ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಸರಕಾರಿ ಪ್ರೌಢ ಶಾಲೆಯಲ್ಲಿ ಯೋಗ ದಿನಾಚರಣೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಶಾಲಾ ಮುಖ್ಯೋಪಾಧ್ಯಾಯರಾದ ವಿಷ್ಣು ಪ್ರಸಾದ್ ಯೋಗದಿಂದ ದೈನಂದಿನ ಬದುಕು ಸದೃಢವಾಗುತ್ತದೆ ಹಾಗೂ ಮಹತ್ವ ತಿಳಿಸಿದರು.
ಎಸ್ ಡಿ ಎಂ ಸಿ ಅಧ್ಯಕ್ಷರ ಪ್ರಕಾಶ್ ಮಾತಾನಾಡಿ ಮಕ್ಕಳಿಗೆ ಏಕಾಗ್ರತೆ ಮತ್ತು ಬುದ್ದಿ ಶಕ್ತಿಯನ್ನು ಹೆಚ್ಚಿಸಲು ಯೋಗ ಮಾಡಬೇಕು ಎಂದರು. ದೈಹಿಕ ಶಿಕ್ಷಣ ಶಿಕ್ಷಕಿ ನಿರ್ಮಲ ಮಕ್ಕಳಿಗೆ ಯೋಗಾಭ್ಯಾಸ ನಡೆಸಿಕೊಟ್ಟರು ಹಾಗೂ ಶಾಲಾ ಶಿಕ್ಷಕರಾದ ಲಿಂಗಪ್ಪ, ಶಿಕ್ಷಕಿಯರಾದ ಧನಲಕ್ಷ್ಮಿ, ಜ್ಯೋತಿ ರಾಣಿ, ದೀಪ, ಶಾರದ ಉಪಸ್ಥಿತರಿದ್ದರು