ಪುತ್ತೂರು ಉಪ್ಪಿನಂಗಡಿ ರಾಜ್ಯ ರಸ್ತೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ.ಅದರಂತೆ ಮಳೆಗಾಲ ಆರಂಭವಾಗಿದ್ದು ಇದೇ ರಸ್ತೆಯ ಬನ್ನೂರು ಗ್ರಾಮ ಪಂಚಾಯತ್ ಎದುರು ಅವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಾಣ ಭರದಿಂದ ಸಾಗುತ್ತಿದೆ. ಕಾನೂನಿನ್ವಯವಾಗಿ ರಸ್ತೆಯ ಮಾರ್ಜಿನ್ ನಿಂದ ಹೊರಗಡೆ ಕಾಲುದಾರಿ ನಿರ್ಮಿಸಿಕೊಡುವುದು ನಿಯಮವಾಗಿರುತ್ತದೆ.ಆದರೆ ಇಲ್ಲಿ ಒಂದೂವರೆ ಮೀಟರ್ ಕೂಡ ಬಿಡದೇ ಚರಂಡಿ ನಿರ್ಮಾಣ ಕೆಲಸ ನಡೆಯುತ್ತಿದೆ.
ಹಾಗಾದರೆ ಇದನ್ನು ಗುತ್ತಿಗೆ ಪಡೆದವರಿಗೆ ಅರಿವಿಲ್ಲವೇ ಎಂಬುದನ್ನು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಪ್ರಸ್ತುತ ಈಗ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯ ಚರಂಡಿಗೂ ಹಾಗೂ ಈ ಮೊದಲಿರುವ ಚರಂಡಿಯ ನಡುವೆ ಅಜಾಗಜಾಂತರ ವ್ಯತ್ಯಾಸ ಕಾಣುತ್ತದೆ.ಇದೇ ಕೆಲಸ ಮುಂದುವರಿದಲ್ಲಿ ಜನರಿಗೆ ನಡೆದುಕೊಂಡು ಹೋಗುವುದು ಕಷ್ಟಕರ.ಜೊತೆಗೆ ಈ ಚರಂಡಿಗಳ ಸಂಪರ್ಕ ಯಾವ ರೀತಿಯಲ್ಲಿ ಮಾಡುತ್ತಾರೆ ಎಂಬುದೇ ಯಕ್ಷ ಪ್ರಶ್ನೆ. (ಪೋಟೋ ಕೃಪೆ: ವಿಷ್ಣು ಸ್ಟುಡಿಯೋ )
ಒಂದೊಮ್ಮೆ ಕಾಮಗಾರಿ ನಡೆದು ಅದರ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಅಳವಡಿಸಿ ಕೊಟ್ಟರು ಸಹ ಇದರ ಲಾರಿ ಅಥವಾ ಬೇರೆ ಯಾವುದಾದರು ಘನ ವಾಹನ ಚಲಿಸಿದರೆ ಮುರಿದು ಬಿದ್ದೇ ಬೀಳುತ್ತದೆ. ಇದರ ಬಗ್ಗೆ ಸ್ಥಳೀಯ ನಿವಾಸಿಗಳು ತಿಳಿಸಿದರು ಸಹ ಮಾತಿಗೆ ಬೆಲೆ ನೀಡದೆ ಕೆಲಸ ನಡೆಯುತ್ತಲೆ ಇದೆ.
ರಾಜ ರಸ್ತೆಯ ಕೆಲಸ ಕಾರ್ಯಗಳ ಬಗ್ಗೆ ಇಲಾಖೆಗೆ ಮಾಹಿತಿ ಇಲ್ಲವೇ..? :- ಅವೈಜ್ಞಾನಿಕವಾಗಿ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳುವ ಕೆಲಸ ನಡೆಯುತ್ತಿದ್ದರು ಸಂಬಂಧಿಸಿದ ಇಲಾಖೆಗಳು ಕಣ್ಣಿದ್ದು ಕುರುಡರಂತೆ ವರ್ತಿಸಿದರೆ ಜನರ ಸಮಸ್ಯೆಯನ್ನು ಪರಿಹರಿಸಿಕೊಡುವವರು, ಹಾಗಾದರೆ ಸರಕಾರದ ಅಥವಾ ಇಲಾಖೆಯ ಅನುಮತಿ ಇಲ್ಲದೇ ಏನೂ ಬೇಕಾದರೂ ಮಾಡಬಹುದೇ ಎಂಬುದು ಜನರ ಬಹುದೊಡ್ಡ ಪ್ರಶ್ನೆಯಾಗಿದೆ. ಮತ್ತು ಸರಿಯಾದ ರೀತಿಯಲ್ಲಿ ಜನರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸುವಂತೆ ಸಾರ್ವಜನಿಕ ತಮ್ಮ ಅಳಲು ತೊಡಿಕೊಂಡಿದ್ದಾರೆ.