ಕಡಬ ತಾಲೂಕಿನ ಕೊಯಿಲ ಗ್ರಾಮಕ್ಕೆ ಕಾಡಾನೆ ಬರುವ ಕುರಿತು ಮುನ್ಸೂಚನೆ
ಕಾಡಿನಿಂದ ದಾರಿತಪ್ಪಿ ಬಂದಿರುವ ಕಾಡಾನೆಯೊಂದು ವೀರಮಂಗಳ ಪ್ರದೇಶದಲ್ಲಿ ತಿರುಗಾಡುತ್ತಿದ್ದು , ಯಾವುದೇ ಕ್ಷಣದಲ್ಲೂ ನದಿ ದಾಟಿ ಕೊಯಿಲ ಗ್ರಾಮಕ್ಕೆ ಪ್ರವೇಶ ಮಾಡುವ ಸಂದರ್ಭ ಇರುವುದರಿಂದ ಎಚ್ಚರಿಕೆಯಿಂದ ಇರಬೇಕಾಗಿ ವಿನಂತಿಸಲಾಗಿದೆ. ವೀರಮಂಗಲ ಮತ್ತು ಕೊಯಿಲ ಗ್ರಾಮ ನದಿ ತಟದ ಪ್ರದೇಶವಾಗಿದ್ದು ನದಿ ದಾಟಲು 500 ಮೀಟರ್ ದೂರ ಇರುವ ಕಾರಣ ಹಾಗೂ ಸದ್ಯ ಕುಮಾರಧಾರ ನದಿಯಲ್ಲಿ ನೀರಿಲ್ಲದೇ ಇರುವುದರಿಂದ ಆನೆ ದಾಟಲು ಸುಲಭ ದಾರಿಯಾಗಿದೆ.
ಜನವಸತಿ ಹೊಳೆಯ ಬದಿ ಹೆಚ್ಚಿರುವ ಕಾರಣ ಕೃಷಿ ಕೆಲಸ ಮಾಡುವಾಗ ಹಾಗೂ ಜನರು ರಾತ್ರಿ ಸಮಯದಲ್ಲಿ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ತಿಳಿಸಿದ್ದಾರೆ.