಜನತೆಯ ಸ್ಥಳೀಯ ಆಸೆ ಆಕಾಂಕ್ಷೆಗಳು, ರಾಷ್ಟ್ರೀಯ ಆಸೆ ಆಕಾಂಕ್ಷೆಗಳನ್ನು ಜತೆಗೆ ಜೋಡಿಸಿ ನಾವು ಈಡೇರಿಸಬೇಕಾಗಿದೆ. ಈ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಎನ್‌ಡಿಎ ನೂತನ ರಾಜನೀತಿಯೊಂದನ್ನು ತೆರೆದಿದೆ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಅವರ ಸರಕಾರವಿದೆ. ಆದರೆ ಅಲ್ಲಿನ ಜನರು ಎನ್‌ಡಿಎಯನ್ನು ಅಪ್ಪಿಕೊಂಡಿದ್ದಾರೆ.

ತಮಿಳುನಾಡು ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಅಲ್ಲಿನ ಜನರು ನಮ್ಮ ಧ್ವಜವನ್ನು ಎತ್ತಿ ಹಿಡಿಯಲು ಹೋರಾಡಿದರು. ಅಲ್ಲಿ ನಮ್ಮ ಮತಪ್ರಮಾಣ ಹೆಚ್ಚಿದೆ. ಅಲ್ಲಿ ನಾಳೆ ಭವಿಷ್ಯದಲ್ಲಿ ಏನು ಬರೆದಿದೆ ಎಂಬುದನ್ನು ನಾನು ಈಗಲೇ ಹೇಳಬಲ್ಲೆ. ಕೇರಳದಲ್ಲಿ ನಮ್ಮ ಎಷ್ಟೋ ಕಾರ್ಯಕರ್ತರು ಬಲಿದಾನ ಮಾಡಿದ್ದಾರೆ. ಅಲ್ಲಿಂದ ಮೊದಲ ಬಾರಿಗೆ ಒಬ್ಬ ನಮ್ಮ ಸಂಸದರು ಆರಿಸಿ ಬಂದಿದ್ದಾರೆ. ಅರುಣಾಚಲ ಪ್ರದೇಶ, ಸಿಕ್ಕಿಂನಲ್ಲಿ ನಾವು ಸರಕಾರ ರಚಿಸಿದ್ದೇವೆ ಎಂದು ಅವರು ಹೇಳಿದರು.

ಆಂಧ್ರಪ್ರದೇಶದಿಂದ 16 ಸಂಸದರನ್ನು ತಂದ ಚಂದ್ರಬಾಬು ನಾಯ್ಡು ಅವರನ್ನು ಮೋದಿ ಶ್ಲಾಘಿಸಿದರು. ಪವನ್‌ ಕಲ್ಯಾಣ್‌ ಅವರು ʼಪವನʼ ಅಲ್ಲ ʼಬಿರುಗಾಳಿʼ ಎಂದು ಅವರು ಚಟಾಕಿ ಹಾರಿಸಿದರು.

ಇವಿಎಂಗಳನ್ನು ವಿರೋಧಿಸಿದ ಇಂಡಿ ಒಕ್ಕೂಟ ಪ್ರಗತಿ ವಿರೋಧಿ, ತಂತ್ರಜ್ಞಾನದ ವಿರೋಧಿ ಎಂದು ಅವರು ನುಡಿದರು. ಪ್ರತಿಪಕ್ಷಗಳು ಇವಿಎಂ ಅನ್ನು ಟೀಕಿಸುತ್ತಿದ್ದವು. ಈಗ ಅದರ ಬಗ್ಗೆ ಮೌನವಾಗಿವೆ. ಹೀಗಾಗಿ ಇವಿಎಂಗಳು ಇವೆಯೋ ಇಲ್ಲವೋ ಎಂಬುದೇ ನನಗೆ ಗೊತ್ತಾಗುತ್ತಿಲ್ಲ ಎಂದೂ ಅವರು ಚಟಾಕಿ ಸಿಡಿಸಿದರು. ಭಾರತದ ಪ್ರಜಾಪ್ರಭುತ್ವದ ಬಗ್ಗೆ, ಚುನಾವಣೆ ಪ್ರಕ್ರಿಯೆಯ ಬಗ್ಗೆ ಅವಿಶ್ವಾಸ ಮೂಡಿಸುವುದೇ ಅವರ ಕೆಲಸವಾಗಿದೆ ಎಂದರು.

