ಲೋಕಸಭಾ ಚುನಾವಣೆಯಲ್ಲಿ ತೆರವಾಗುವ ಕೋಟಾ ಅವರ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಎದುರಾಗುತ್ತಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪೈಪೋಟಿ ಆರಂಭವಾಗಿದೆ. ಜಾತಿ ಲೆಕ್ಕಾಚಾರ, ಪಕ್ಷದಲ್ಲಿನ ಹಿರಿತನ, ಜಾತಿ ಸಮೀಕರಣ, ಪಕ್ಷ ನಿಷ್ಠೆ ಎಲ್ಲವೂ ಗಣನೆಗೆ ತೆಗೆದುಕೊಂಡು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ.
ನಳೀನ್ ಕುಮಾರ್ ಕಟೀಲ್:
ಸಂಘದ ಗರಡಿಯಲ್ಲಿ ಪಳಗಿದ ಕಟೀಲ್ ದ ಕ ಜಿಲ್ಲೆಯಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇಡೀ ರಾಜ್ಯ ಪ್ರವಾಸ ಕೈಗೊಂಡು ಪಕ್ಷವನ್ನು ಸಂಘಟಿಸಿದ್ದರು ಸಹ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಮತವಾಗಿ ಪರಿವರ್ತನೆಯಾಗಲಿಲ್ಲ. ಆದರೆ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಪಕ್ಷ ಸಂಘಟಿಸಿದ ಕೀರ್ತಿ ಕಟೀಲ್ ಗೆ ಸಲ್ಲುತ್ತದೆ. ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿ ನಳೀನ್ ವಿರುದ್ಧ ಆಕ್ರೋಶವಿದ್ದ ಮತ್ತು ಪುತ್ತೂರಿನಲ್ಲಿ ಬಿಜೆಪಿಗೆ ಆಮದು ಅಭ್ಯರ್ಥಿ ಆಯ್ಕೆಯ ಸಮಯ ಪುತ್ತೂರು ಕ್ಷೇತ್ರದಲ್ಲಿ ಅರುಣ್ ಪುತ್ತಿಲ ಬಂಡಾಯವಾಗಿ ಸ್ಪರ್ಧಿಸಿ ಹೆಚ್ಚು ಮತ ಪಡೆದು ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಇದೇ ಆಕ್ರೋಶ ಲೋಕಸಭಾ ಚುನಾವಣೆಯಲ್ಲಿ ನಡೆಯುವ ಮುನ್ಸೂಚನೆಯ ಲೆಕ್ಕಾಚಾರದಲ್ಲಿ ಪಕ್ಷ ಅಭ್ಯರ್ಥಿ ಬದಲಾವಣೆ ಮಾಡಿ ಗೆಲುವಿನ ದಡ ಸೇರಿತಾದರು ಒಂದೊಮ್ಮೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಗೆಲುವು ಸಾಧಿಸಿರುತ್ತಿದ್ದರೆ ಮತ್ತೆ ನಳೀನ್ ಲೋಕಸಭಾ ಅಭ್ಯರ್ಥಿಯಾಗುತ್ತಿದ್ದರು ಎಂಬ ಮಾತು ಅಲ್ಲಗೆಳೆಯುವಂತಿಲ್ಲ. ಪ್ರಸ್ತುತ ಸಿಟಿ ರವಿ ಆಯ್ಕೆಯಾದ ಪರಿಷತ್ ಸ್ಥಾನಕ್ಕೆ ಕಟೀಲ್ ಹೆಸರು ಮುನ್ನಲೆಯಲ್ಲಿತ್ತಾದರು ಕಡೆ ಕ್ಷಣದಲ್ಲಿ ಕೈ ತಪ್ಪಿದೆ, ಆದರೆ ಕೋಟಾರಿಂದ ತೆರವಾದ ಪರಿಷತ್ ಸ್ಥಾನಕ್ಕೆ ಕಟೀಲ್ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದ್ದು ಒಂದೊಮ್ಮೆ ಈ ಸ್ಥಾನ ದೊರೆತರೆ ಯಶಸ್ವಿಯಾಗಿ ನಿಭಾಯಿಸುವ ಚಾಣಾಕ್ಷತೆ ಇವರಿಗಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಸುವರ್ಣರಿಗೆ ಒಳಿಯಬಹುದೇ ಪರಿಷತ್ ಸ್ಥಾನವೆಂಬ ಸ್ವರ್ಣ: ಈ ನಡುವೆ ಸಾರ್ವಜನಿಕ ವಲಯದಲ್ಲಿ ಸದಾ ಸಮಾಜ ಸೇವೆಯಲ್ಲಿ ತಮನ್ನು ತಾವು ತೊಡಗಿಸಿಕೊಳ್ಳುವ ಬಿಲ್ಲವ ಸಮುದಾಯದ ಶ್ರೀಮತಿ ಗೀತಾಂಜಲಿ ಸುವರ್ಣ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ರಾಜಕೀಯವಾಗಿ 2 ಬಾರಿ ಪಡುಬಿದ್ರಿ ಮತ್ತು ಕುರ್ಕಾಲುವಿನ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿ ಜನರ ಕಷ್ಟ ಸುಖದಲ್ಲಿ ಬೆರೆತವರು. ಕೊರೋಣ ಸಂಧರ್ಭದಲ್ಲಿ ಇವರ ಸೇವೆಯನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಿದ್ದು ಸಮಾಜ ಸೇವೆಗೆ ದಿನದ 24 ಗಂಟೆಯು ಸ್ಪಂದಿಸುವ ಗೀತಾಂಜಲಿ ಸುವರ್ಣ ಅವರಿಗೆ ಈ ಬಾರಿಯ ವಿಧಾನ ಪರಿಷತ್ ಸದಸ್ಯರಾಗಿ ಅವಕಾಶ ನೀಡಿದರೆ ಉಭಯ ಜಿಲ್ಲೆಗಳಿಗೆ ಮತ್ತು ಮಹಿಳೆಗೂ ಪ್ರಾಶಸ್ತ್ಯ ನೀಡಿದಂತಾಗುತ್ತದೆ. ಭಾರತೀಯ ಜನತಾ ಪಕ್ಷದಲ್ಲಿ ವಿವಿಧ ಜವಾಬ್ದಾರಿಯನ್ನು ವಹಿಸಿರುವ ಇವರು ಪಕ್ಷದ ಅದ್ವಿತೀಯ ಸಂಘಟಕಿಯು ಹೌದು,ಹಿರಿಯರು ನಾಯಕರ, ಪಕ್ಷದ ವರಿಷ್ಠರ ಗಮನಕ್ಕೆ ತರಬೇಕೆಂದು ಸಾರ್ವಜನಿಕರ ಹಾಗೂ ಕಾರ್ಯಕರ್ತರ ಅಭಿಪ್ರಾಯವಾಗಿದೆ. ಪದವೀಧರ ಕ್ಷೇತ್ರಕ್ಕೆ ಆಯ್ಕೆಗೊಂಡ ಡಾ.ಧನಂಜಯ ಸರ್ಜಿ ಆಯ್ಕೆಯಂತೆ ಹೊಸ ಹೆಸರು ಬಂದರು ಬರಬಹುದು ಆದರೆ ಯಾವುದೇ ವಿಚಾರ ಇದ್ದರು ಪಕ್ಷದ ಹೈಕಮಾಂಡ್ ತೀರ್ಮಾನದ ಮೂಲಕ ಯಾರಿಗೆ ಈ ಸ್ಥಾನ ಒಳಿಯಲಿದೆ ಎಂಬುದು ಕಾದು ನೋಡಬೇಕಾಗಿದೆ.