ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಸಾಂಸ್ಕೃತಿಕ ಭವನದಲ್ಲಿ ಸಂತೃಪ್ತರಾದ ವಿಧ್ಯಾರ್ಥಿಗಳು, ಭವಿಷ್ಯದ ಹಾದಿಯಲ್ಲಿ ಮುನ್ನಡೆಯಲು ಜ್ಞಾನ ದೀವಿಗೆ ಸನ್ಮಾನ ಕಾರ್ಯಕ್ರಮ ಇಂದು ನಡೆಯಿತು.
ಧಾರ್ಮಿಕತೆ, ಸೇವೆ, ಶಿಕ್ಷಣದ ತ್ರಿವಿಧ ಸೇವೆಯಲ್ಲಿ ದ.ಕ ಜಿಲ್ಲೆಯಲ್ಲಿ ಮನೆಮಾತಾಗಿರುವ ಧಾರ್ಮಿಕ ಸಂಸ್ಥೆ ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ವತಿಯಿಂದ ಎಸ್ ಎಸ್ ಎಲ್ ಸಿ, ಪಿಯುಸಿ ವಿಭಾಗದಲ್ಲಿ 90% ಅಧಿಕ ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ಜ್ಞಾನ ದೀವಿಗೆ 2024 ಪುರಸ್ಕಾರ ನಡೆಯಿತು.
ಈ ವಿಶೇಷ ಕಾರ್ಯಕ್ರಮದ ಉದ್ಘಾಟನೆಯನ್ನು ಕುಂಪಲ ಸರಕಾರಿ ಶಾಲೆಯಲ್ಲಿ ಕಲಿತು ಎರಡು ಬಾರಿ ಮಂದಿರದಲ್ಲಿ ಜ್ಞಾನ ದೀವಿಗೆ ಪ್ರಶಸ್ತಿ ಪುರಸ್ಕೃತ ಪ್ರಸ್ತುತ ಮೆರಿಟ್ ಮೇಲೆ ವೈಧ್ಯಕೀಯ ಶಿಕ್ಷಣ ಪಡೆಯುತ್ತಿರುವ ಸೆಲೆನ್ ಪ್ರೀತಿ ಪಿಂಟೋ, ಅತ್ಯಧಿಕ ಅಂಕಗಳಿಸಿದ ತನ್ವಿ ಎಸ್.ವಿ, ತನುಶ್ರೀ ಕಾರ್ಯಕ್ರಮ ಉದ್ಘಾಟಿಸಿದರು. ಮಂದಿರದ ಸ್ಥಾಪಕ ಅಧ್ಯಕ್ಷರು, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಅಭಿನಂದನಾ ಮಾತುಗಳನ್ನಾಡಿದರು.
ಮಂದಿರದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಎಸ್ ಕುಂಪಲ, ಪ್ರಸ್ತಾವನೆಗೈದರು ಮುಖ್ಯ ಅತಿಥಿಗಳಾಗಿ ದುರ್ಗಾಪರಮೇಶ್ವರಿ ಕ್ಷೇತ್ರದ ಪ್ರದಾನ ಅರ್ಚಕರಾದ ಭವಾನಿ ಶಂಕರ ಶಾಂತಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಅಧ್ಯಕ್ಷ ಗಣೇಶ್ ಅಂಚನ್, ಸಂಘಟನಾ ಕಾರ್ಯದರ್ಶಿ ರವೀಂದ್ರ ಕುಂಪಲ, ಸೋಮೇಶ್ವರ ಪುರಸಭಾ ಸದಸ್ಯರುಗಳಾದ ಮೋಹನ್ ಶೆಟ್ಟಿ ಕುಂಪಲ, ಜಯ ಪೂಜಾರಿ ಆಶ್ರಯ ಕಾಲನಿ, ದೇವಾನಂದ ಶೆಟ್ಟಿ, ಹರೀಶ್ ಕುಂಪಲ, ಮನೋಜ್ ಕಟ್ಟೆ ಮನೆ, ಕೊಲ್ಯ ಶಾರದಾ ಮಹೊತ್ಸವ ಸಮಿತಿಯ ರಾಜೇಶ್ ಕೆ.ಎಸ್, ಮಹಿಳಾ ಸಮಿತಿ ಅಧ್ಯಕ್ಷೆ ಮಮತಾ ಸತೀಶ್, ಮಂದಿರದ ಪದಾಧಿಕಾರಿಗಳಾದ ಪ್ರಹ್ಲಾದ್ ಕುಮಾರ್ ಇಂದಾಜೆ, ಜಗದೀಶ್ ಆಚಾರ್ಯ, ಆನಂದ ಎನ್ ಕುಂಪಲ, ಲಕ್ಷ್ಮಣ್ ಕಿರೋಡಿಯನ್, ವೆಂಕಟ ಕೃಷ್ಣಾನಂದ ಹೂಡೆ, ಮಹಾಬಲ ಬಂಗೇರ, ಚಂದ್ರಶೇಖರ್ ಬಿಜೆ, ಅಶೋಕ್ ಕೆ, ಚಂದ್ರಹಾಸ್ ಮೂರುಕಟ್ಟ, ಶಿವಾನಂದ ಟೈಲರ್, ಸತೀಶ್ ಚಿತ್ರಾಂಜಲಿ ನಗರ, ಕಿಶೋರ್ ಡಿಕೆ, ವೆಂಕಟೇಶ್ ಕುಂಪಲ, ಸೋಮಶೇಖರ್ ಜಗತಾಪ್, ಪಿ.ಚನಿಯ ನಾಯ್ಕ್, ಪ್ರಸಾದ್ ಕುಂಪಲ, ಪ್ರವೀಣ್ ಕುಲಾಲ್, ಹರೀಶ್ ಮೂರುಕಟ್ಟ, ಯಶವಂತ ಹನುಮಾನ್ ನಗರ, ದೀಕ್ಷಿತ್ ನಿಸರ್ಗ, ಸೂರಜ್ ಸಾಗರ್ ಮತ್ತು ಮಹಿಳಾ ಸಮಿತಿಯ ಪದಾದಿಕಾರಿಗಳು ಉಪಸ್ಥಿತರಿದ್ದರು.
ಪ್ರವೀಣ್ ಎಸ್ ಕುಂಪಲ ಸ್ವಾಗತಿಸಿದರು, ಕೃಷ್ಣ ಪೊನ್ನತೋಡು ಕಾರ್ಯಕ್ರಮ ನಿರ್ವಹಿಸಿ, ಗೋಪಲಾಕೃಷ್ಣ ರಾವ್ ಲಾಡ್ ವಂದಿಸಿದರು.