ಕಾಂಗ್ರೆಸ್‌ ನಡವಳಿಕೆಯನ್ನು ಟೀಕಿಸಿದ ಅವರು, ಅವರ ಪಕ್ಷದ ಪ್ರಧಾನಿಯನ್ನೇ ಅವರು ಅವಮಾನಕ್ಕೊಳಪಡಿಸುತ್ತಿದ್ದರು. ಅವರ ಪಕ್ಷದ ಪ್ರಧಾನಿ ಹೊರಗೆ ಹೋದಾಗ ಕುಳಿತುಕೊಳ್ಳಲು ಆಸನ ಇರುತ್ತಿರಲಿಲ್ಲ. ಅಂಥ ಸ್ಥಿತಿಯಿಂದ ಬಂದಿದ್ದರೂ ಈಗಲೂ ತಮ್ಮ ಗೌರವ ಉಳಿಸಿಕೊಳ್ಳುವುದು ಅವರಿಗೆ ಗೊತ್ತಿಲ್ಲ ಎಂದು ಅವರು ಚಾಟಿ ಬೀಸಿದರು. ಹೀಗಿದ್ದರೂ, ಪ್ರತಿಪಕ್ಷದ ಸಂಸದರು ಸದನಕ್ಕೆ ಬಂದು ಕಲಾಪಗಳಲ್ಲಿ ಭಾಗವಹಿಸುತ್ತಾರೆ ಎಂಬುದು ನನ್ನ ವಿಶ್ವಾಸ ಎಂದರು.

ಭಾರತದಲ್ಲಿ ಕಾಂಗ್ರೆಸ್‌ ಹೀನಾಯ ಸೋಲಿನ ಬಗ್ಗೆ ಮೋದಿ ಲೇವಡಿ ಮಾಡಿದರು. 10 ವರ್ಷಗಳ ಬಳಿಕವೂ ಅದು ಪಾಠ ಕಲಿತಿಲ್ಲ. ಹಿಂದಿನ ಮೂರೂ ಚುನಾವಣೆಗಳಲ್ಲಿ ಗೆದ್ದ ಸೀಟುಗಳನ್ನು ಸೇರಿಸಿದರೂ ಈ ಸಲ ಬಿಜೆಪಿ ಗೆದ್ದು ಸೀಟುಗಳಷ್ಟು ಆಗಲಾರದು ಎಂದರು. ಕಳೆದ 10 ವರ್ಷಗಳಲ್ಲಿ ಅದು ಸದನದಲ್ಲಿ ಒಳ್ಳೆಯ ಚರ್ಚೆಗಳನ್ನೇ ಮಾಡಿಲ್ಲ. ಅದಕ್ಕಾಗಿಯೇ ಪ್ರತಿಪಕ್ಷದಲ್ಲೇ ಕುಳಿತುಕೊಳ್ಳಿ ಎಂದು ಜನ ದಾರಿ ತೋರಿಸಿದ್ದಾರೆ ಎಂದರು.

