ಬೋಳಿಯಾರ್ ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿದ ಘಟನೆ ಬಗ್ಗೆ ಮಾತಾನಾಡಿದ ಖಾದರ್ ಈ ಘಟನೆಯಲ್ಲಿ ಮೆರವಣಿಗೆ ಎಲ್ಲವೂ ಆಗಿದೆ. ಮತ್ತೆ ಮೂರು ಜನ ಬೈಕ್‌ನಲ್ಲಿ ಬಂದು ಸಮಸ್ಯೆ ಮಾಡಿದ್ದಾರೆ. ಆ ಬಳಿಕ ಅವರು ಬೈಕ್‌ನಲ್ಲಿ ಬಂದು ಮತ್ತೆ ಹಲ್ಲೆ ಮಾಡಿರುವುದು ದೊಡ್ಡ ತಪ್ಪು. ‘ಭಾರತ್ ಮಾತಾ ಕೀ ಜೈ’ ಎಲ್ಲೂ ಕೂಡ ಹೇಳಬಹುದು. ರಸ್ತೆ, ಮಸೀದಿ, ಎಲ್ಲೂ ನಾವು ಘೋಷಣೆ ಕೂಗಬಹುದು. ಯಾಕೆಂದರೆ ಜಾತ್ಯಾತೀತ ಸರ್ವ ಧರ್ಮ ಸಮನ್ವಯ ದೇಶ ಭಾರತ ಆದರೆ, ಅವರು ಏನು ಹೇಳಿದ್ದಾರೆ ಎಂಬ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಬಗ್ಗೆ ಹೊರಗಿನವರು ಬಂದು ಮಾತನಾಡುವ ಅಗತ್ಯ ಇಲ್ಲ. ಎರಡೂ ಕಡೆಯ ತಪ್ಪಿನ ಬಗ್ಗೆ ಪೊಲೀಸರು ಸಿಸಿಟಿವಿ ನೋಡಿ ಕ್ರಮ ಕೈಗೊಳ್ಳುತ್ತಾರೆ. ಶಾಸಕನಾಗಿ ಶೇ 99ರಷ್ಟು ಸತ್ಪ್ರಜೆಗಳನ್ನ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಉಳಿದ ಶೇ 1 ರಷ್ಟು ಕೆಟ್ಟ ಜನರನ್ನು ಪೊಲೀಸರು ನೋಡಿಕೊಳ್ಳುತ್ತಾರೆ ಎಂದು ಆಸ್ಪತ್ರೆಗೆ ಬೇಟಿ ನೀಡದೇ ಇರುವುದನ್ನು ಖಾದರ್ ಸಮರ್ಥಿಸಿಕೊಂಡರು.
ಇಲ್ಲಿ ರಾಜಕೀಯ ಮಾಡಿದ್ರೆ ಯಾರಿಗೂ ಒಂದು ಓಟ್ ಹೆಚ್ಚಾಗಲ್ಲ. ಯಾವುದೇ ಪಕ್ಷಕ್ಕೂ ಅಲ್ಲಿ ಓಟ್ ಹೆಚ್ಚಾಗಲ್ಲ. ಎರಡು ಪಕ್ಷಗಳು ಸೇರಿ ನನ್ನನ್ನು ಚುನಾವಣೆಯಲ್ಲಿ ಸೋಲಿಸಲು ಪ್ರಯತ್ನಪಟ್ಟರು. ಅವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ನಾನೀಗ ಸ್ಪೀಕರ್, ಹಾಗಾಗಿ ಯಾವುದೇ ಪಕ್ಷದ ಹೆಸರು ಹೇಳಲ್ಲ. ಈ ವಿಚಾರ ಸುಮ್ಮನೆ ದೊಡ್ಡದು ಮಾಡುವವರೇ ದೇಶದ್ರೋಹಿಗಳು. ಪೊಲೀಸರಿಗೆ ಕೆಲಸ ಮಾಡಲು ಬಿಡಿ, ಅವರು ಎಲ್ಲವನ್ನೂ ಸರಿ ಮಾಡುತ್ತಾರೆ ಎಂದರು.
ಬೋಳಿಯಾರ್ ಎಂಬುದು ಸಹೋದರತೆ ಇರುವ ಊರು. ಕೆಲವೇ ಕೆಲವು ಯುವಕರಿಂದ ಅಲ್ಲಿ ಕೆಟ್ಟ ಹೆಸರು ಬಂದಿದೆ. ಅದನ್ನು ಅಲ್ಲಿನವರು, ಊರಿನವರೇ ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ. ದಯವಿಟ್ಟು ಹೊರಗಿನವರು ಯಾರೂ ಶಾಂತಿ ಕೆಡಿಸಬೇಡಿ. ಹೊರಗಿನವರು ಬಾಯಿ ಮುಚ್ಚಿ ಕೂರುವುದೇ ದೇಶ ಪ್ರೇಮ. ಹೊರಗಿನವರು ಬೋಳಿಯಾರ್ನಲ್ಲಿ ಬೆಂಕಿ ಹಚ್ಚುವುದು ಬೇಡ ಎಂದಿದ್ದಾರೆ.