ಕಾಂಗ್ರೆಸ್‌ ಈ ದೇಶದ ಜನರನ್ನು ಅಪಮಾನಿಸಿದೆ. ಗೆದ್ದರೆ ಒಂದು ಲಕ್ಷ ರೂ. ಕೊಡುವುದಾಗಿ ಹೇಳಿದೆ. ಆದರೆ ಒಂದು ಲಕ್ಷ ಎಲ್ಲಿಂದ ತರುತ್ತಾರೆ ಎಂಬುದೇ ಅವರಿಗೆ ಗೊತ್ತಿಲ್ಲ. ಇದೀಗ ಜನ ತಮಗೆ ಒಂದು ಲಕ್ಷ ಕೊಡಿ ಎಂದು ಸಾಲುಗಟ್ಟಿದ್ದಾರೆ. ಆದರೆ ಅವರನ್ನು ಕಾಂಗ್ರೆಸ್‌ ಸರ್ಕಾರಗಳು ಬಡಿದೋಡಿಸುತ್ತಿವೆ. ಎನ್‌ಡಿಎ ಮೊದಲು ಹೇಗಿತ್ತೋ ಈಗಲೂ ಹಾಗೇ ಇದೆ.

HPR Institute Of Nursing And Paramedical Sciences & Friends Beke

ಜಾಹೀರಾತು

ಇಂಡಿ ಒಕ್ಕೂಟ ಮಾತ್ರ ಸುಳ್ಳುಗಳನ್ನೇ ಹರಡುತ್ತಾ ಹೋಗುತ್ತಿದೆ ಎಂದರು. NDA ಎಂದರೆ New ಇಂಡಿಯಾ, Develop ಇಂಡಿಯಾ, Aspirational ಇಂಡಿಯಾ ಎಂದು ಮೋದಿ ನುಡಿದರು. ಚುನಾವಣೆ ವೇಳೆ ಹೇಳಿದಂತೆ ಜನರ ಕೆಲಸಕ್ಕೆ ನಾವು ಸಿದ್ಧ. ಎನ್‌ಡಿಎ ಅಲ್ಲದೆ ಬೇರೆ ಯಾರ ಮೇಲೂ ಜನತೆಗೆ ವಿಶ್ವಾಸವಿಲ್ಲ. ಭ್ರಷ್ಟಾಚಾರಮುಕ್ತ ಆಡಳಿತ ನೀಡುವುದೇ ನಮ್ಮ ಗುರಿ. ಇದುವರೆಗಿನ 10 ವರ್ಷಗಳ ಆಡಳಿತ ಬರೀ ಟ್ರೇಲರ್‌ ಎಂದರು. ಮೂಲಸೌಕರ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಭಾರೀ ಬದಲಾವಣೆಗೆ ಎನ್‌ಡಿಎ ಮುನ್ನುಡಿ ಬರೆದಿದೆ; ಇನ್ನಷ್ಟು ಸಾಧಿಸಿ ತೋರಿಸಲಿದೆ. ಚುನಾವಣೆಯ ಸಮಯದಲ್ಲಿ ಪ್ರಧಾನಿ ಮೋದಿ ಸಂವಿಧಾನವನ್ನು ಬದಲಿಸಲು ಹೊರಟಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಇದೀಗ ಪ್ರಧಾನಿ ಮೋದಿ ಸಂವಿಧಾನಕ್ಕೆ ನಮಸ್ಕರಿಸುವ ಮೂಲಕ ಅಂತಃ ಯಾವುದೇ ನಿರ್ಧಾರವಿಲ್ಲ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.

SendShare66Share
Previous Post

ಕೋಡಿಂಬಾಡಿ: – ಜಮೀನಿಗೆ ಅನಧಿಕೃತವಾಗಿ ಪ್ರವೇಶಿಸಿ ಕಾನೂನು ಬಾಹಿರ ಚಟುವಟಿಕೆ ನಡೆಸಿರುವುದಾಗಿ ಆರೋಪಿಸಿ ಮಹಿಳೆ ದೂರು

Next Post

ಪುಣ್ಚಪ್ಪಾಡಿ ಗ್ರಾಮದಲ್ಲಿ ಕಾಡಾನೆ ಸಂಚಾರ, ಕೃಷಿ ಹಾನಿ; ಸ್ಥಳಾಂತರಕ್ಕೆ ಒತ್ತಾಯ!

Leave a Reply Cancel reply

Your email address will not be published. Required fields are marked *

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In